ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


190 ಕಥಾಸಂಗ್ರಹ-೪ ನೆಯ ಭಾಗ ರನ್ನು ಮೆಚ್ಚಿಸುವ ಮಹಾತ್ಮಳಾದ ಸ್ತ್ರೀಯು ಲೋಕದಲ್ಲಿ ಈ ಸೀತೆಗಿಂತಲೂ ಬೇರೆ ಯಾರಿರುವರೋ ತಿಳಿಯದು ! ಸ್ವಭಾವವಾಗಿ ಅ೦ಗದಲ್ಲಿಯ ಮನಸ್ಸಿನಲ್ಲಿಯ ಮೃದುತ್ವವುಳ್ಳವರಾದ ಅಬಲೆಯರು ಸ್ವಭಾವವಾಗಿ ಮನೋದೇಯೋಭಯ ಕಾಠಿಣ್ಯ ಯುಕ್ತರಾದ ಪುರುಷರನ್ನು ಅನುವರ್ತಿಸಿ ಸಹಧರ್ಮಿಣೀತ್ಯದಿಂದ ಬಾಳುವುದು ಸಾಧಾರಣವಾದುದಲ್ಲ ಎಂದು ವಿವಿಧವಾಗಿ ಹೇಳಿಕೊಳ್ಳುತ್ತ ಪರಿತಾಪಮಯ ಚಿತ್ರ ವುಳ್ಳವರಾಗಿದ್ದರು. ಅತ್ತ ಹಾಗಿರಲು, ಇತ್ತ ಜಾನಕಿಯು ಭಯಭರಿತ ಭಕ್ತಿಯುಕ್ತಳಾಗಿ ನಿಜಪ ತಿಯಾದ ಶ್ರೀ ರಾಮನಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ ಧಗದ್ಧ ಗಾಯಮಾ ನವಾಗಿ ಉರಿಯುತ್ತಿರುವ ಚಿತಾಗ್ನಿ ಯ ಬಳಿಗೆ ಬಂದು ಮೂರುಸಾರಿ ಪ್ರದಕ್ಷಿಣ ವನ್ನು ಮಾಡಿ ನಮಸ್ಕರಿಸಿ ಕೈಮುಗಿದು ನಿಂತುಕೊಂಡು ನಾನು ಮನೋವಾಕ್ಕಾಯ ಕರ್ಮಗಳಿಂದಲೂ ಶ್ರೀರಾಮನನ್ನಲ್ಲದೆ ಪರಪುರುಷನನ್ನು ಅಪೇಕ್ಷಿಸಿದವಳಾಗಿದ್ದರೆ ಈ ಅಗ್ನಿ ದೇವತೆಯು ನನ್ನನ್ನು ಸುಟ್ಟು ಬೂದಿಮಾಡಿ ಬಿಡಲಿ ! ಇಲ್ಲದಿದ್ದರೆ ಕಾಪಾಡಲಿ ! ಎಂದು ಮನಸ್ಸಿನಲ್ಲಿ ರಾಮನಡಿದಾವರೆಗಳನ್ನು ಧ್ಯಾನಿಸುತ್ತ ಬೆಂಕಿಯಲ್ಲಿ ಬಿದ್ದಳು. ಆಗ ಸಕಲ ಕಪಿಸೇನೆಗಳೂ ವಿಮಾನಸ್ಥರಾದ ದೇವತೆಗಳೂ ಖೋ! ಎಂದು ಕೂಗಿ ರೋದಿಸಿದರು. ತರುವಾಯ ಅಗ್ನಿ ದೇವನು ನಿಜರೂಪವನ್ನು ಧರಿಸಿ ಬಂದು ಸೀತೆಯು ಮುಡಿದ ಹೂವುಗಳು ಬಾಡದಂತೆಯೂ ಉಟ್ಟು ತೊಟ್ಟಿದ್ದ ದಿವ್ಯ ವಸ್ತ್ರಾಭರಣಗಳ ಕಳೆಯು ಕುಂದದಂತೆಯ ಎಚ್ಚರಿಕೆಯಿಂದ ರಕ್ಷಿಸಿ ಸರ್ವಾಲಂಕಾರಭೂಷಿತೆಯಾದ ಸೀತೆಯನ್ನು ಎತ್ತಿ ಕೊಂಡು ಚಿತಾಗ್ನಿ ಮಧ್ಯದಿಂದ ಹೊರಟು ಶ್ರೀರಾಮನ ಸನ್ನಿಧಿಗೆ ಬಂದು.