ನರಸಿಂಹಾವತಾರದ ಕಥೆ 235 ಲಿಸುವಿ ? ಎಂದು ಕೇಳಿಕೊಂಡರು. ಅದಕ್ಕೆ ವಿಷ್ಣು ವು ಸ್ವಲ್ಪ ಯೋಚಿಸಿ ಇಂದ್ರನನ್ನು ಕರೆದು ಏಕಾಂತದಲ್ಲಿ ಒಂದು ಮಾತನ್ನು ಹೇಳಿದುದರಿಂದ ಅದರಿಂದ ದೇವೇಂದ್ರನು ಬಹಳವಾಗಿ ಸಂತೋಷಪಟ್ಟು ಕೊಂಡು ಮಹಾವಿಷ್ಣುವಿಗೆ ದೀರ್ಘದಂಡನಮಸ್ಕಾರ ವನ್ನು ಮಾಡಿ ಸರ್ವದೇವತಾಸಮಹದೊಡನೆ ತಿರುಗಿ ತನ್ನ ನಗರವಾದ ಅಮರಾವತಿಗೆ ಬಂದು ವಿಷ್ಣುವು ಗುಟ್ಟಾಗಿ ತನ್ನೊಡನೆ ಹೇಳಿದಂತೆ ತನ್ನ ಸಮಸ್ತ ಪರಿವಾರದೊಡನೆ ಕೂಡಿ ರಾತ್ರಿ ವೇಳೆಯಲ್ಲಿ ಹೊರಟು ಹಿರಣ್ಯಕಶಿಪುವಿನ ರಾಜಧಾನಿಯಾದ ಶೋಣಿತ ಪುರಕ್ಕೆ ಒಮ್ಮಿಂದೊಮ್ಮೆ ಮುತ್ತಿಗೆಯನ್ನು ಹಾಕಿ ಪಟ್ಟಣವನ್ನು ಹೊಕ್ಕು ಸರ್ವರನ್ನೂ ವಿವಿಧವಾಗಿ ಹಿಂಸಿಸಿ ಮಂತ್ರಿ ಸೇನಾಪತಿ ಸೈನ್ಯಾದಿ ಸಕಲ ದೈತ್ಯರನ್ನೂ ಹೊಡೆದು ಸೋಲಿಸಿ ಅಂತಃಪುರವನ್ನು ಹೊಕ್ಕು ಪೂರ್ಣಗರ್ಭಿಣಿಯಾಗಿದ್ದ ಆ ಹಿರಣ್ಯಕಶಿಪುವಿನ ಪತ್ನಿ ಯನ್ನು ಸೆರೆಹಿಡಿದುಕೊಂಡು ಹಿಂದಿರುಗಿ ಬಂದು ಅಮರಾವತೀ ಪಟ್ಟಣವನ್ನು ಸೇರಿದನು. ಆ ಕೂಡಲೆ ನಾರದಮಹಾಮುನೀಶ್ವರನು ದೇವೇಂದ್ರನ ಬಳಿಗೆ ಬಂದು ಏನೈಯ್ಯಾ ಇಂದ್ರನೇ, ನೀನು ಸಕಲ ಧರ್ಮಶಾಸ್ತ್ರಗಳನ್ನೂ ತಿಳಿದು ಬುದ್ದಿವಂತನಾಗಿ ಇಂಥ ಅನುಚಿತವಾದ ಕೆಲಸವನ್ನು ಮಾಡಬಹುದೇ ? ಮಹಾಪತಿವ್ರತೆಯ ಸಕಲ ಲೋಕೋಪಕಾರಿಣಿಯ ಆದ ಈ ಹಿರಣ್ಯಕಶಿಪುವಿನ ಪಟ್ಟದರಸಿಯನ್ನು ಸೆರೆಯಾಗಿ ಹಿಡಿದು ಕೊಂಡು ಬಂದುದು ಬಲು ತಪ್ಪಾಯಿತು. ಇದರಿಂದ ನಿನಗೆ ಹಾನಿಯು ತಟ್ಟದೆ ಇರದು ಮತ್ತು ಈ ಮಹನೀಯಳ ಗರ್ಭದಲ್ಲಿ ಪರಮವೈಷ್ಣ ವಶಿಖಾಮಣಿಯು ಇದ್ದಾನೆ, ಈತನು