ಪುಟ:ಕಥಾ ಸಂಗ್ರಹ - ಭಾಗ ೨.djvu/೨೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನರಸಿಂಹಾವತಾರದ ಕಥೆ 233 ನಿಂತುಕೊಂಡು--ಎಲೈ ಮಹಾನುಭಾವನೇ, ಸರ್ವಜ್ಞನಾದ ನೀನು ಭೂತಭವಿಷ್ಯ ದ್ವರ್ತಮಾನ ವಿಷಯಗಳನ್ನೂ ಸ್ವರ್ಗಮರ್ತ್ಯಪಾತಾಳಾದಿ ಸಕಲಲೋಕ೦ಗಳಲ್ಲಿಯ ನಡೆಯುವ ವಿಷಯಗಳನ್ನೂ ಚೆನ್ನಾಗಿ ತಿಳಿದಂಥ ಮಹಾಜ್ಞಾನನಿಧಿಯು ಎಂದು ತಿಳಿದು ನಿನ್ನನ್ನು ಕುರಿತು ಒಂದು ಸಂಗತಿಯನ್ನು ಬಿನ್ನವಿಸಿಕೊಳ್ಳುತ್ತೇನೆ. ಅದೇ ನೆಂದರೆ--ಮಾಯಾವಿಯಾದ ವಿಷ್ಣುವು ಹಂದಿಯ ರೂಪನ್ನು ಧರಿಸಿ ಬಂದು ನನ್ನ ತಮ್ಮ ನನ್ನು ಕೊಂದುಹಾಕಿದನು, ಆ ಮಹಾ ದುಃಖಪರಿಹಾರಾರ್ಥವಾಗಿ ನಾನು ಆತ ನನ್ನು ಕೊಂದುಹಾಕಬೇಕು ಎಂದು ನನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡು ಈ ವರೆಗೂ ಎಷ್ಟು ವಿಧವಾಗಿ ಎಲ್ಲೆಲ್ಲಿ ಹುಡುಕಿದಾಗ್ಯೂ ಸಿಕ್ಕಲಿಲ್ಲ, ಈಗ ನಾನು ಸರೋಜಸಂಭವನ ವರಬಲದಿಂದ ಮರಣವಿಲ್ಲದವನಾಗಿದ್ದೇನೆ. ಅದು ಕಾರಣ ಮಹಾ ತ್ಯನಾದ ನೀನು ಶರಣಾಗತನಾದ ನನ್ನ ಮೇಲೆ ದಯೆಯಿಟ್ಟು ಆ ಕಪಟಿಯಾದ ವಿಷ್ಣುವು ಎಲ್ಲಿರುವನೆಂಬುದನ್ನು ಜ್ಞಾನದೃಷ್ಟಿಯಿಂದ ನೋಡಿ ತಿಳಿದು ಹೇಳಿದರೆ ನಿನ್ನ ದಯೆಯಿಂದ ಆತನನ್ನು ಕೊಂದು ನನ್ನ ಒಡಿಗೆಯನ್ನು ತೀರಿಸಿಕೊಂಡು ಸಂತೋಷದಿಂದಿರುವೆನು ಎಂದು ಹೇಳಿದನು. ಆ ಮಾತುಗಳನ್ನು ಕೇಳಿ ಕಪಟಶಿವಯೋಗಿರೂಪಧಾರಿಯಾದ ವಿಷ್ಣು ವು ಕೂಡಲೆ ಕಣ್ಣುಗಳನ್ನು ಮುಚ್ಚಿಕೊಂಡು ಒಂದು ಗಳಿಗೆಯ ವರೆಗೂ ಧ್ಯಾನಿಸುವವನ ಹಾಗಿದ್ದು ಆ ಮೇಲೆ ನಿಧಾನವಾಗಿ ಕಣ್ಣುಗಳನ್ನು ತೆರೆದು ಆ ಹಿರಣ್ಯಕಶಿಪುವನ್ನು ನೋಡಿ ನಸುನಗುತ್ತ -ಎಲೈ ದೈತ್ಯರಾಜನೇ, ನೀನು ಹೇಳಿದಂತೆ ಆ ವಿಷ್ಣು ವು ಮಹಾಕಪಟಿಯೇ ಅಹುದು, ಆತನಿರುವ ಸ್ಥಳಗಳು ಮರು, ಅವು ಯಾವುವಂದರೆ ವೈಕುಂಠ, ಕ್ಷೀರಸಮುದ್ರ, ಸೂರ್ಯಮಂಡಲ, ಇವುಗಳು. ಈಗ ನೀನು ವರಬ ಲದಿಂದ ಅವಧ್ಯನಾಗಿರುವಿ ಎಂದು ತಿಳಿದು ವಿಶೇಷವಾಗಿ ನಿನ್ನ ಭಯದಿಂದ ಕೂಡಿದ ವನಾಗಿ ಈಗ ಆ ಮರು ಸ್ಥಳಗಳನ್ನೂ ಬಿಟ್ಟು ಬಂದು ನಿನ್ನ ಹೊಟ್ಟೆ ಯಲ್ಲೇ ಸೇರಿ ಕೊಂಡಿದ್ದಾನೆ ಅಂದನು. ಅದಕ್ಕೆ ಆಶ್ಚರ್ಯಯುಕ್ತನಾದ ಹಿರಣ್ಯಕಶಿಪುವು-ಎಲೈ ಮುನಿಪತಿಯೇ, ಅವನು ನನ್ನ ಹೊಟ್ಟೆ ಯನ್ನು ಪ್ರವೇಶಿಸುವುದು ಹೇಗೆ ? ಈ ಮಾತು ಸುಳ್ಳಾಗಿ ತೋರುತ್ತಿರುವುದಲ್ಲಾ ! ಎನ್ನಲು, ಆ ಮೇಲೆ ಕಪಟಶಿವಯೋಗಿಯುನಾನು ಎಂದಿಗಾದರೂ ಸುಳ್ಳು ಹೇಳತಕ್ಕವನಲ್ಲ, ಪಾರಮಾರ್ಥಿಕಜ್ಞಾನಿಯಾದ ನನಗೆ ಲೌಕಿಕರಲ್ಲಿ ನಿಕೃಷ್ಟರಿಗೆ ಯೋಗ್ಯವಾದ ಸುಳ್ಳಿನಿಂದ ಏನು ಪ್ರಯೋಜನವು ? ಇದೋ, ನಿನಗೆ ಪರೀಕ್ಷೆಯಿಂದ ತೋರಿಸಿಕೊಡುವೆನು ಎಂದು ಹೇಳಿ ಆ ಕ್ಷಣದಲ್ಲಿಯೇ ಅದೃಶ್ಯನಾಗಿ ಹಿರಣ್ಯಕಶಿಪುವಿನ ಹೊಟ್ಟೆಯನ್ನು ಹೊಕ್ಕು-ಎಲಾ, ಖಳನಾದ ರಕ್ಕ ಸನೇ, ನಾನು ದುಷ್ಟನಾದ ನಿನ್ನನ್ನು ಕೊಂದುಹಾಕುವ ವರೆಗೂ ಮತ್ತೆಲ್ಲಿಯ ಇರದೆ ನಿನ್ನ ಹೊಟ್ಟೆ ಯಲ್ಲಿಯೇ ಇರುವೆನು, ನೀನು ಎಷ್ಟು ಪ್ರಯಾಸಪಟ್ಟು ಎಲ್ಲೆಲ್ಲಿ ಹುಡುಕಿದಾಗ ನಾನು ನಿನಗೆ ಸಿಕ್ಕುವುದಿಲ್ಲ ವು. ನೀನು ನನ್ನನ್ನು ನೋಡಬೇಕಾದರೆ ನೀನೇ ನಿನ್ನ ಹೊಟ್ಟೆಯನ್ನು ಸೀಳಿಕೊಂಡು ನೋಡು, ಆಗ ನಾನು ನಿನಗೆ ಕಾಣಿಸಿ ಕೊಳ್ಳುವೆನು, ಮಹಾತ್ಮನಾದ ಶಿವಯೋಗಿಯು ಹೇಳಿದ ಮಾತು ಎಂದಿಗೂ ಸುಳ್ಳಾಗ