ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

226 ಕಥಾಸಂಗ್ರಹ-೫ ನೆಯ ಭಾಗ ಬಲದ ಉಬ್ಬಿನಿಂದ ಕೂಡಿ ಕಂಡ ಕಂಡವರನ್ನು ಕಾಳೆಗಕ್ಕೆ ಕರೆದು ಕರೆದು ಎದುರಾ ದವರನ್ನು ಹೊಡೆದು ನಾಶಮಾಡುತ್ತ ಬರುತ್ತಿರಲು ; ದೇವತೆಗಳಲ್ಲಿ ಒಬ್ಬರಾದರೂ ಅವನಿಗೆದುರಾಗದೆ ಅವನು ಕಾಣದ ಹಾಗೆ ಓಡಿಹೋಗಿ ಮೈಮರಸಿಕೊಳ್ಳುತ್ತ ಇದ್ದರು. ತರುವಾಯ ಹಿರಣ್ಯಾಕ್ಷನು ಎದುರಿಗೆ ನಿಂತು ಕಾದುವವರು ಯಾರೂ ಇಲ್ಲದೆ ಹೋಗಲು ; ಪುನಃ ಹೊರಟು ಬಲಿಷ್ಠರಾದವರನ್ನು ಹುಡುಕುತ್ತ ಆರ್ಭಟಿಸಿ ಕೊಂಡು ಅಮರಾವತೀಪಟ್ಟಣವನ್ನು ಹೊಗಲು ; ದೇವತೆಗಳೆಲ್ಲಾ ಅವನನ್ನು ಕಂಡು ಹೆದರಿ ಮೂರ್ಲೆಹೋಗಿ ಎದ್ದು ದಿಕ್ಕು ದಿಕ್ಕುಗಳಿಗೆ ಚದುರಿಹೋದರು, ಆಗ ಹಿರಣ್ಯಾ ಕ್ಷನು ದೇವೇಂದ್ರನ ಬಳಿಗೆ ಬಂದು ಅವನನ್ನು ಕುರಿತು.ಎಲೆ ಇಂದ್ರನೇ, ನೀನು ಈ ದೇವತೆಗಳಿಗೆಲ್ಲಾ ಒಡೆಯನೆನ್ನಿಸಿಕೊಂಡು ಜಂಭಾಸುರಪಾ ಕಾಸುರಾದಿ ಬಲಿಷ್ಠ ರಾದ ದೈತ್ಯರನ್ನು ಯುದ್ಧರಂಗದಲ್ಲಿ ಜಯಿಸಿ ಗರ್ವಿತನಾಗಿ ಜಂಭಾರಿ ಪಾಕಶಾಸನ ಎಂದು ಹೊಗಳಿಸಿಕೊಳ್ಳುತ್ತಿರುವಿಯಷ್ಟೆ, ತಡಮಾಡಬೇಡ ! ಏಳು! ನನ್ನೊಡನೆ ಕಾಳೆ ಗಕ್ಕೆ ನಿಲ್ಲು ! ನೋಡೋಣ ಎನ್ನಲು; ಆಗ ದೇವೇಂದ್ರನು ಬೆಚ್ಚಿ ಗಡಗಡನೆ ನಡು ಗುತ್ತ-ಅಯ್ಯಾ ಮಹಾತ್ಮನಾದ ದೈತ್ಯರಾಜನೇ, ಎಲ್ಲಾದರೂ ಎಂದಾದರೂ ಬೆಂಕಿ ಯೊಡನೆ ಅರಳೆಗೂ ಸಿಂಗದೊಡನೆ ಮೊಲಕ್ಕೂ ಗರುಡನೊಡನೆ ಹಾವಿಗೂ ಜಗಳವಾ ದರೆ ಅರಳೆ ಮೊಲ ಹಾವುಗಳು ನಾಮಮಾತಾವಶೇಷಗಳಾಗದೆ ಬದುಕುವುದುಂಟೇ? ಹಾಗೆ ನಾನು ಮಹಾವೀರನಾದ ನಿನ್ನೊಡನೆ ಜಗಳವಾಡಿ ಬದುಕಬಲ್ಲೆನೇ ? ಅಲ್ಪ ಬಲ ನಾದ ನಾನು ನಿನಗೆ ಸಮಾನನೇ ? ಎಂದು ದೈನ್ಯವಚನದಿಂದ ಬಹುವಿಧವಾಗಿ ಹೇಳಿ ಕೊಳ್ಳಲು ಆಗ ಹಿರಣ್ಯಾಕ್ಷನು-ಛೀ ! ಹೇಡಿಯೇ, ನೀನು ಗಂಡಸು ಎಂದು ಹುಟ್ಟ ಬಹುದೇ ? ಮೂರು ಲೋಕಗಳ ಅಧಿಪತಿಯೆನ್ನಿಸಿಕೊಂಡು ಹೀಗೆ ಸಾವಿಗೆ ಅಂಜಿ ಕಾಳೆಗಕ್ಕೆ ನಿಲ್ಲಲಾರದೆ ಹೋದ ನಿನ್ನ ಜನ್ಮವನ್ನು ಸುಡಬೇಕು ! ನೀನು ಪುರುಷಾಕಾ ರದ ಹೆಂಗಸೇ ಸರಿ ! ಎಂದು ಹೀಯಾಳಿಸಿ ಅವನನ್ನು ಬಿಟ್ಟು ಅಲ್ಲಿಂದ ಹೊರಟು ಅಗ್ನಿ ಯಮ ನಿರುತಿ ವಾಯು ಕುಬೇರಾಧ್ಯರ ನಗರಗಳಿಗೆ ಹೋಗಲು, ಅವರೆಲ್ಲರೂ ಪ್ರಚ೦ ಡನಾದ ಇವನು ಬರುವ ವರ್ತಮಾನವನ್ನು ಕೇಳಿ ಇವನ ಕಣ್ಣುಗಳಿಗೆ ಕಾಣಿಸಿಕೊ ಳ್ಳದೆ ತೋರಿದ ಕಡೆಗೆ ಓಡಿಹೋಗಿ ಅವಿತು ಕೊಂಡರು. ಅದನ್ನು ಕಂಡು ಹಿರಣ್ಯಾಕ್ಷನು--ಅಯ್ಯೋ, ನನಗೆ ಎದುರಾಗಿ ಕಾಳೆಗಕ್ಕೆ ನಿಂತು ಕಾದುವವರು ಯಾರೂ ಇಲ್ಲದೆ ಹೋದರಲ್ಲಾ ! ನಾನು ಎಷ್ಟು ವಿಶೇಷವಾಗಿ ಹುಡು ಕಿಕೊಂಡು ತಿರುಗಿದಾಗ ನಿಷ್ಟ್ರಯೋಜನವಾಯಿತಲ್ಲಾ! ನನ್ನ ತೋಳೋಟೆಯನ್ನು ಎಲ್ಲಿ ಹೋಗಿ ಕಳೆದು ಕೊಳ್ಳುವೆನೋ ತಿಳಿಯದಲ್ಲಾ ! ಎಂದು ಯೋಚಿಸುತ್ತ ಸಮುದ್ರವನ್ನು ಹೊಕ್ಕು ವರುಣನ ಪಟ್ಟಣಕ್ಕೆ ಹೋಗಿ ಆತನನ್ನು ಹಿಡಿದು ಬೇಗ ಕಾಳೆಗಕ್ಕೆ ಬಾರೋ, ಎಂದು ಕರೆಯಲು, ಆಗ ಆತನು ಭಯಚಕಿತಮನಸ್ಸುಳ್ಳವನಾಗಿ ದೈನ್ಯದಿಂದ ಕೂಡಿ --ಮಹಾಪರಾಕ್ರಮಶಾಲಿಯಾದ ನಿನ್ನೊಡನೆ ಎದುರಾಗಿ ನಿಂತು ಕಾದುವುದಕ್ಕೆ ಕ್ಷು ಪ್ರಬಲನಾದ ನನಗೆ ಶಕ್ತಿಯುಂಟೇ ? ಜಗದೇಕವೀರನಾದ ನಿನ್ನೊಡನೆ ಕಾದುವು ದಕ್ಕೆ ನನಗೆ ಶಕ್ತಿಯಿಲ್ಲವೆಂದು ಕೈಮುಗಿದು ಬೇಡಿಕೊಳ್ಳಲು ; ಆಗ ದೈತ್ಯನು ವ್ಯಸ