ಹುಟ್ಟಿ ಆ ಹಿರಣ್ಯಕಶಿಪುವನ್ನು ಕೊಲ್ಲಿಸಿ ನಿಮ್ಮ ನಿಮ್ಮ ಪದವಿ ಗಳು ನಿಮಗೆ ಯಥಾಪ್ರಕಾರವಾಗಿ ದೊರೆಯುವ ಹಾಗೆ ಮಾಡಿ ಸರ್ವಲೋಕಗ ಳನ್ನೂ ಸಂತೋಷಪಡಿಸುವನು. ಆದುದರಿಂದ ಈ ಮಹಾಪತಿವ್ರತಾ ಶಿರೋಮಣಿಯಾದ ಈಕೆಯನ್ನು ನೀನೇ ಹಿಂದಿರುಗಿ ಸುರಕ್ಷಿತವಾಗಿ ಕರೆದುಕೊಂಡುಹೋಗಿ ಆಕೆಯ ಅಂತಃಪುರದಲ್ಲಿ ಬಿಟ್ಟು ಬಾ ಎಂದು ಹೇಳಿದನು. ತರುವಾಯ ಸುರೇಂದ್ರನು ನಾರದ ಮಹಾಮುನಿಯು ಹೇಳಿದ ಮಾತುಗಳಿಗೆ ಒಡಂಬಟ್ಟು ಆಕೆಯನ್ನು ಪಾಲಕಿಯಲ್ಲಿ ಕುಳ್ಳಿರಿಸಿಕೊಂಡು ಬಹಳ ಗೌರವದಿಂದ ಶೋಣಿತಪುರಕ್ಕೆ ಕರೆದುಕೊಂಡು ಬಂದು ಆಕೆಯ ಅಂತಃಪುರದಲ್ಲಿ ಬಿಟ್ಟು ಹಿಂದಿರುಗಿ ಹೊರಟು ನಿಜನಗರವಾದ ಅಮರಾವತಿಗೆ ಬಂದನು. ಅಷ್ಟರೊಳಗೆ ದೇವತೆಗಳಿಂದ ಪರಾಜಿತರಾಗಿದ್ದ ಹಿರಣ್ಯಕಶಿಪುವಿನ ಮಂತ್ರಿ ಗಳು ಮಹಾ ಭಯವ್ಯಸನಗಳಿಂದ ಕೂಡಿದವರಾಗಿ ಹಿಮವತ್ಪರ್ವತಕ್ಕೆ ಓಡಿಹೋಗಿ ಅಲ್ಲಿ ತಪಸ್ಸನ್ನು ಮಾಡುತ್ತಿರುವ ನಿಜಸ್ವಾಮಿಯಾದ ಹಿರಣ್ಯಕಶಿಪುವನ್ನು ಕಂಡು ಮಹಾ ವ್ಯಸನದಿಂದ ಕೂಡಿ-ಮೋಸಗಾರರೂ ದುಷ್ಟ ರೂ ಆದ ದೇವತೆಗಳು ಸಮರಾತ್ರಿಯಲ್ಲಿ ಬಂದು ನಮ್ಮನ್ನೆಲ್ಲಾ ಜಯಿಸಿ ಅಂತಃಪುರವನ್ನು ಹೊಕ್ಕು ಪಟ್ಟದರಸಿಯನ್ನು ಕೈಸೆರೆ ಹಿಡಿದು ಕೊಂಡು ಹೋದರು ಎಂದು ಹೇಳಿ ದುಃಖಿಸಲು ; ಆಗ ಹಿರಣ್ಯಕಶಿಪುವು ಪ್ರಳಯ ಕಾಲದ ಭೈರವನಂತೆ ರೌದ್ರಾಕಾರಧರನಾಗಿ-ಸಮಸ್ತ ದೇವಸಮೂಹವನ್ನೂ ಕ್ಷಣಕಾಲದಲ್ಲಿ ಸುಟ್ಟು ಬೂದಿಮಾಡಿ ಹಣೆಗೆ ಹತ್ತಿಸಿಕೊಳ್ಳುವೆನು. ಚತುರ್ದಶಭುವನ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೪೫
ಗೋಚರ