ಪುಟ:ಕಥಾ ಸಂಗ್ರಹ - ಭಾಗ ೨.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು 13 ಶೂನ್ಯನಾಗಿ ಹೀಗೆ ಹರಟುತ್ತೀಯೆ ಎಂದು ಅಪಹಾಸ್ಯ ಮಾಡಲು ; ನಂದೀಶ್ವರನು ಇವನ ದುರಹಂಕಾರಕ್ಕೆ ಬಹುಕುಪಿತನಾಗಿ ದಶಕಂಠನನ್ನು ಕುರಿತು--ಎಲೆ ಖಳಾ ಧಮನೇ, ನಿನ್ನ ಶೌರ್ಯವು ನನ್ನಿ೦ದ ತೃಣಕ್ಕಾದರೂ ಎಣೆಯಾಗಿ ಎಣಿಸಲ್ಪಡುವುದಿ ಇವು, ನಿನ್ನನ್ನು ಕೊಲ್ಲುವುದು ನನಗೆ ಗಣನೆಯಲ್ಲವು, ನಿನ್ನ ಕೆಟ್ಟ ನಡತೆಗಳಿಂದ ನೀನೇ ಸಮಲನಾಗಿ ನಿರ್ಮಲನಾಗುವೆ ಇದು ನಿಜವು, ನೀನು ನನ್ನ ಮುಖವನ್ನು ನೋಡಿ ಕೋತಿಯ ಮುಖದಂತಿದೆ ಎಂದು ಹಾಸ್ಯ ಮಾಡಿದುದರಿಂದ ನಿನಗೆ ಕೋತಿಗ ಳಿಂದಲೇ ಪರಾಜಯವುಂಟಾಗಲಿ ಎಂದು ಶಾಪವನ್ನಿತ್ತನು. ಆ ಮೇಲೆ ದಶವಕ್ಕನು-- ಈ ಕೈಲಾಸಪರ್ವತವಲ್ಲ ವೇ ನನ್ನ ವಿಮಾನದ ಗತಿಯನ್ನು ತಡೆಯಿತು ? ಒಳ್ಳೆಯದು. ಮೊದಲಿದರ ಮಹಿಮೆಯನ್ನು ಮುರಿದು ಆ ಮೇಲೆ ಶಿವನ ಬಲುಮೆಯನ್ನು ನೋಡು ವೆನು ಎಂದು ವಿಮಾನದಿಂದಿಳಿದು ಮೊದಲು ಸುರಾಸುರರು ಸಮುದ್ರಮಥನಕ್ಕಾಗಿ ಮಂದರಾಚಲವನ್ನು ಮಹಾ ವಾಸುಕಿಯಿಂದ ಬಿಗಿದಂತೆ ಆ ಹರಾದ್ರಿಯನ್ನು ತನ್ನಿ ಪ್ರತ್ತು ತೋಳಳಿಂದಲೂ ಬಿಗಿದು ಊರ್ಧ್ವಲೋಕವು ಅಲ್ಲಾಡುತ್ತಿರಲು ಭೂತಲವು ರಸಾತಲಕ್ಕಿಳಿಯುತ್ತಿರಲು ದಿಗಂತಗಳು ಬಿರಿಯುತ್ತಿರಲು ಆರ್ಭಟಿಸಿ ಕಿತ್ತೆತ್ತಿದನು. ಅವನ ಬಾಹುಬಲವಿನ್ನೆ ನಿತಿರುವುದೋ ? ಖಳನು ಕಿತ್ತೆತ್ತಲು ಕೈಲಾಸಗಿರಿಯು ಮೇಲೆದ್ದಿತು. ಅವನಾಳುತನದ ಬಿಂಕಕ್ಕೆ ಅಖಿಳ ಜನವೂ ಗಡಗಡನೆ ನಡುಗಿತು. ಹರನಿಗೆ ಪಾರ್ವತಿಯಿಂದ ಅಪ್ರಾರ್ಥಿತಾಲಿಂಗನೆಯು