ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮನ ಪಟ್ಟಾಭಿಷೇಕವು 199 ವಾದ ಕೆಂಬಣ್ಣದಿಂದ ಕೂಡಿದ ದಿವಾಕರಮಂಡಲವು ಅಸ್ತಗಿರಿಯ ಶಿಖರ ಪ್ರಾಂತದಲ್ಲಿ ಪರಿಶೋಭಿಸಿತು. ಧರ್ಮಸ್ವರೂಪನಾದ ಶ್ರೀರಾಮನು ಇನ್ನು ಮೇಲೆ ರಾಜ್ಯ ರಕ್ಷಣೆಗೆ ಬರುವನು. ಅದು ಕಾರಣ ನಾವೆಲ್ಲರೂ ವೃಥಾ ಪರಿಭ್ರಮಣಾಯಾಸವನ್ನು ಬಿಟ್ಟು ಸ್ವಸ್ಥತೆಯಿಂದಿರುವಣ ಎಂದು ಉಲ್ಲಾಸದಿಂದ ಕೂಡಿ ಪಕ್ಷಸಮೂಹವೆಲ್ಲವೂ ಸೇರಿ ಹರ್ಷಧ್ವನಿಯನ್ನು ಮಾಡುತ್ತಿವೆಯೋ ಎಂಬಂತೆ ಆ ಸಂಧ್ಯಾ ವೇಳೆಯಲ್ಲಿ ತಮ್ಮ ತಮ್ಮ ಗೂಡುಗಳನ್ನು ಕುರಿತು ತೆರಳುತ್ತಿರುವ ಪಕ್ಷಿಗಳ ಬಳಗವು ಕಾಣಿಸುತ್ತಿದ್ದಿತು. ಕೂಡಲೆ ವಿಹಂಗಮಸಂಕುಲದ ಕಲಕಲವು ತಪ್ಪಿ ಹೋಗಲು ; ಆಗ ಆ ಖಗಸಂಕುಲವು ಮಾತಿನಿಂದ ಶ್ರೀರಾಮ ಯಶೋವಿಸ್ತಾರವನ್ನು ಹೊಗಳಿ ದಣಿದು ಮನಸ್ಸಿನಿಂದ ಯೋಚಿಸುತ್ತಿರುವುದೋ ಎಂಬಂತಿದ್ದಿತು. ಕಡಲೆ ಧರ್ಮಾತ್ಮನಾದ ಶ್ರೀರಾಮನ ಕೀರ್ತಿಯು ಮೊದಲು ಅಂಕುರರೂಪದಿಂದ ಸರ್ವಮಂದಿರಾಂತಃಪ್ರದೇಶಗಳನ್ನು ಪ್ರವೇಶಿಸಿತೋ ಎಂಬಂತೆ ಸಂಧ್ಯಾ ದೀಪಗಳು ಶೋಭಿಸಿದುವು. ನಿಜಕಾಂತನಾದ ದಿವಾ ಕರನು ಹೊರಟುಹೋಗಲು ಪರಪುರುಷನಾದ ಚಂದ್ರನನ್ನು ನೇತ್ರಗಳಿಂದಲೂ ನೋಡ ಬಾರದೆಂದು ಪರಿಶುದ್ಧ ಭಾವದಿಂದ ಕೂಡಿದ ಕಮಲಿನೀನಾರಿಯರು ಕಣ್ಮುಚ್ಚುತ್ತಿರು ವರೋ ಎಂಬಂತೆ ಸರೋವರಗಳಲ್ಲಿ ಕಮಲಗಳೆಲ್ಲಾ ಮುಗಿಯುತ್ತಿದ್ದುವು. ಕಡಲೆ ರಾತ್ರಿಯೆಂಬ ರಮಣಿಯು ನಿಜಕಾಂತನಾದ ಚಂದ್ರನನ್ನು ಕೊಡುವುದಕ್ಕೋಸ್ಕರ ರಮಣೀಯವಾದ ಕುಸುಂಬೆ ಬಣ್ಣದ ಸೀರೆಯನ್ನು ಟ್ಟು ಸಂಜೆಗೆಂಪೆಂಬ ಕುಪ್ಪಸ ವನ್ನು ತೊಟ್ಟು ಮಲ್ಲಿಗೆಯ ಹೂವುಗಳನ್ನು ಧರಿಸಿ ಬರುತ್ತಿರುವಳೋ ಎಂಬ ಹಾಗೆ ವಿವಿಧವರ್ಣದಿಂದ ಕೂಡಿ ನಕ್ಷತ್ರಗಳಿ೦ದ ಒಪ್ಪುತ್ತಿರುವ ಸಾಯಂಸಂಧ್ಯಾ ಸಮಯವು ವರ್ಣನಾತೀತವಾಗಿದ್ದಿತು. ಕೂಡಲೆ ಅಂಧಕಾರವು ಭೂಲೋಕವನ್ನು ವ್ಯಾಪಿಸಿ ಕೊಂಡು ಈ ಶ್ರೀರಾಮನು ನನ್ನ ಆಶ್ರಯದಿಂದ ಜೀವಿಸುತ್ತಿದ್ದ ನಿಶಾಚರ ಚಕ್ರ ಶ್ವರನಾದ ರಾವಣನನ್ನು ಅವನ ಪರಿವಾರಸಮೇತವಾಗಿ ಸಂಹರಿಸಿದನು, ಅದು ಕಾರಣ ಇವನ ದೇಶವನ್ನು ಕವಿದು ಕಾಣದಂತೆ ಮಾಡುವೆನು ಎಂಬಂತೆ ತಮಃಪಟಲವು ಒಪ್ಪುತ್ತಿದ್ದಿತು. ಮಹಾತ್ಮನಾದ ರಾಮನ ಕೀರ್ತಿಯು ನನಗಿಂತಲೂ ಅತಿನಿರ್ಮಲವೂ ಅಪಾರವೂ ಉಳ್ಳುದಾಗಿದೆ ಎಂಬುದಾಗಿ ಹೇಳುತ್ತಾರೆ. ಈ ಸಂಗತಿಯನ್ನು ನಾನೇ ಹೋಗಿ ಪ್ರತ್ಯಕ್ಷವಾಗಿ ನೋಡಿಬರಬೇಕೆಂಬ ಉದ್ದೇಶದಿಂದ ಚಂದ್ರನೇ ಬರುತ್ತಿರುವನೋ ಎಂಬಂತೆ ಉದಯಶಿಖರಿಯ ಶಿಖರಪ್ರಾಂತದಲ್ಲಿ ಚಂದ್ರೋದಯಸೂಚಕವಾದ ಬೆಳಕು ಹೊಳೆಯುತ್ತಿದ್ದಿತು, ಪೂರ್ವಾಶಾಗಣಿಕೆಯು ತನ್ನ ರೂಪವು ಲೋಕರಂಜಕರಾದ ಮಹಾಪುರುಷರ ಮನಸ್ಯಪ್ತಿಗೆ ಸಾಕಾಗಿರುವುದೋ ಎಂದು ಅತ್ಯುತ್ತಮ ದರ್ಪಣ ವನ್ನು ಹಿಡಿದು ನೋಡುತ್ತಿರುವಳೋ ಎಂಬಂತೆ ಉದಯಿಸಿ ಬರುತ್ತಿರುವ ಚಂದ್ರಮಂ ಡಲವು ಮಂಗಳಕರವಾಗಿದ್ದಿತು. ಇದು ಚಂದ್ರಬಿಂಬವಲ್ಲ ವು, ಪೂರ್ವಾಶಾನಾರಿಯ ಮುಖಮಂಡಲವು, ಮೊಳೆತು ಹಬ್ಬುತ್ತಿರುವುದು, ಚಂದ್ರಿಕೆಯಲ್ಲವ, ಹರಿದಿಗಂಗನೆಯ ಲೋಕಮೋಹನಕರವಾದ ಮುಗುಳ್ಳ ಗೆಯ ಕಾಂತಿಯು, ಮೇಲೆ ಕಾಣುವುವು ನಕ್ಷ ತ್ರಸಂಕುಲಗಳಲ್ಲವು, ಶ್ರೀರಾಮನ ವಿಜಯವಾರ್ತೆಯನ್ನು ಕೇಳಿದುದರಿಂದ ಮಿತಿ