ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೂರ್ಮಾವತಾರದ ಕಥೆ 219 ರಣ್ಯಕ್ಕೆ ಕಳುಹಿಸಿ ತಾನು ದೈತ್ಯರ ಬಳಿಗೆ ಹೋಗಿ ಮಾಡಿರುವ ತಂತ್ರವನ್ನೂ ತಿಳಿಸಿ ಮಹಾವಿಷ್ಣುವನ್ನು ಕುರಿತು--ನೀನು ಮಹಾತ್ಮನು, ಸರ್ವಜ್ಞನು ಮತ್ತು ಸರ್ವಶಕ್ತನು. ಯಥಾಪ್ರಕಾರವಾಗಿ ದೇವತೆಗಳಿಗೆ ಸ್ವರ್ಗಲೋಕ ಪ್ರಾಪ್ತಿಯುಂಟಾಗುವುದಕ್ಕೆ ಯಾವ ಉಪಾಯವನ್ನು ಹೇಳುವಿಯೋ ಆ ಪ್ರಕಾರವೇ ನಡೆಯುವೆನು ಅಂದನು. ಆ ಮಾತುಗಳನ್ನು ಕೇಳಿ ಮಹಾವಿಷ್ಣುವು ಮುಗುಳ್ಗೆಯುಳ್ಳವನಾಗಿ ಸುರ ಗುರುವನ್ನು ನೋಡಿ--ನೀನು ಮಹಾ ಬುದ್ಧಿಶಾಲಿಯು, ಒಳ್ಳೆಯ ಯೋಚನೆಯನ್ನು ಮಾಡಿದೆ. ದೇವೇಂದ್ರನಿಗೆ ನಿನ್ನಂಥ ಗುರುವು ಶ್ರೇಯಶ್ಚಿಂತಕನಾಗಿರುವಲ್ಲಿ ಅವನಿಗೆ ಯಾವ ಕಾರ್ಯವು ತಾನೆ ಅಸಾಧ್ಯವು ? ಎಂದು ಬಹು ವಿಧವಾಗಿ ಹೊಗಳಿದನು. ಅದನ್ನು ಕೇಳಿ ಸುರಗುರುವು--ಎಲೈ ಸರ್ವಾಂತರ್ಯಾಮಿಯಾದ ಸ್ವಾಮಿಯೇ; ಸಕಲ ಲೋಕಗಳಲ್ಲಿರುವ ಪ್ರಾಣಿಗಳೂ ಬೊಂಬೆಗಳು, ಮಹಾತ್ಮನಾದ ನೀನು ಸೂತ್ರ ಧಾರನು. ಅವುಗಳೆಲ್ಲವೂ ನೀನು ಕುಣಿಸಿದ ಹಾಗೆ ಕುಣಿಯುವವು. ಭಕ್ತನಾದ ನನ್ನ ಹೃದಯದಲ್ಲಿ ನೀನಿದ್ದು ಕೊಂಡು ಪ್ರೇರೇಪಿಸಿದ ಹಾಗೆ ನಾನು ಮಾಡಿದೆನೇ ಹೊರತು ಅಲ್ಪಜ್ಞನಾದ ನನ್ನ ಬುದ್ದಿ ಯು ಎಷ್ಟರದು ? ನಾನೆಷ್ಟರವನು ? ಮಹಾತ್ಮನಾದ ನೀನು ಅಲ್ಪಸಾದ ನನ್ನನ್ನು ಕೊಂಡಾಡಿ ನಾಚಿಕೆ ಪಡಿಸಬೇಡ. ಮುಂದೆ ಮಾಡಬೇಕಾದ ಕಾರ್ಯಕ್ಕೆ ಅಪ್ಪಣೆಯನ್ನು ಕೊಡು ಎಂದು ವಿನಯದಿಂದ ಬೇಡಿಕೊಂಡನು. ಆಗ ಮಹಾವಿಷ್ಣುವು--ಎಲೈ ಸುರಾಚಾರ್ಯನೇ, ನನ್ನ ವಾಸಸ್ಥಾನವಾದ ಕಿರಸಮುದ್ರವನ್ನು ಮಂದರಪರ್ವತದಿಂದ ಕಡೆದರೆ ಆ ಕಡಲಲಿ ಅಮ್ಮತವು ಉತ ನೃ ವಾಗು ವುದು, ದೇವತೆಗಳು ಅದನ್ನು ಕುಡಿದರೆ ಜರಾಮರಣರಹಿತರಾಗಿ ತಿರಿಗಿ ತ್ರಿಲೋಕಾಧಿಪತ್ಯವನ್ನು ಹೊಂದಿ ಸಂತೋಷದಿಂದ ಆಳುವರು. ಆದರೆ ಇದು ಮಹಾ ದುಸ್ಸಾಧ್ಯವಾದ ಕಾರ್ಯವು, ಈ ಕೆಲಸವು ದೇವತೆಗಳಿಂದ ಮಾತ್ರವೇ ಆಗತಕ್ಕುದಲ್ಲ. ನೀನು ಏನಾದರೂ ಯುಕ್ತಿಯಿಂದ ಈಗ ಮಾಡಿರುವ ತಂತ್ರವನ್ನೇ ಬಲಪಡಿಸಿ ದೇವತೆ ಗಳಿಗೂ ದೈತ್ಯರಿಗೂ ಸಂಧಿಯನ್ನು ಮಾಡಿ ಉಭಯ ಪಕ್ಷದವರನ್ನೂ ಕೂಡಿಸಿದರೆ ಈ ಕಾರ್ಯವು ನಿರ್ವಿಘ್ನವಾದೀತು ಎಂದು ಹೇಳಿದನು. ಅನಂತರದಲ್ಲಿ ಸುರಾಚಾರ್ಯನು ವಿಷ್ಣುವಿಗೆ ನಮಸ್ಕರಿಸಿ--ಮಹಾತ್ಮನಾದ ನಿನ್ನ ಕೃಪೆಯಿಂದ ನಿನ್ನ ಅಪ್ಪಣೆಯಂತೆಯೇ ಮಾಡುವೆನೆಂದು ಹೇಳಿ ಅನುಜ್ಞೆಯನ್ನು ಹೊಂದಿ ಅಲ್ಲಿಂದ ಹೊರಟು ನೈಮಿಶಾರಣ್ಯಕ್ಕೆ ಬಂದು ಏಕಾಂತದಲ್ಲಿ ದೇವೇಂದ್ರನ ಸಂಗಡ ತಾನು ಮಾಡಿರುವ ತಂತ್ರಾಲೋಚನೆಗಳ -ನ್ನೆಲ್ಲಾ ತಿಳಿಸಿ ಅಲ್ಲಿಂದ ಸ್ವರ್ಗಲೋಕವನ್ನು ಕುರಿತು ಹೊರಟನು. ಅಷ್ಟರಲ್ಲಿ ದೈತ್ಯರಾಜನು ರಸಾತಲದಿಂದ ಸ್ವರ್ಗಲೋಕಕ್ಕೆ ಹೋಗಿ ತ್ರಿಲೋಕಾ .ಧಿಸತ್ಯವನ್ನು ಮಾಡುತ್ತ ತಮ್ಮ ಗುರುಗಳಾದ ಶುಕ್ರಾಚಾರ್ಯರನ್ನು ಕುರಿತು ಸುರಾಚಾರ್ಯರಾದ ಬೃಹಸ್ಪತ್ವಾಚಾರ್ಯರು ಮೊದಲು ನಮ್ಮ ಬಳಿಗೆ ಬಂದು ರಾಜ್ಯ ಕಾರ್ಯವಿಷಯವಾಗಿ ಆಲೋಚಿಸಿಕೊಂಡು ಹೋಗಿ ಬಹಳ ದಿವಸಗಳಾದುವು. ಇನ್ನಾದರೂ ಬರಲಿಲ್ಲ, ನಮ್ಮ ಬಳಿಗೆ ಬಂದು ಸುಳ್ಳು ಮಾತುಗಳನ್ನು ಹೇಳಿ ನಮ್ಮನ್ನು ಉಬ್ಬಿಸಿ ಹೋದ ಹಾಗೆ ಕಾಣುತ್ತದೆ ಎಂದು ಹೇಳಲು ; ಅದಕ್ಕೆ ಶುಕ್ರಾಚಾರ್ಯರು ಅವರು ಸುಳ್ಳನ್ನು ಹೇಳತಕ್ಕವರಲ್ಲ, ಏನೋ ಮಹಾಕಾರ್ಯಪ್ರಯತ್ನದಿಂದ