ದೊರೆಯಿತು, ಮೃತ್ಯುಂಜ ಯನು-ಇದು ದಶಕಂಠನ ದುಸ್ಸೇಷ್ಟೆಯೆಂದರಿತು ಕೂಡಲೆ ತನ್ನ ಪಾದಾಂಗುಷ್ಠ ದಿಂದ ಮೆಟ್ಟಲು ಗಿರಿಯು ಕೆಳಗಿಳಿಯಿತು. ತಿರಿಗಿ ದಶಕಂಠನು ಮೇಲೆತ್ತಿದನು. ಹೀಗೇ ಆನೇಕಾವೃತ್ತಿ ದಶಕಂಠನು ಎತ್ತುತ್ತ ಭೂತೇಶನು ಅಮುಕುತ್ತ ಇರಲು ; ಆ ಕೈಲಾಸನಗವು ಭೂದೇವಿಯಾಡುತ್ತಿರುವ ತಿರಿಕಲ್ಲಿನಂತೊಪ್ಪುತ್ತಿದ್ದಿತು. - ಇಂತಿರಲು ಒಂದುಸಾರಿ ರಕ್ಕಸನ ಇಪ್ಪತ್ತು ನಿಡುದೋಳ ಳೂ ಆ ಗಿರಿಯ ಇರುಬಿನಲ್ಲಿ ಸಿಕ್ಕಲು ; ಅವನು ಕೋಪದಿಂದುಬ್ಬಿ ಬೊಬ್ಬಿರಿದೊಳನೂಕಿ ಎತ್ತಲಾಗಿ ಆಗ ಶಿವನು ಬಲವಾಗಿ ಮೆಟ್ಟಿ ದನು, ಆ ಮೇಲೆ ಖಳನ ದಿಟ ತನವಡಗಿತು, ಮನಸು ವ್ಯಥೆಗೊಳಗಾಯಿತು. ಬುದ್ದಿಯು ವಿಚಾರಗೆಟ್ಟಿತು. ಕಾರ್ಯವೇಗದಲ್ಲಿ ಮಾಂದ್ಯ ವುಂಟಾಯಿತು. ಆಗ ಇತಿಕರ್ತವ್ಯತಾಮಢನಾಗಿ ಭೂಮಿಯು ಬಿರಿಯುವಂತೆ ಆರ್ಭಟಿಸಿ ಬಹುಬಾಧೆಗೊಳಗಾಗಿ ಕೊರಗುತ್ತಿರಲು ; ಇದೇನು ? ಅತ್ಯದ್ಭುತಾರ್ಭಟ ಧ್ವನಿಯು ! ಲೋಕಾವಸಾನಸಮಯ ವೋ ? ಎಂದು ಮಾನವಾಮರ ನಾಗಾದಿಲೋ ಕಗಳು ಬಲು ನಡುಗಿದುವು. ಆ ಸಮಯದಲ್ಲಿ ಅವನ ಮಂತ್ರಿಗಳು ತನ್ನೊಡೆಯನ ವಿಪದವಸ್ಥೆ ಯನ್ನು ಕಂಡು--ಏನ್ಯ ದಶವದನನೇ, ನಿನ್ನ ಬಲವೇನಾಯಿತು ? ಜಗ ದೀಶನೊಡನೆ ನಿನಗೆ ಕಲಹವೇ ? ಸರ್ವಲೋಕಾಂತಕಾರಿಯನ್ನು ಕೆಣಕಿ ಬದುಕುವವ ರುಂಟೇ ? ಇಲ್ಲವು, ಅದು ಕಾರಣ ನೀನು ಶೀಘ್ರವಾಗಿ ಲೋಕಶಂಕರನಾದ ಶಂಕರ ನನ್ನು ಭಜಿಸು, ವೇದಗಳಿಂದ ಸ್ತುತಿಸು ಎಂದು ಹೇಳಲು ; ದಶಾಸ್ಯನು ಹಾಗೇ ಆಗ ಲೆಂದು ಅನೇಕ ಸಹಸ್ರ ಸಂವತ್ಸರಗಳ ವರೆಗೂ ಸಾಮಗಾನದಿಂದ ಸ್ತುತಿಸಿದನು. ಆಗ