ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

214 ಕಥಾಸಂಗ್ರಹ-೫ ನೆಯ ಭಾಗ ಕುರುಡನಂತಿದ್ದೇನೆ ಎಂದು ಬಹುವಿಧವಾಗಿ ಮೊರೆಯಿಡಲು ; ಆಗ ಮತ್ಯಮೂರ್ತಿ ಯಾದ ಮಹಾವಿಷ್ಣುವು ಪ್ರತ್ಯಕ್ಷನಾಗಿ ಕಾಣಿಸಿಕೊಂಡು ಹಯಗ್ರೀವಸೋಮಕ ರೆಂಬ ದೈತ್ಯರು ವೇದಪುಸ್ತಕಗಳನ್ನು ಅಪಹರಿಸಿಕೊಂಡು ಹೋಗಿ ಸಮುದ್ರದಲ್ಲಿ ಹೊಕ್ಕುದನ್ನೂ ಸರ್ವಜ್ಞನಾದ ತಾನು ಮುಂದೆ ಹೀಗಾಗುವುದೆಂದು ತಿಳಿದು ಮೊದಲೇ ಮತ್ಯಾವತಾರವನ್ನು ಮಾಡಿ ಸಮುದ್ರದಲ್ಲಿ ಸಂಚರಿಸುತ್ತಿದ್ದುದನ್ನೂ ತಾನು ಅವ ರನ್ನು ಕೊಂದುಹಾಕಿ ವೇದಪುಸ್ತಕಗಳನ್ನು ತಿರಿಗಿ ತೆಗೆದಿಟ್ಟು ಕೊಂಡಿರುವುದನ್ನೂ ತಿಳಿಸಿ ಅವನಿಗೆ ವೇದಪುಸ್ತಕಗಳನ್ನು ಕೊಟ್ಟು ಪುನಃ ಅವುಗಳನ್ನು ಉಪದೇಶಿಸಿ ಅಂತ ರ್ಧಾನನಾದನು. ಅನಂತರದಲ್ಲಿ ಬ್ರಹ್ಮನು ಯಥಾವತ್ತಾಗಿ ಸೃಷ್ಟಿ ಕರ್ಮಕ್ಕೆ ಆರಂ ಭಿಸಿ ನೀರಿನಲ್ಲಿ ಮುಳುಗಿ ಪ್ರಳಯವಾಗಿ ಹೋಗಿದ್ದ ಭೂಲೋಕ ಭುವರ್ಲೋಕ ಸುವ ರ್ಲೋಕಗಳನ್ನು ಪೂರ್ವದಂತೆಯೇ ಉಂಟುಮಾಡಿದನು. 2, THE SECOND OR TURTLE INCARNATION. ೨. ಕೂರ್ಮಾವತಾರದ ಕಥೆ. ದೇವೇಂದ್ರನು ತನ್ನ ನಿಜನಗರವಾದ ಅಮರಾವತೀಪಟ್ಟಣದಲ್ಲಿ ಸುಧರ್ಮವೆಂಬ ಸಭಾಮಧ್ಯದಲ್ಲಿ ಅಷ್ಟದಿಕಾಲಕರೇ ಮೊದಲಾದ ಸಮಸ್ತ ದೇವತೆಗಳೊಡನೆ ಕೂಡಿ ಒಡೋಲಗವನ್ನು ಕೊಡುತ್ತಿದ್ದು ತನ್ನ ಪಟ್ಟಣದ ಸೌಂದರ್ಯವನ್ನು ನೋಡಬೇ ಕೆಂದು ಕುತೂಹಲವುಳ್ಳವನಾಗಿ ನಾಲ್ಕು ಕೊಂಬುಗಳುಳ್ಳುದಾಗಿಯ ಶ್ವೇತವರ್ಣ ವುಳುದಾಗಿಯೂ ಇರುವ ಪಟ್ಟದಾನೆಯನ್ನು ನವರತ್ನ ಖಚಿತಗಳಾದ ರೆಂಬೆಗಳಿಂದಲೂ ರತ್ನದ ಪದಕಗಳಿಂದಲೂ ಮಣಿಮಯವಾದ ಗಗ್ಗರಗಳಿಂದಲೂ ಕೆಂಬರಲು ಗಳಿಂದ ಕೆತ್ತಿದ ಹಿಡಿಗಳುಳ್ಳ ಚೌರಿಗಳಿಂದಲೂ ಶೃಂಗರಿಸಿ ತೆಗೆದುಕೊಂಡು ಬರುವಂತೆ ಮಾವಟಿ ಗನಿಗೆ ಕಟ್ಟು ಮಾಡಿದನು. ಅವನು ಅದೇ ಮೇರೆಗೆ ದಿವ್ಯಭೂಷಣಗಳಿಂದ ಅಲಂಕರಿಸಿ ಸಿದ್ಧ ಮಾಡಿದ ಐರಾವತದ ಮೇಲೆ ಸುರಪತಿಯು ತನ್ನ ಪಟ್ಟಮಹಿಷಿಯಾದ ಶಚೀದೇವಿ ಯೊಡನೆ ಕೂಡಿ ಏರಿಕೊಂಡು ಹೊರಡಲು; ಆಗ ಅಗ್ನಿಯು ಟಗರನ್ನೂ ಯಮನು ಕೋಣವನ್ನೂ ನಿರುತಿಯು ಮನುಷ್ಯನನ್ನೂ ವರುಣನು ನೆಗಳನ್ನೂ ವಾಯುವು ಎರಳೆ ಯನ್ನೂ ಕುಬೇರನು ಕುದುರೆಯನ್ನೂ ಈಶಾನನು ನಂದಿಯನ್ನೂ ಸಂಭ್ರಮದಿಂದ ಏರಿಕೊಂಡು ದೇವೇಂದ್ರನ ಉಭಯ ಪಾರ್ಶ್ವಗಳಲ್ಲೂ ಉಲ್ಲಾಸದಿಂದ ಬಂದರು. ಮತ್ತು ಅಷ್ಟವಸುಗಳೂ ಸಪ್ತಮರುತ್ತುಗಳೂ ಏಕಾದಶರುದ್ರರೂ ದ್ವಾದಶಾದಿತ್ಯರೂ ಸಕಲ ವಿಧ ವಸ್ತ್ರಾಭರಣ ಭೂಷಿತರಾಗಿ ತಮ್ಮ ತಮ್ಮ ವಾಹನಗಳನ್ನು ಏರಿಕೊಂಡು ದೇವೇಂದ್ರನ ಹಿಂಗಡೆಯಲ್ಲಿ ಸಂತೋಷದಿಂದ ಬಂದರು. ಮತ್ತು ಗಂಧರ್ವಾಧಿಪತಿಗಳು ವೀಣೆ ತಂಬೂರಿ ಸಿತಾರು ಸಾರಂಗಿ ಕಿನ್ನರಿ ಸ್ವರಮಂಡಲ ಇವು ಮೊದಲಾದ ತಂತಿವಾದ್ಯಗಳನ್ನೂ ಕೊಳಲು ಮುಖವೀಣೆ ಓಲಗ ರಣಕಹಳೆ ಕೊಂಬು ತುತೂರಿ ಇವು ಮುಂತಾದ ರಂಧ್ರವಾದ್ಯಗಳನ್ನೂ ಮದ್ದಲೆ