ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

224 ಕಥಾಸಂಗ್ರಹ- ೫ ನೆಯ ಭಾಗ ದಿಗಳಿಂದ ತುಂಬಿ ಸದಾಕಾಲವೂ ಪ್ರಕಾಶಿಸುತ್ತಿದ್ದ ಕಾರಣ ಸುಭಿಕ್ಷಯೋಗದಿಂದ ಸರ್ವ ಪ್ರಜೆಗಳೂ ಸುಖವಾಗಿ ಸಕಲೈಶ್ವರ್ಯಸಂಪನ್ನರಾಗಿದ್ದರು. ಯಮನು ಆ ದೈತ್ಯರ ಭಯದಿಂದ ಬಾಧಿಸಲ್ಪಟ್ಟವನಾಗಿ ಅವರ ದೇಶದಲ್ಲಿ ಅಕಾಲಮರಣವು ಸಂಭ ವಿಸದಂತೆ ಜಾಗರೂಕತೆಯಿಂದ ಕಾದು ಕೊಂಡಿರುತ್ತಿದ್ದನು. ಆದಕಾರಣ ಅವರ ರಾಜ್ಯ ದಲ್ಲಿ ದಾರಿದ್ರ, ಕಷ್ಟ ಅಕಾಲಮರಣ ಇತ್ಯಾದಿಗಳನ್ನು ಸ್ವಷ್ಟ ದಲ್ಲಿಯಾದರೂ ಕಂಡು ಕೇಳಿದ ಪ್ರಜೆಯೇ ಇರಲಿಲ್ಲವು. ಈ ರೀತಿಯಾಗಿ ಹಿರಣ್ಯಕಶಿಪು ಹಿರಣ್ಯಾಕ್ಷರು ಏಕಛತ್ರಾಧೀಶ್ವರರಾಗಿ ಸಿರ್ಭ ಯದಿಂದ ರಾಜ್ಯಭಾರವನ್ನು ಮಾಡುತ್ತ ಇರಲು ; ಒಂದಾನೊಂದು ದಿವಸ ಲೋಕ ಸಂಚಾರ ಶೀಲನಾದ ನಾರದ ಮುನೀಶ್ವರನು ಇವರ ಮಹದೈಶ್ವರ್ಯವನ್ನು ನೋಡ ಬೇಕೆಂದು ಶೋಣಿತಪುರಕ್ಕೆ ಬರಲು ; ಆಗ ಹಿರಣ್ಯಕಶಿಪು ಹಿರಣ್ಯಾಕ್ಷರು ಒ೦ದ ನಾರದನನ್ನು ಎದುರುಗೊಂಡು ಕರೆದು ತಂದು ತಮ್ಮ ಸವಿಾಪದಲ್ಲಿ ಸುವರ್ಣಪೀಠಾ ಗ್ರದಲ್ಲಿ ಕುಳ್ಳಿರಿಸಿ ಯಥಾಮರಾದೆಯಿಂದ ಸನ್ಮಾನಿಸಿ-ಎಲೈ ಮುನಿಕುಲತಿಲಕನೇ, ನೀನು ಮರುಲೋಕಗಳನ್ನೂ ಸಂಚರಿಸುತ್ತಿರುವಿಯಲ್ಲ ! ಪೂರ್ವದಲ್ಲಿ ಯಾಗಲಿ ಈಗಾಗಲಿ ನಮ್ಮ ಹಾಗೆ ಸಕಲಸಂಪತ್ತಿನಿಂದ ಕೂಡಿ ರಾಜ್ಯಭಾರವನ್ನು ಮಾಡಿದ ವರೂ ಮಾಡುತ್ತಿರುವವರೂ ಉಂಟೇ ? ಎಂದು ಕೇಳಲು, ಆಗ ನಾರದಮುನಿಯು ನಿಮ್ಮ ಹಾಗೆ ರಾಜ್ಯಭಾರವನ್ನು ಮಾಡಿದವರೂ ಮಾಡುತ್ತಿರುವವರೂ ಮರು ಲೋಕಗಳಲ್ಲಿಯ ಒಬ್ಬರೂ ಇಲ್ಲ ಎಂದು ಹೇಳಿದನು. ಆ ಮಾತಿಗೆ ದೈತ್ಯಚಕ್ರೆ ಶ್ವರರು ಹಾಗಾದರೆ ಮುಂದೆಯಾದರೂ ನಮ್ಮ ಹಾಗೆ ಏಕಛತ್ರಾಧೀಶ್ವರತ್ರದಿಂದ ರಾಜ್ಯಭಾರ ಮಾಡುವವರು ಯಾರಾದರೂ ಹುಟ್ಟುವರೋ ? ಎಂದು ಕೇಳಲು; ಆ ಮಾತಿಗೆ ಮುನಿಯು-ಮುಂದೆ ನಿಮ್ಮ ವಂಶದಲ್ಲಿ ಬಲಿಚಕ್ರವರ್ತಿಯೆಂಬವನು ಹುಟ್ಟಿ ನಿಮಗಿಂತಲೂ ಅತಿಶಯವಾಗಿ ಸಾರ್ವಭೌಮತ್ವದಿಂದ ಈ ಭೂಮಂಡಲವನ್ನು ಆಳು ವೆನು, ಆದರೆ ವಿಷ್ಣುವು ಮೋಸಮಾಡಿ ಅವನ ಅಧಿಕಾರವನ್ನು ತಪ್ಪಿಸಿ ಭೂಮಿ ಯನ್ನು ಕಿತ್ತು ಕೊಳ್ಳುವನು ಎಂದು ಹೇಳಿದನು. ಆ ಮಾತನ್ನು ಕೇಳಿದ ಕ್ಷಣದ ಲ್ಲಿಯೇ ಕಿರಿಯವನಾದ ಹಿರಣ್ಯಾಕ್ಷನೆಂಬವನು ಮಹಾ ಕೋಪದಿಂದ ಕಣ್ಣುಗಳಲ್ಲಿ ಕಿಡಿಗಳನ್ನು ದುರಿಸುತ್ತ ತ್ರಿಲೋಕಭೀಕರ ಪರಾಕ್ರಮಶೀಲರಾದ ನಾವೂ ನಮ್ಮ ವಂಶ ದವರೂ ಆಳುವ ಈ ಧರಣಿಮಂಡಲವನ್ನು ನಮ್ಮ ಕಡೆಯಿಂದ ಕಿತ್ತು ಕೊಳ್ಳುವುದಕ್ಕೆ ವಿಷ್ಣುವು ಎಷ್ಟರವನು ? ಈ ಭೂಮಂಡಲವು ಅವನ ಕೈಗೆ ಸಿಕ್ಕದಂತೆ ಮಾಡಬೇ ಕೆಂದು ಯೋಚಿಸಿ ಆ ಕ್ಷಣದಲ್ಲಿಯೇ ಎದ್ದು ಭೂಮಂಡಲವನ್ನು ಚಾಪೆಯ ಹಾಗೆ ಸುತ್ತಿ ಕಂಕುಳಲ್ಲಿಟ್ಟು ಕೊಂಡು ಸಮುದ್ರವನ್ನು ಪ್ರವೇಶಿಸಿ ರಸಾತಲಕ್ಕೆ ಹೋಗಿ ಭೂಮಿಯನ್ನಲ್ಲಿಟ್ಟು ತನ್ನ ಮೈ ಗೊಬ್ಬಿನಿಂದ ದೇವತೆಗಳನ್ನು ಜಯಿಸಬೇಕೆಂದು ಭಯ ಕರಗದಾದಂಡವನ್ನು ತೆಗೆದು ಕೊಂಡು ಆರ್ಭಟಿಸುತ್ತ ಸುರಲೋಕಕ್ಕೆ ಹೊರಟು ಹೋದನು. ಅಷ್ಟರಲ್ಲಿಯೇ ಸಕಲದೇವತೆಗಳೂ ಮುನಿಜನಗಳೂ ಕೂಡಿ ಬ್ರಹ್ಮದೇವನ ಬಳಿಗೆ ಹೋಗಿ ಆತನನ್ನು ಕರೆದು ಕೊಂಡು ಕ್ಷೀರಸಮುದ್ರಕ್ಕೆ ಹೋಗಿ ಶ್ರೀಮಹಾವಿ