ಪುಟ:ಕಥಾ ಸಂಗ್ರಹ - ಭಾಗ ೨.djvu/೨೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


216 ಕpಸಂಗ್ರಹ-೫ ನೆಯ ಭಾಗ ಸ್ಥಳದಲ್ಲಿ ಹಾಕಿದೆಯೋ ಆ ನಿನ್ನ ಐಶ್ವರ್ಯವನ್ನು ನಿನ್ನ ಹಗೆಗಳಾದ ದೈತ್ಯರು ಕಿತ್ತು ಕೊಳ್ಳಲಿ ಎಂದು ಶಾಪವನ್ನು ಕೊಟ್ಟನು. ಆಗ ಭಯಭ್ರಾಂತನಾದ ದೇವೇಂದ್ರನು ಕೆಟ್ಟ ಮೇಲೆ ಬುದ್ದಿ ಬಂದಿತು ಎಂಬ ಗಾದೆಗೆ ಸರಿಯಾಗಿ ವಿವೇಕವನ್ನು ಹೊಂದಿ ಬೇಗ ಐರಾವತದಿಂದ ಕೆಳಕ್ಕಿಳಿದು ಆ ದೂರ್ವಾಸಮುನಿಪತಿಯ ಎರಡು ಪಾದಗಳ ಮೇಲೆ ಬಿದ್ದು ಹೊರಳುತ್ತ ದುಃಖದಿಂದ--ಸ್ವಾಮಿಾ, ದಯಾಳುವೇ, ನಾನು ಬಹು ಪಾಪಿಷ್ಠನು, ಮಹಾಪರಾಧಿಯು, ಸರ್ವಜ್ಞನಾದ ನೀನು ನನ್ನ ಅಪರಾಧವನ್ನು ಕ್ಷಮಿಸಿ ವಿಶಾಪವನ್ನು ದಯಪಾಲಿಸಿ ಅನಾಥನಾದ ನನ್ನನ್ನು ಉದ್ಧಾರಮಾಡಬೇ ಕೆಂದು ದೈನ್ಯದಿಂದ ಬಹಳವಾಗಿ ಬೇಡಿಕೊಂಡುದರಿಂದ ಆಗ ದೂರ್ವಾಸಮುನಿಯು ಕರುಣವುಳ್ಳವನಾಗಿ ಕೆಲಕಾಲದ ಮೇಲೆ ಲಕ್ಷ್ಮಿಪತಿಯಾದ ಮಹಾವಿಷ್ಣುವು ಯಥಾಪ್ರಕಾರವಾಗಿ ನಿನಗೆ ತ್ರಿಲೋಕಾಧಿಪತ್ಯವುಂಟಾಗುವಂತೆ ಮಾಡುವ ಎಂದು ವಿಶಾಪವನ್ನು ಕೊಟ್ಟು ಹೊರಟು ಹೋದನು, ಆ ಬಳಿಕ ದೇವೇಂದ್ರನು ಕೊಬ್ಬಡಗಿದ ವನಾಗಿ ಮಹಾ ಚಿಂತೆಯಿಂದ ಕೂಡಿ ಮೋರೆಗೆ ಮುಸುಕು ಹಾಕಿಕೊಂಡು ಹಿಂದಿರುಗಿ ಅರಮನೆಗೆ ಹೋಗಿ ಏಕಾಂತಸ್ಥಳದಲ್ಲಿ ಬಿದ್ದು ಕೊಂಡನು. - ಹೀಗಿರುವಲ್ಲಿ ಬಲಿ ನಮುಚಿ ಎಂಬವರೇ ಮೊದಲಾದ ದೈತ್ಯೇಂದ್ರರು ಸ್ವರ್ಗ ಲೋಕದ ವೃತ್ತಾಂತವನ್ನು ತಿಳಿಯುವುದಕ್ಕೋಸ್ಕರ ತಮ್ಮ ವಾಸಸ್ಥಾನವಾದ ರಸಾತ ಲದಿಂದ ಕಳುಹಿಸಿದ್ದ ರಾಕ್ಷಸಗೂಢಚಾರರು ಈ ಸಂಗತಿಯನ್ನು ತಿಳಿದು ಶೀಘ್ರದಿಂದ ರಸಾತಲಕ್ಕೆ ಹೋಗಿ ಆ ದೈತ್ಯರಾಜರಿಗೆ ಯಥಾವತ್ತಾಗಿ ಅರಿಕೆಮಾಡಿದರು. ಆಗ ಬಲಿಯು ತನ್ನ ಕುಲಗುರುಗಳಾದ ಶುಕ್ರಾಚಾರ್ಯರನ್ನೂ ತನ್ನ ಜೊತೆಯವರಾದ ದೈತ್ಯರಾಜರನ್ನೂ ಏಕಾಂತದಲ್ಲಿ ಕೂಡಿಸಿಕೊಂಡು ಈ ಸಂಗತಿಯನ್ನೆಲ್ಲಾ ತಿಳಿಸಿ--ನಾವು ಮುಂದೆ ಮಾಡಬೇಕಾದ ರಾಜಕಾರ್ಯವಾವುದು ಎಂದು ಕೇಳಿದನು. ಅದಕ್ಕೆ ಶುಕ್ರಾ ಚಾರ್ಯನು--ಎಲೈ ದೈತ್ಯರಾಜನೇ, ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕೊಂಡನು ಎಂಬಂತೆ ಮಾಡದೆ ಶತ್ರುವು ವಿಪದಾಧಿತನಾಗಿರುವ ಇಂಥ ಕಾಲದಲ್ಲಿ ನೀನು ತಡಮಾಡದೆ ಚತುರಂಗಬಲಸಮೇತನಾಗಿ ದೇವಲೋಕಕ್ಕೆ ಹೋಗಿ ದೇವೇಂದ್ರನನ್ನು ಯುದ್ಧದಲ್ಲಿ ಸದೆಬಡಿದು ಅವನ ಪದವಿಯನ್ನು ಅಪಹರಿಸಿಕೊಂಡು ಸುಖಪಡದೆ ಇದ್ದರೆ ಲೋಕದಲ್ಲಿ ನಿಮ್ಮಂಥ ಹೇಡಿಗಳು ಇನ್ನಾರುಂಟು ? ಪ್ರಪಂಚದಲ್ಲಿ ರಾಜನೀತಿಯನ್ನು ತಿಳಿದಂಥ ದೊರೆಗಳು ಹಗೆಗಳ ಪಟ್ಟಣಕ್ಕೆ ನಾನಾ ವೇಷಧಾರಿಗಳಾದ ಗೂಢಚಾರರನ್ನು ಕಳು ಹಿಸಿ ಅಲ್ಲಿ ಜನಹಿಂಸಕಗಳಾದ ಅನ್ಯಾಯ ಕೃತ್ಯಗಳು ನಡೆಯುತ್ತಿರುವುದನ್ನೂ ರಾಜ ಮಂತ್ರಿ ಸೇನಾಪತಿ ಈ ಮೊದಲಾದವರಿಗೆ ಪರಸ್ಪರವಾಗಿ ಮನಸ್ತಾಪಗಳು ಹುಟ್ಟಿರು ವುದನ್ನೂ ಅರಸುಗಳ ಜ್ಞಾತಿವರ್ಗದಲ್ಲಿ ಒಬ್ಬೊಬ್ಬರಿಗೆ ವೈಷಮ್ಯವುಂಟಾಗಿರುವುದನ್ನೂ ಅರಸು ತನ್ನ ರಾಜ್ಯದಲ್ಲಿ ದುಷ್ಟರಿಗೆ ಶಿಕ್ಷೆಯನ್ನೂ ಶಿಷ್ಟರಿಗೆ ರಕ್ಷಣೆಯನ್ನೂ ಮಾಡದೆ ದುಷ್ಟರಾದವರಿಗೆ ಸನ್ಮಾನವನ್ನೂ ಶಿಷ್ಟರಾದವರಿಗೆ ಅವಮಾನವನ್ನೂ ಮಾಡುತ್ತಿರು ವುದನ್ನೂ ರಾಜನು ತನ್ನ ಕೈಕೆಳಗಣ ಉದ್ಯೋಗಸ್ಥರಿಗೆ ನಿಯಮಿತಕಾಲಾನುಸಾರ ವಾಗಿ ಸಂಬಳವನ್ನು ಸಲ್ಲಿಸುತ್ತ ಬಾರದಿರುವುದನ್ನೂ 'ರಾಜ್ಯದಲ್ಲಿ ಪ್ರಜೆಗಳು ವ್ಯಾಧಿ