ಪುಟ:ಕಥಾ ಸಂಗ್ರಹ - ಭಾಗ ೨.djvu/೨೨೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

212 ಕಥಾಸಂಗ್ರಹ-೫ ನೆಯ ಭಾಗ ಆ ಮಾತುಗಳನ್ನು ಕೇಳಿದ ಕೂಡಲೆ ಸತ್ಯವ್ರತರಾಜನಿಗೆ ಮನಸ್ಸಿನಲ್ಲಿ ಕರುಣೆ ಯ ಆಶ್ವರ್ಯವೂ ಹೆಚ್ಚಾಗಿ-ಬಾರೆ, ಮಿಾನು ಮಲಯೇ ಎಂದು ಆ ಮರಿಯೊಡನೆ ತನ್ನ ಬೊಗಸೆಯಲ್ಲಿದ್ದ ನೀರನ್ನು ಸಮಿಾಪದಲ್ಲಿದ್ದ ಅಘಪಾತ್ರೆಯಲ್ಲಿ ಬಿಟ್ಟು ತಾನು ಸಂಧ್ಯಾ ಕರ್ಮತತ್ಪರನಾಗಿ ಕುಳಿತುಕೊಂಡಿದ್ದನು. ಅಷ್ಟರಲ್ಲಿ ಅಂಗುಷ್ಠ ಪ್ರಮಾಣಮಾ ತ್ರವಾಗಿದ್ದ ಆ ಮಿಾನಿನ ಮರಿಯು ಆ ಅರ್ಥ್ಯಪಾತ್ರೆಯ ತುಂಬಾ ಬೆಳೆದು ಆ ರಾಯ ನನ್ನು ಕುರಿತು-ಎಲೈ ಮಹಾರಾಜನಾದ ಸತ್ಯವ್ರತನೇ, ನನ್ನನ್ನು ನೋಡು, ನನಗೆ ಈ ಸ್ವಲ್ಪವಾದ ಆರ್ಥ್ಯಪಾತ್ರೆಯ ನೀರು ಸಾಕೇ ? ಎನ್ನಲು, ಆಗ ರಾಯನು ಅದನ್ನು ನೋಡಿ ಇದು ಸಾಧಾರಣವಾದ ವಿಾನಲ್ಲ. ದೈವಿಕವಾದ ವಿಾನೆಂದು ತಿಳಿದು ಅದನ್ನು ಅಲ್ಲಿದ್ದ ನೀರಿನ ಗಡಿಗೆಯಲ್ಲಿ ಬಿಟ್ಟನು. ಅದು ಆ ಕ್ಷಣದಲ್ಲೇ ಅದರ ತುಂಬಾ ಬೆಳೆ ಯಲು ; ಅದನ್ನು ಅಲ್ಲಿಂದ ತೆಗೆದು ಒಂದು ಕಡಾಯಿಾ ರಿನಲ್ಲಿ ಬಿಡಲು ; ಅದು ಅದರ ತುಂಬಾ ಬೆಳದಿತು. ಅದನ್ನು ನೋಡಿ ರಾಜನು ಈ ವಿಾನಿನ ದೇಹಾಭಿವೃದ್ಧಿಗೆ ಸಾಧಾರಣವಾದ ಜಲಸ್ಥಾನಗಳು ಎಂದಿಗೂ ಸಾಕಾಗುವುದಿಲ್ಲ, ಅದು ಕಾರಣ ಇದರ ವಾಸಕ್ಕೆ ಸಮುದ್ರೋದಕದೇ ಯೋಗ್ಯವಾದುದು ಎಂದು ಯೋಚಿಸಿ ಅದನ್ನು ತೆಗೆದು ಕೊಂಡು ಹೋಗಿ ಸಮುದ್ರದಲ್ಲಿ ಬಿಡಲು, ಅದು ಅಲ್ಲಿ ಮಹಾದ್ಭುತಾಕಾರ ವಾಗಿ ಬೆಳೆದು ಸಮುದ್ರದಲ್ಲಿ ನಿರರ್ಗಳವಾಗಿ ಸಂಚಾರಮಾಡುತ್ತ ಈ ಸತ್ಯವ್ರತರಾಜ ನಿಗೆ ನಾಲ್ಕು ತೋಳುಗಳಿ೦ದ ಶಂಖಚಕ್ರಗದಾಪದ್ಯಗಳನ್ನು ಧರಿಸಿ ದಿವ್ಯ ಕಿರೀಟಕುಂ ಡಲ ಕಟಕ ಕೇಯರಾದಿ ಭೂಷಣಗಳಿಂದಲೂ ಪೀತಾಂಬರದಿಂದಲೂ ಅಲಂಕೃತ ವಾಗಿ ಶ್ರೀಮಹಾಲಕ್ಷ್ಮಿ ಸಮೇತವಾಗಿ ಮತ್ಯಾಕಾರದಿಂದ ಕಾಣಿಸಿಕೊಂಡು ಆತ ನನ್ನು ಕುರಿತು-ಎಲೈ ರಾಜನೇ, ನಿನ್ನ ಪರಿವಾರಗಳಿಗೆ ಅಪ್ಪಣೆಯನ್ನು ಕೊಟ್ಟು ಪಟ್ಟಿ ಣಕ್ಕೆ ಕಳುಹಿಸಿ ನೀನೊಬ್ಬನೇ ಇದ್ದು ಕೊಂಡು ನಾನಾಡುವ ಮಾತುಗಳನ್ನು ಕೇಳು ಎಂದು ಹೇಳಿತು. ಆಗಲಾ ಸತ್ಯವ್ರತರಾಜನು ಆ ಮಾತುಗಳನ್ನು ಕೇಳಿ ಆ ಕ್ಷಣದಲ್ಲಿಯೇ ತನ್ನ ಪರಿವಾರಗಳನ್ನೆಲ್ಲಾ ಕಳಹಿಸಿಬಿಟ್ಟು ತಾನೊಬ್ಬನೇ ಕೈಮುಗಿದು ನಿಂತುಕೊಂಡು ಏನಪ್ಪಣೆ ? ಎಂದು ಕೇಳಿಕೊಳ್ಳಲು ; ಆಗ ಆ ಮಹಾಮತೃವು ಇಂದಿಗೆ ಏಳನೆಯ ದಿವಸದಲ್ಲಿ ಜಲಪ್ರಳಯವಾಗಿ ಭೂಮಿಯು ಕಾಣದೆ ಹೋಗುವುದು, ಅದು ಕಾರಣ ನೀನು ನಿನ್ನ ಕುಟುಂಬದೊಡನೆ ಕೂಡಿ ಬರುವ ಯುಗದಲ್ಲಿ ಹುಟ್ಟುವ ಪ್ರಾಣಿ ಗಳ ಜೀವನಕ್ಕೊಸ್ಕರ ಬೇಕಾದ ಧಾನ್ಯ ಬೀಜಗಳನ್ನು ಸಂಗ್ರಹಮಾಡಿಕೊಂಡು ಇಂದಿಗೆ ಆರನೆಯ ದಿವಸದ ರಾತ್ರಿಯಲ್ಲಿ ಇದೇ ಸ್ಥಳಕ್ಕೆ ಬಂದರೆ ಆಗ ನನ್ನ ಈ ಮಹಾ ಮತ್ತಾಕೃತಿಯನ್ನು ನೋಡುವಿ, ಆಗ ನನ್ನ ಕೋರೆಯಲ್ಲಿ ಸಿಕ್ಕಿಕೊಂಡು ಅಲ್ಲಾಡುತ್ತಿರುವ ಒಂದು ಹಡಗು ಕಾಣಿಸುವುದು. ಆಗ ನೀನು ನಿನ್ನ ಕುಟುಂಬದ ಸಂಗಡ ಸಕಧಾನೌಷಧಿಗಳ ಬೀಜಗಳನ್ನು ತೆಗೆದು ಕೊಂಡು ಆ ಹಡಗನ್ನು ಹತ್ತುವ ವನಾಗು. ಅನಂತರದಲ್ಲಿ ನಡೆಯುವ ಕಾರ್ಯಗಳನ್ನು ನೀನೇ ತಿಳಿಯುವಿ ಎಂದು ಅಪ್ಪಣೆಯನ್ನು ಕೊಟ್ಟು ಸಮುದ್ರಾಂತರ್ಜಲಪ್ರವೇಶವನ್ನು ಮಾಡಿತು. ತರುವಾಯ