ರಾಮನ ಪಟ್ಟಾಭಿಷೇಕವು 205 ಭೂಲೋಕದಲ್ಲಿ ನಿನಗೆ ಸಮಾನರಾದವರಾರುಂಟು ? ಶಾಶ್ವತವಾದ ನಿನ್ನ ಕೀರ್ತಿಗೂ ಪರಹಿತಕ್ಕೋಸ್ಕರವಾಗಿ ಉಪಯುಕ್ತವಾದ ನಿನ್ನ ಬಲಕ್ಕೆ ಮೂರು ಲೋಕಗಳಲ್ಲೂ ಎಣೆಯುಂಟೇ ? ಇಲ್ಲವು ಎಂದು ವಿವಿಧವಾಗಿ ಸುಗ್ರೀವನ ಸುಗುಣಕಥನವನ್ನು ಮಾಡಿ ನಾಳಿನ ದಿನ ನಡೆಯುವ ಶ್ರೀರಾಮಚಂದ್ರನ ಪಟ್ಟಾಭಿಷೇಕ ಮಹೋತ್ಸವಕ್ಕಾಗಿ ಚತುಸ್ಸಮುದ್ರೋದಕಗಳನ್ನೂ ಗಂಗಾದಿ ಮಹಾನದುದಕಗಳನ್ನೂ ದಿವೌಷಧೀರಸಗ ಳನ್ನೂ ತರುವುದಕ್ಕೋಸ್ಕರವಾಗಿ ಕಪಿವೀರರಿಗೆ ಅಪ್ಪಣೆಯನ್ನು ಮಾಡು ಎಂದು ಹೇಳಲು ಸುಗ್ರೀವನು ಆ ಕ್ಷಣದಲ್ಲಿಯೇ ಮಹಾ ಪರಾಕ್ರಮಶಾಲಿಗಳಾದ ಜಾಂಬವಂತ ವೇಗ ದರ್ಶಿ ಋಷಭ ಹನುಮಂತ ಇವರನ್ನು ಕರೆದು ಕ್ರಮವಾಗಿ ಮಡ ಪಡುವ ತೆಂಕ ಬಡಗ ದೆಸೆಗಳಲ್ಲಿರುವ ಸಮುದ್ರಗಳ ಉದಕಗಳನ್ನೂ ನದಿಗಳ ಉದಕಗಳನ್ನೂ ದಿವೌಷ ಧೀರಸಗಳನ್ನೂ ತೆಗೆದುಕೊಂಡು ಈ ರಾತ್ರಿ ಬೆಳಗಾಗುವಷ್ಟರಲ್ಲಿಯೇ ಇಲ್ಲಿಗೆ ಬರಬೇ ಕೆಂದು ನೇಮಿಸಿ ನವರತ್ನ ಖಚಿತಗಳಾದ ಸುವರ್ಣ ಕುಂಭಗಳನ್ನು ಕೊಡಿಸಿ ಕಳುಹಿಸಿ ದನು, ಅವರೆಲ್ಲರೂ ಅದೇ ಪ್ರಕಾರವಾಗಿ ಹೊರಟುಹೋಗಿ ಎರಡು ಜಾವಗಳ ಹೊತ್ತಿಗೆ ಚತುಸ್ಸಮುದ್ರಾದ್ಯುದಕಗಳನ್ನೂ ದಿವೌಷಧೀರಸಗಳನ್ನೂ ತೆಗೆದು ಕೊಂಡು ಬಂದು ಭರತನಿಗೆ ಒಪ್ಪಿಸಿದರು. ಅನಂತರದಲ್ಲಿ ಸೂರ್ಯೋದಯವಾಗಲು ; ಆ ಕೂಡಲೆ ಕೌಸಲ್ಯಾದೇವಿಯು ತನ್ನ ಪ್ರಿಯ ಪುತ್ರನಾದ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಹೋತ್ಸವವು ನಿರ್ವಿ ಫ್ಯತೆಯಿಂದ ನಡೆಯುವುದೆಂಬ ಹರ್ಷಾತಿಶಯದಿಂದ ಕೂಡಿದವಳಾಗಿ ಅರಮನೆಯ ಸಭಾ ಮಂದಿರವನ್ನೆಲ್ಲಾ ಕಸ್ತೂರೀಮಿಶೋದಕದಿಂದ ಸಾರಣಿಗೆ ಮುತ್ತಿನ ರಂಗ ವಲ್ಲಿಗಳನ್ನು ಬಿಡಿಸಿ ಅತಿ ರಮ್ಯವಾದ ಹಸೆಯ ಜಗಲಿಯ ಮೇಲೆ ಶಾಸ್ಕೂಕ್ಕ ಕ್ರಮ ನುಸಾರವಾಗಿ ಹಸೆಯನ್ನು ಬರೆಯಿಸಿ ಅದರ ಮೇಲೆ ನವರತ್ನ ಖಚಿತವಾದ ಹಸೆಮಣೆ ಯನ್ನು ತಂದಿಡಿಸಿ ಅದರ ಮೇಲೆ ದಿವ್ಯರತ್ನ ಕಂಬಳಿಗಳನ್ನು ಹರವಿಸಿ ಅದರ ಮು೦ಗಡೆ ಯಲ್ಲಿ ಎರಡು ಬೀಸುಗಲ್ಲುಗಳನ್ನು ಗಂಧಪುಷ್ಟಾಕ್ಷತೆಗಳಿಂದಲಂಕರಿಸಿಡಿಸಿ ಹಾಗೆಯೇ ಎರಡು ಒನಕೆಗಳನ್ನು ಶೃಂಗರಿಸಿಡಿಸಿ ಸಗಣಿಯ ಉಂಡೆಗಳಿಂದ ವಿನಾಯಕಗಳನ್ನು ಮಾಡಿಸಿ ಅವುಗಳ ಅಗ್ರಭಾಗಗಳಲ್ಲಿ ಗರಿಕೆ ಹುಲ್ಲುಗಳನ್ನು ಸಿಕ್ಕಿಸಿ ಅದರ ನಾಲೈಸೆಗ ಇಲ್ಲೂ ಇಡಿಸಿ ಒಂದು ದೊಡ್ಡ ತಟ್ಟೆಯಲ್ಲಿ ಮಲ್ಲಿಕಾದಿ ಕುಸುಮಗಳನ್ನೂ ಇನ್ನೊ೦ದ ರಲ್ಲಿ ಎಲೆಯಡಿಕೆ ತೆಂಗಿನಕಾಯಿ ಬಾಳೆಯ ಹಣ್ಣುಗಳನ್ನೂ ಮತ್ತೊಂದು ತಟ್ಟೆ ಯಲ್ಲಿ ಮಂತ್ರಾಕ್ಷತೆಗಳನ್ನೂ ಇನ್ನೊಂದರಲ್ಲಿ ಆರಿಸಿನದ ಪುಡಿಯನ್ನೂ ಮತ್ತೊಂದರಲ್ಲಿ ಗೋಧಿ ಯ ಹಿಟ್ಟಿ ನ್ಯೂ ಇನ್ನೊಂದರಲ್ಲಿ ದಿವ್ಯ ಗಂಧವನ್ನೂ ನವರತ್ನ ಖಚಿತವಾದ ಕಿಣ್ಣದಲ್ಲಿ ದಿವ್ಯ ಪರಿಮಳ ಯುಕ್ತವಾದ ಎಣ್ಣೆಯನ್ನೂ ತಂದಿರಿಸಿ ಇನ್ನೂ ವಿವಿಧವಾದ ಸಾಮ ಗ್ರಿಗಳನ್ನು ತಂದಿಡಿಸಿ ಅವೀರೆಯರನ್ನು ಕರಿಸಿ ಊರಿನಲ್ಲಿರುವ ವೃದ್ದೆ ಯರಾದ ಸುಮಂ ಗಲೆಯರನ್ನೆಲ್ಲಾ ಕರಿಸಿಕೊಂಡು ಅವರನ್ನು ಕುರಿತು-ಸೀತಾರಾಮರನ್ನು ಹಸೆಮಣೆ ಯ ಮೇಲೆ ಕುಳ್ಳಿರಿಸಿ ಓಲಗ ತಾಳ ಮೇಳ ಪಿಳ್ಳಂಗೋವಿ ಮೊದಲಾದ ಸಮಸ್ತ ವಾದ್ಯ ರವಗಳೊಡನೆ ಸಂಭ್ರಮದಿಂದ ಅವರಿಗೆ ಎಣ್ಣೆಯ ಶಾಸ್ತ್ರಗಳನ್ನು ಬೆಳಿಸಿರಿ ಎಂದು ಸಂತೋ ಷದಿಂದ ಹೇಳಿದಳು. ಆಗ ಕುಲದ ಸಂಪ್ರದಾಯಗಳನ್ನು ತಿಳಿದಂಥ ಐದು ಜನ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೧೫
ಗೋಚರ