ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


193 ಒ೬ ರಾಮನ ಪಟ್ಟಾಭಿಷೇಕವು ಸಿದ್ಧ ಪಡಿಸುತ್ತಿರುವ ದೇವಸ್ತ್ರೀಯರುಗಳಿಂದಲೂ ಇನ್ನೂ ಅಗತ್ಯವಾದ ಅನೇಕ ಸಾಮ ಗ್ರಿಗಳಿಂದಲೂ ಕೂಡಿ ಶೋಭಿಸುತ್ತಿರುವ ವಿಮಾನವನ್ನು ನೋಡಿ ಅತ್ಯಾಶ್ಚರ್ಯಪಟ್ಟು ಅದರ ಮೇಲೆ ತಾನು ಮೊದಲು ಏರಿ ಆ ಮೇಲೆ ಹಸ್ತವನ್ನು ಕೊಟ್ಟು ಸೀತೆಯನ್ನು ಮೇಲೇರಿಸಿ ತನ್ನ ಎಡದೊಡೆಯ ಮೇಲೆ ಕುಳ್ಳಿರಿಸಿಕೊಂಡನು. ತರುವಾಯ ಲಕ್ಷ್ಯ ಣನು ಧನುರ್ಬಾಣಗಳನ್ನು ತೆಗೆದುಕೊಂಡು ವಿಮಾನವನ್ನು ಹತ್ತಿ ರಾಮನ ಹಿಂದು ಗಡೆಯಲ್ಲಿ ಕೂತು ಕೊಂಡನು. ಅನಂತರದಲ್ಲಿ ಶ್ರೀರಾಮನ ಆಜ್ಞಾನುಸಾರವಾಗಿ ವಾನರ ಚಕ್ರೇಶ್ವರನಾದ ಸುಗ್ರೀವನೂ ಯುವರಾಜನಾದ ಅಂಗದನೂ ನೀಲ ನಳಾಂ ಜನೇಯಾದಿ ವಾನರ ಸೇನಾಪತಿಗಳೂ ತಮ್ಮ ತಮ್ಮ ಸೇನೆಗಳೊಡನೆ ಪುಷ್ಪಕವನ್ನು ಹತ್ತಿದರು. ಆ ವಿಮಾನವು ಇಷ್ಟು ಪರಿವಾರಪರಿಪೂರಿತವಾಗಿದ್ದರೂ ಅದರಲ್ಲಿ ಸ್ಥಳವು ಇನ್ನೂ ತೆರಪಾಗಿಯೇ ಇದ್ದಿತು. “ಆ ಮೇಲೆ ದೇವತೆಗಳು ದೇವದುಂದುಭಿಗಳನ್ನು ಬಾರಿಸಿ ಪುಷ್ಪವೃಷ್ಟಿಯನ್ನು ಸುರಿಸಿದರು. ಅನಂತರದಲ್ಲಿ ಆ ವಿಮಾನವು ಶ್ರೀರಾಮನ ಆಜ್ಞಾನುಸಾರವಾಗಿ ಆಕಾಶ ಮಾರ್ಗಕ್ಕೆ ಏರಿ ಹೊರಟು ಕಪಿರಾಜಧಾನಿಯಾದ ಕಿಪ್ಪಿಂಧಾಪಟ್ಟಣದ ಬಳಿಗೆ ಬರಲು; ಆಗ ಸೀತೆಯು ರಾಮನನ್ನು ನೋಡಿ ಮಾತಾಡುವಷ್ಟರಲ್ಲಿಯೇ ರುಮೆ ತಾರೆಯರೇ ಮೊದಲಾದ ವಾನರ ನಾರಿಯರು ಮೊದಲಿದ್ದ ತಮ್ಮ ವಾನರಾಕಾರಗಳನ್ನು ಬಿಟ್ಟು ಮನೋಜ್ಞ ಮಾನುಷ ಸ್ತ್ರೀ ರೂಪಗಳನ್ನು ಧರಿಸಿ ಸರ್ವಾಲಂಕಾರಶೋಭಿತೆಯರಾಗಿ ಅತ್ಯುತ್ತಮವಾದ ಪುಷ್ಟ ಫಲಾದಿಗಳನ್ನು ತೆಗೆದುಕೊಂಡು ಎದುರಾಗಿ ಬಂದು ಸೀತೆಗೆ ಕೈಗಾಣಿಕೆಯನ್ನು ಒಪ್ಪಿಸಿ ಮೊದಲು ರಾವಣನು ತೆಗೆದು ಕೊಂಡು ಹೋಗುವಾಗ ಸೀತೆಯು ಬೀಸಾಡಿದ್ದ ಆಭರಣಗಳನ್ನು ಆಕೆಗೆ ಧರಿಸಿ ಶೃಂಗರಿಸಿದರು. ಆಗ ಸೀತಾ ದೇವಿಯು ಪರಮಸಂತೋಷದಿಂದ ಕೂಡಿದವಳಾಗಿ ತಾರಾ ರುಮಾದಿ ವಾನರ ನಾರಿಯರನ್ನು ಆಲಿಂಗಿಸಿ ಮನ್ನಿಸಿದಳು. ಆ ಬಳಿಕ ಸುಗ್ರೀವನೆದ್ದು ರಾಮನಿಗೆ ಸಾಷ್ಟಾಂಗಪ್ರಣತನಾಗಿ-ಜೀಯಾ ಮಹಾತ್ಮನೇ, ಈ ರಾತ್ರಿಯಲ್ಲಿ ನಮ್ಮ ಪಟ್ಟಣ ದಲ್ಲಿದ್ದು ಸೇವಕನಾದ ನನ್ನ ಪೂಜೆಯನ್ನು ಕೃಪೆಯಿಂದ ಸ್ವೀಕರಿಸಿ ನಮ್ಮೆಲ್ಲರನ್ನೂ ಕೃತಾರ್ಥರನ್ನು ಮಾಡಿ ನಾಳಿನ ಪ್ರಾತಃಕಾಲದಲ್ಲಿ ಪ್ರಯಾಣಮಾಡಬೇಕೆಂದು ಬೇಡಿಕೊಳ್ಳಲು ; ಆಗ ಶ್ರೀರಾಮನು ಸುಗ್ರೀವನನ್ನು ಕುರಿತು-ಅಯ್ಯಾ ಪರಮ ಪ್ರಿಯನಾದ ವಾನರ ಚಕ್ರವರ್ತಿಯೇ, ನಿನ್ನ ಹಾಗೆ ನಮಗೆ ಸತ್ಕಾರವನ್ನು ಮಾಡಿದ ವರು ಯಾರುಂಟು ? ಇದೇನು ಔಪಚಾರಿಕವೇ ? ಎಂದಿಗೂ ಅಲ : ಮಹಾತ ನಾದ ನೀನು ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯಲಾರೆನು, ಮೊದಲು ಹೋಗಿದ್ದ ನನ್ನ ಅಭಿಮಾನವು ಯಾರ ದೆಸೆಯಿಂದ ಕೈಗೂಡಿತು ? ನಾನು ಒಂದು ನಾಲಿಗೆಯಿಂದ ಅಸದೃಶವಾದ ನಿನ್ನ ಸಹಾಯಾಧಿಕ್ಯವನ್ನು ಹೊಗಳಲಾರೆನು, ನನ್ನ ತಮ್ಮನಾದ ಭರತನು ಈ ದಿನದಲ್ಲಿ ನನ್ನನ್ನು ಕಾಣದೆಹೋದರೆ ಅಗ್ನಿ ಪ್ರವೇಶವನ್ನು ಮಾಡಿ ದೇಹವನ್ನು ತೊರೆದು ಕೊಳ್ಳುವನು. ಈ ರೀತಿಯಾಗಿ ಆತನು ಪ್ರಥಮ ದಲ್ಲೇ ನನ್ನೆದುರಿಗೆ ಪ್ರತಿಜ್ಞೆಯನ್ನು ಮಾಡಿರುವನು. ಅದು ಕಾರಣ ನಿನ್ನ ಅಂತಃಪುರ ಸ್ತ್ರೀ 13