ಪುಟ:ಕಥಾ ಸಂಗ್ರಹ - ಭಾಗ ೨.djvu/೨೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


218 ಕಥಾಸಂಗ್ರಹ-೫ ನೆಯ ಭಾಗ ಗಣಿಸದೆ ಮಹಾಮುನಿಗಳಿಗೆ ಅವಮಾನವನ್ನು ಮಾಡುತ್ತಲೂ ಅನ್ಯಾಯದಿಂದ ನಡೆ ಯುತ್ತ ಬರುತ್ತಿರುವುದರಿಂದ ಆಗಾಗ್ಗೆ ಅವನಿಗೆ ಹಾನಿಗಳು ತಟ್ಟುತ್ತ ಇರುವುವು. ಹಾಗೆ ತಟ್ಟಿ ದಾಗ್ಯೂ ವಿಷ್ಣುವು ಅವನಿಗೆ ಸಹಾಯಕನಾದುದರಿಂದ ಅವುಗಳನ್ನೆಲ್ಲಾ ಪರಿಹರಿಸುತ್ತ ತಿರಿಗಿ ಅವನಿಗೆ ತ್ರಿಲೋಕಾಧಿಪತ್ಯವನ್ನು ಉಂಟುಮಾಡುತ್ತ ಬರುತ್ತಿರು ವನು, ಈಗ ದೇವೇಂದ್ರನಿಗೆ ಅವನ ದುರಹಂಕಾರದಿಂದ ದೂರ್ವಾಸಮುನಿಯ ಶಾಪವು ಪ್ರಾಪ್ತವಾದುದರಿಂದ ಅವನು ತನ್ನ ಸಕಲ ಪರಿವಾರದೊಡನೆ ಕೂಡಿ ಓಡಿಹೋಗಿ ದ್ದಾನೆ, ಈಗ ನಿಮಗೆ ತ್ರಿಲೋಕಾಧಿಪತ್ಯವೂ ನಿರಾಯಾಸದಿಂದ ಸ್ವಾಧೀನವಾಗು ವುದು. ಆದರೂ ಕೆಲದಿನಗಳ ಮೇಲೆ ವಿಷ್ಣುವು ನಿಮ್ಮನ್ನು ಜಯಿಸಿ ಇಂದ್ರನಿಗೆ ಲೋಕತ್ರಯಾಧಿಪತ್ಯವನ್ನು ಉಂಟುಮಾಡುವನು. ನಾನು ಇದನ್ನು ಯೋಚಿಸಿ ಮೂರ್ಖನೂ ದುಷ್ಟನೂ ಆದ ಇಂದ್ರನ ಸಹವಾಸವು ನನಗೆ ಯೋಗ್ಯವಾದುದಲ್ಲ. ಅದು ನನಗೆ ಸಂಪೂರ್ಣವಾಗಿ ತಪ್ಪಿ ಹೋಗುವಂತೆ ಮಾಡುವುದಕ್ಕೆ ತ್ರಿಲೋಕಾಧಿಪ ತ್ಯವು ನಿಮ್ಮಲ್ಲಿ ಶಾಶ್ವತವಾಗಿ ನಿಲ್ಲುವಂತೆ ಮಾಡಿ ನಾನೂ ಶುಕ್ರಾಚಾರ್ಯರೂ ಏಕಾಲೋಚನೆಯಿಂದ ಸುಖದಿಂದಿರಬೇಕೆಂದು ಯೋಚಿಸಿಕೊಂಡು ಈಗ ನಿಮ್ಮ ಬಳಿಗೆ ಬಂದಿದ್ದೇನೆ ಅಂದನು. - ಆಗ ಶುಕ್ರಾಚಾರ್ಯರೂ ದೈತ್ಯರಾಜರೂ ಕೂಡಿ ಆಲೋಚಿಸಿ ಬೃಹಸ್ಸತ್ಯಾ ಚಾರ್ಯರನ್ನು ಕುರಿತು--ನೀವು ಹೇಳಿದುದೆಲ್ಲಾ ನಿಜವೇ ಸರಿ. ಇದರಲ್ಲಿ ಒಂದು ಮಾತಾದರೂ ಸುಳ್ಳಲ್ಲ. ನೀವು ಇ೦ದ್ರನನ್ನು ಬಿಟ್ಟು ನಮಗೆ ಸಹಾಯಮಾಡುವುದಾ ದರೆ ತ್ರಿಲೋಕಾಧಿಪತ್ಯವು ನಮ್ಮನ್ನು ಬಿಟ್ಟು ಎಂದಿಗೂ ತೊಲಗುವುದಿಲ್ಲ ವೆಂದು ಖಂಡಿತವಾಗಿ ನಂಬಿದ್ದೇವೆ. ಆ ತ್ರಿಲೋಕಾಧಿಪತ್ಯವು ನಮ್ಮಲ್ಲೇ ಸ್ಥಿರವಾಗಿರುವ ಹಾಗೆ ನೀವು ಮಾಡಿದಲ್ಲಿ ನಾವೆಲ್ಲರೂ ನಿಮ್ಮ ಆಜ್ಞೆಯನ್ನು ಸ್ವಲ್ಪವಾದರೂ ಮಾರದೆ ಕೃತಜ್ಞತೆಯಿಂದ ನಡೆದು ಕೊಳ್ಳುವೆವೆಂದು ಬಿನ್ನವಿಸಿದರು. ಆಗ ಬೃಹಸ್ಪತಾ ಚಾ ರ್ಯನು ಅವರನ್ನು ಕುರಿತು-ಎಲೈ ದೈತ್ಯರಾಜರು ಗಳಿರಾ, ನೀವು ಹಾಗೆ ನಡೆ ಯುವಂಥವರೇ ಸರಿ, ಈ ವಿಷಯದಲ್ಲಿ ನನಗೆ ಬಹಳವಾಗಿ ನಂಬಿಕೆಯುಂಟು. ಆದರೆ ನಾನು ಯೋಚಿಸಿರುವ ಕೆಲಸವು ಬಹಳ ದುರ್ಘಟವಾದುದು, ಆ ಕಾರ್ಯಕ್ಕೆ ವಿಷ್ಣು ವಿನ ಸಹಾಯವು ಒದಗದಿದ್ದರೆ ಅದು ನಡೆಯಲಾರದು, ಆದುದರಿಂದ ನಾನು ಮೊದಲಿನ ಹಾಗೆಯೇ ಆ ದೇವತೆಗಳಲ್ಲೇ ಸೇರಿಕೊಂಡು ಆ ಕಾರ್ಯದ ಸಂವಿಧಾನ ಗಳನ್ನೆಲ್ಲಾ ಮಾಡುವೆನು. ಅದು ನನ್ನ ಇಷ್ಟಾನುಸಾರವಾಗಿ ಕೈಗೂಡಿದರೆ ತಿರಿಗಿ ಬಂದು ನಿಮ್ಮನ್ನು ಕಂಡು ಏಕಾಂತದಲ್ಲಿ ಆ ಸಂಗತಿಯನ್ನೆಲ್ಲಾ ತಿಳಿಸುವೆನು, ಈಗ ನೀವು ಸರ್ವರೂ ಮಹಾತ್ಮರಾದ ಶುಕ್ರಾಚಾರ್ಯರನ್ನು ಕರೆದುಕೊಂಡು ದೇವತೆಗ. ೯೦ದ ಬಿಡಲ್ಪಟ್ಟಿರುವ ಸ್ವರ್ಗಲೋಕಕ್ಕೆ ಹೋಗಿ ತ್ರಿಲೋಕಾಧಿಪತ್ಯವನ್ನು ಮಾಡಿ ಕೊಂಡು ಸುಖದಿಂದಿರಿ ಎಂದು ಹೇಳಿ ಅವರನ್ನೆಲ್ಲಾ ಅಮರಾವತೀಪಟ್ಟಣಕ್ಕೆ ಕಳುಹಿಸಿ ತಾನು ಅವರ ಅನುಮತಿಯನ್ನು ಹೊಂದಿ ಅಲ್ಲಿಂದ ಹೊರಟು ಮಹಾವಿಷ್ಣು ವಿನ ಬಳಿಗೆ ಬಂದು ದೇವೇಂದ್ರನಿಗೆ ದೂರ್ವಾಸರ ಶಾಪ ಬಂದುದನ್ನೂ ದೇವತೆಗಳನ್ನೆಲ್ಲಾ ನೈಮಿಶಾ