-ಎಲೈ ಪರಿಶುದ್ಧನಾದ ಶ್ರೀರಾಮನೇ ! ನೀನು ಲೋಕದವರಂತೆ ನಿಜವಾಗಿ ಮನುಷ್ಯನೇ ? ದುಷ್ಟನಾದ ರಾವಣನನ್ನು ಕೊಂದು ಲೋಕದಲ್ಲಿ ಧರ್ಮಸ: ಸ್ಥಾಪನವ ನ್ನು ಮಾಡುವುದಕ್ಕಾಗಿ ಮನುಷ್ಯಾವತಾರದಿಂದ ಬಂದ ಮಹಾ ವಿಷ್ಣು ವಲ್ಲವೇ ? ಈ ಸೀತೆಯು ಸಾಮಾನ್ಯ ಸ್ತ್ರೀಯರಂತೆ ಮಾನುಷಿಯೇ ? ಸರ್ವವಿಧದಿಂದಲೂ ನಿನ್ನನ್ನು ಅನುಸರಿಸುವವಳಾಗಿ ನರರೂಪವನ್ನು ಧರಿಸಿ ಬಂದ ಸಾಕ್ಷಾಲಕ್ಷ್ಮಿದೇವಿಯ ಲ್ಲವೇ ? ಸರ್ವಜ್ಞನಾದ ನೀನು ಪ್ರಾಕೃತ ಮನುಷ್ಯರಂತೆ ನಟಿಸಬೇಡ, ಪರಿಶುದ್ಧ ಸ್ವಭಾ ವಳಾದ ಈ ಸೀತೆಯನ್ನು ನಿಸ್ಸಂದೇಹಚಿತ್ರದಿಂದ ಪರಿಗ್ರಹಿಸು ಎಂದು ಹೇಳಿ ಆಕೆ ಯನ್ನು ರಾಮನ ಸನ್ನಿಧಿಯಲ್ಲಿ ಬಿಟ್ಟು ತಾನು ತತ್‌ಕ್ಷಣದಲ್ಲೇ ಅದೃಶ್ಯನಾದನು. - ಅನಂತರದಲ್ಲಿ ಬ್ರಹ್ಮರುದ್ರೇ೦ದ್ರರೇ ಮೊದಲಾದ ಸಕಲ ದೇವತೆಗಳು ತಮ್ಮ ತಮ್ಮ ವಿಮಾನಗಳನ್ನೇರಿಕೊಂಡು ರಾಮನ ಬಳಿಗೆ ಬಂದು ಬಹು ಪ್ರಕಾರವಾಗಿ. ಶ್ಲಾಘಿಸಿ ಆತನನ್ನು ಕುರಿತು.--ಎಲೈ ಶ್ರೀರಾಮಚಂದ್ರನೇ, ಈ ಜಾನಕಿಯ ನೀನೂ ಜಗತ್ತಿನಲ್ಲಿ ಪಾಪವನ್ನು ವಿನಾಶಮಾಡುವುದಕ್ಕಾಗಿಯ ಧರ್ಮವನ್ನು ನೆಲೆ ಗೊಳಿಸುವುದಕ್ಕಾಗಿಯೂ ಅವತರಿಸಿದವರಲ್ಲವೇ ? ನೀನು ಮಹಾ ವಿಷ್ಣು ವಾಗಿ ಈ ಮಹಾ ಲಕ್ಷ್ಮಿಯಾಗಿರುವ ಸೀತೆಯಲ್ಲಿ ಈ ರೀತಿಯಾಗಿ ಸಂದೇಹಪಟ್ಟು ದರಿಂದ ಜಗ ಜನರು ತಾವೂ ಲೋಕಾಪವಾದಕ್ಕೆ ಅಂಜಿ ನಡೆಯಬೇಕೆಂದು ತಿಳಿದಂತಾಯಿತು. ಈ