ಪುಟ:ಕಥಾ ಸಂಗ್ರಹ - ಭಾಗ ೨.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

232 ಕಥಾಸಂಗ್ರಹ-೫ ನೆಯ ಭಾಗ “ ಹೇಳಿ ಆಹುತಿಗಳನ್ನು ಕೊಡಬೇಕೇ ಹೊರತು ಇಂದ್ರನೇ ಮೊದಲಾದ ಯಾವ ದೇವ ತೆಗಳ ಹೆಸರನ್ನಾದರೂ ಹೇಳಿಕೊಡಕೂಡದು ಎಂದು ಎಲ್ಲರಿಗೂ ಕಟ್ಟು ಮಾಡಿಸಿ ತಾನೇ ತಾನಾಗಿ ಸರ್ವರಿಂದಲೂ ಓಲೈಸಲ್ಪಡುತ್ತ ಅಖಂಡೇಶ್ವರ್ಯಸಂಪನ್ನ ನಾಗಿದ್ದನು. ಹೀಗಿರುವಲ್ಲಿ ಒಂದಾನೊಂದು ದಿವಸ ಸಭೆಯಲ್ಲಿ ಕುಳಿತು ಸರ್ವಲೋಕಪ್ರಜಾ ಸೇವ್ಯಮಾನನಾಗಿ ಹಿರಣ್ಯಕಶಿಪುವು ಮಹಾ ವ್ಯಸನಾಕ್ರಾಂತನಾಗಿ-ನೀಚನಾದ ವಿಷ್ಣುವು ಮಹಾವೀರನಾದ ನನ್ನ ತಮ್ಮನನ್ನು ಕೊಂದನಲ್ಲಾ ಎಂದು ಹೇಳಿ ಅಂಥ ವಿಷ್ಣುವನ್ನು ಕೊಂದುಹಾಕದೆ ನಾನು ಬದುಕಿರುವುದೂ ಈ ಸಕಲ ಲೋಕದವರಿಂದ ಸೇವೆ ಮಾಡಿಸಿಕೊಳ್ಳುವುದೂ ಈ ನನ್ನ ತ್ರಿಲೋಕಾಧಿಪತ್ಯವೂ ವ್ಯರ್ಥವೆಂದು ಯೋಚಿಸಿ ಆ ನೀಚನಾದ ವಿಷ್ಣುವು ಎಲ್ಲಿದ್ದರೂ ಅವನನ್ನು ಹಿಡಿದು ಕೊಂದುಹಾಕಬೇಕೆಂದು ನಿರ್ಧರಿಸಿ ತನ್ನ ಚತುರಂಗಬಲದೊಡನೆ ಕೂಡಿ ಹೊರಟನು. ಆಗ ಆತನ ಮಹಾ ಸೇ ನೆಯ ರಭಸಕ್ಕೆ ಹದಿನಾಲ್ಕು ಲೋಕಗಳೂ ಅಲ್ಲೋಲಕಲ್ಲೋಲಗಳಾಗಿ ಬೆದರಿ ಕಳವ ಳಿಸಿ ಕ್ಷೀರಸಮುದ್ರತೀರಕ್ಕೆ ಓಡಿಹೋಗಿ ಮಹಾವಿಷ್ಣುವಿನೊಡನೆ ದೂರನ್ನು ಹೇಳಿ ಕೊಂಡುವು. ಆಗ ಆತನು--ಆ ದುಷ್ಟನಾದ ಹಿರಣ್ಯಕಶಿಪುವನ್ನು ತಿರುಗಿ ಅವನ ಪಟ್ಟಣಕ್ಕೆ ಹೋಗುವಂತೆ ಮಾಡುವೆನು” ನೀವು ಭಯಪಡಬೇಡಿರಿ. ನಿಮ್ಮ ನಿಮ್ಮ ಲೋಕಗಳಿಗೆ ಹೋಗಿ ಸ್ವಸ್ಥವಾಗಿ ಇರಿ ಎಂದು ಹೇಳಿ ನಂಬಿಕೆಯನ್ನು ಕೊಟ್ಟು ಕಳು ಹಿಸಿ ಆ ಮೇಲೆ ತಾನು ಹಿರಣ್ಯಕಶಿಪುವು ಬರುವ ಮಾರ್ಗದಲ್ಲಿ ಮಾಯೆಯಿಂದ ಒಂದು ಋಷ್ಯಾಶ್ರಮವನ್ನು ಕಲ್ಪಿಸಿ ತಾನು ಜಡೆಯನ್ನು ಧರಿಸಿಕೊಂಡು ಕಂಠದಲ್ಲಿ ರುದ್ರಾ ಕೀಮಾಲಿಕೆಗಳನ್ನೂ ತಲೆಗೆ ರುದ್ರಾಕ್ಷಿಗಳಿಂದ ಮಾಡಿದ ಕುಲಾವಿಯನ್ನೂ ಕೈಗ ಳಿಗೆ ರುದ್ರಾಕ್ಷಿಗಳಿಂದ ಮಾಡಿದ ಕಂಕಣಗಳನ್ನೂ ಧರಿಸಿಕೊಂಡು ಬಲಗೈಯಿಯ ಅನಾಮಿಕಾ೦ಗುಳಿಗೆ ದರ್ಭೆಯ ಹುಲ್ಲಿನಿಂದ ಮಾಡಿದ ಪವಿತ್ರಾಂಗುಳೀಯಕವನ್ನು ಇಟ್ಟು ಕೊಂಡು ಒಂದು ಕೌಪೀನವನ್ನು ಮಾತ್ರ ಧರಿಸಿ ಆಶ್ರಮದಲ್ಲಿರುವ ಒಂದು ನಿರ್ಮಲೋದಕಯುಕ್ತವಾದ ಕೊಳದ ದಡದಲ್ಲಿ ದೊಡ್ಡದಾದ ಹುಲಿಯ ಚರ್ಮ ವನ್ನು ಹಾಸಿ ಅದರ ಮೇಲೆ ಕುಳಿತುಕೊಂಡು ಆ ಕೊಳದ ಪಾವಟಿಗೆಯ ಕಲ್ಲಿನ ಮೇಲೆ ಮಳಲಿನಿಂದ ಒಂದು ದೊಡ್ಡ ಲಿಂಗವನ್ನು ಮಾಡಿ ಆ ಲಿಂಗವನ್ನು ತುಂಬೆ ಹೂವುಗಳಿಂದಲೂ ಗಣಿಗಲೆ ಹೂವುಗಳಿಂದಲೂ ಉಮ್ಮತದ ಹೂವುಗಳಿಂದಲೂ ಬಿಲ್ಕ ಪತ್ರಗಳಿಂದಲೂ ಗಂಧಾಕ್ಷತೆಗಳಿಂದಲೂ ಚೆನ್ನಾಗಿ ಪೂಜೆಮಾಡಿ ಶಿವಧ್ಯಾನ ವನ್ನು ಮಾಡುತ್ತ ಪಾಶುಪತಮತಸ್ಥನಾದ ಮಹಾಮುನಿಯಂತೆ ಬಾಹ್ಯವ್ಯಾಪಾ ರವನ್ನು ಮರೆತು ಚಿತ್ತೈಕಾಗ್ರತೆಯಿಂದ ಕುಳಿತುಕೊಂಡಿದ್ದನು. ಅನಂತರದಲ್ಲಿ ಹಿರಣ್ಯಕಶಿಪುವು ತನ್ನ ಚತುರಂಗಬಲ ಸಮೇತನಾಗಿ ದಾರಿ ಯಲ್ಲಿ ಬರುತ್ತ ಈ ಕಪಟ ಶಿವಯೋಗಿಯನ್ನು ಕಂಡು-ಇವನಾರೋ ಮಹಾತ್ಮ ನಾದ ಶಿವಯೋಗಿಯಾಗಿ ಕಾಣುತ್ತಾನೆ ಎಂದು ಯೋಚಿಸಿ ತಾನು ಹತ್ತಿಕೊಂಡಿದ್ದ ಅಂದಣದಿಂದಿಳಿದು ಶೀಘ್ರವಾಗಿ ಆ ಕಪಟ ಶಿವಯೋಗಿಯ ಬಳಿಗೆ ಬಂದು ವಿಶೇಷ ವಾದ ಭಯಭಕ್ತಿಯಿಂದ ಸಾಷ್ಟಾಂಗಪ್ರಣಾಮವನ್ನು ಮಾಡಿ ಎದ್ದು ಕೈಮುಗಿದು