ಪುಟ:ಕಥಾ ಸಂಗ್ರಹ - ಭಾಗ ೨.djvu/೨೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


240 ಕಥಾಸಂಗ್ರಹ-೫ ನೆಯ ಭಾಗ ಈ ಮಾತುಗಳನ್ನು ಕೇಳಿ ಪ್ರಹ್ಲಾದನು-ಎಲೆ ತಂದೆಯೇ, ಪರಾತ್ಪರನೂ ಸರ್ವಾ೦ ತರ್ಯಾಮಿಯ ಸಮಸ್ತ ದೇವತೋತ್ತಮನೂ ಆದ ಮಹಾವಿಷ್ಣು ವು ನಿರಂತರದಲ್ಲೂ ನನ್ನ ಹೃದಯಾರವಿಂದದ ಕರ್ಣಿಕಾ ಮಧ್ಯದಲ್ಲಿ ನೆಲೆಗೊಂಡಿರುವಲ್ಲಿ ಈ ಮೂರ್ಖ ನಾದ ಗುರುವು ನನಗೆ ಹೇಳಿಕೊಡುವುದೇನು ? ದಡ್ಡನಾದ ಇವನಿಂದ ನಾನು ಕಲಿತು ಕೊಳ್ಳುವುದೇನು ? ನನಗೆ ತಂದೆಯ ತಾಯಿಯ ಗುರುವೂ ಬಂಧುವೂ ಮಿತ್ರನೂ ಸಕಲೈಶ್ವರ್ಯವೂ ಸರ್ವೋಪನಿಷನ್ನಿತಂಬಿನೀಸೀಮಂತರತ್ನ ಪ್ರಾಯನಾದ ಶ್ರೀಹರಿಯೇ ಆಗಿರುವಲ್ಲಿ ನನಗೆ ಅನ್ಯರ ದ್ವೇಷದಿಂದಲೂ ಸ್ನೇಹದಿಂದಲೂ ಪ್ರಯೋಜನವೇನು ? ಅದು ಕಾರಣ ನಾನು ಯಾರು ಏನನ್ನು ಹೇಳಿದಾಗ ಕೇಳುವುದಿಲ್ಲ, ನನಗೆ ಒಬ್ಬರ ಲಕ್ಷ್ಯವೂ ಇಲ್ಲ ಎಂದು ನಿರ್ದಾಕ್ಷಿಣ್ಯದಿಂದ ಹೇಳಿಬಿಟ್ಟನು. - ಆ ಮಾತುಗಳನ್ನು ಕೇಳಿದ ಕೂಡಲೆ ಹಿರಣ್ಯಕಶಿಪುವು ಮಹೋಗ್ರಕೋಪ ಕಂಪಿತಾಧರನಾಗಿ ಕಟಕಟನೆ ಹಲ್ಲ ಡಿದು ಆರ್ಭಟಿಸಿ ಕಟುಕರನ್ನು ಕರಿಸಿ. ಈ ಪಾಪಿ «ನಾದ ಹುಡುಗನನ್ನು ಶೀಘ್ರವಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಕಡಿದು ಹಾಕಿ ಬನ್ನಿರೆಂದು ಅಪ್ಪಣೆಯನ್ನು ಕೊಡಲು ; ಆ ಕೂಡಲೆ ಕಟುಕರು ಆ ಪ್ರಜ್ಞಾ ದನನ್ನು ಹಿಡಿದು ಕೊಂಡು ಸ್ಮಶಾನಕ್ಕೆ ತೆಗೆದು ಕೊಂಡು ಹೋಗಿ ಅಲ್ಲೂ ಎಡೆಬಿಡದೆ ಹರಿನಾಮ ಕೀರ್ತನೆಯನ್ನು ಮಾಡುತ್ತಿವ ಪ್ರಹ್ಲಾದನನ್ನು ಹಿಡಿದು ಸಕಲ ವಿಧವಾದ ಆಯುಧಗಳಿಂದಲೂ ಕಡಿದು ತಿವಿದು ಕೆತ್ತಿ ಕೊತ್ತಿದಾಗೂ ಆ ಆಯುಧಗಳೆಲ್ಲಾ ಮುರಿದು ತುಂಡು ತುಂಡಾಗಿ ಹೋದುವಲ್ಲದೆ ಅವನ ಶರೀರಕ್ಕೆ ಸ್ವಲ್ಪವೂ ಗಾಯ ವಾದರೂ ನೋವಾದರೂ ಆಗದೆ ಅವನು ಸಂತೋಷದಿಂದ ಹರಿಸ್ತೋತ್ರವನ್ನು ಮಾಡುತ್ತ ಇರುವುದನ್ನು ನೋಡಿ ಅವರೆಲ್ಲರೂ ಆಶ್ಚರ್ಯಾನ್ವಿತರಾಗಿ ಹಿರಣ್ಯಕಶಿಪುವಿನ ಬಳಿಗೆ ಬಂದು ನಡೆದ ಸಂಗತಿಯನ್ನೆಲ್ಲಾ ಯಥಾಪ್ರಕಾರವಾಗಿ ತಿಳಿಸಿ ಈತನನ್ನು ಕೊಲ್ಲುವು ದಕ್ಕೆ ಖಂಡಿತವಾಗಿ ನಮ್ಮಿಂದಾಗುವುದಿಲ್ಲವೆಂದು ಹೇಳಿದರು. ಆಗ ಹಿರಣ್ಯಕಶಿಪುವು ಭಯಾಶ್ಚರ್ಯಯುಕ್ತನಾಗಿ--ನನಗೆ ಹಗೆಯಾದ ಹರಿಯೇ ಈ ಮಗನ ರೂಪದಿಂದ ಹುಟ್ಟಿರಬೇಕು, ಏಕೆಂದರೆ ಅವನು ಮಹಾಮಾಯಾವಿಯು, ಈಗ ಇವನನ್ನು ಕೊಂದುಹಾಕಿಬಿಟ್ಟರೆ ಆ ವಂಚಕನಾದ ಹರಿಯನ್ನೇ ಕೊಂದುಹಾಕಿದ ಹಾಗೆ ಆಗು ವುದು, ಇದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿ ದೂತರನ್ನು ಕರಿಸಿ-ಇವನ ಕೈಕಾಲುಗಳನ್ನು ಕಟ್ಟಿ ಸಮುದ್ರ ಮಧ್ಯದಲ್ಲಿ ಹಾಕಿಬಿ ಡಿರಿ ಎಂದು ನೇಮಿಸಿದನು, ಅವರು ಅದೇ ಮೇರೆಗೆ ಅವನನ್ನು ಹಿಡಿದು ನೂಲು ಹಗ್ಗಗ ಳಿಂದ ಕೈಕಾಲುಗಳನ್ನು ಕಟ್ಟಿ ಬಿಗಿದು ಹೊತ್ತು ಕೊಂಡು ಹೋಗಿ ಸಮುದ್ರದಲ್ಲಿ ಹಾಕಿ ದರು. ಆ ಕೂಡಲೆ ಸಮುದ್ರರಾಜನು ಪ್ರತ್ಯಕ್ಷನಾಗಿ ಬಂದು ಪರಮಭಾಗವತ ಶಿರೋಮಣಿಯಾದ ಪ್ರಹ್ಲಾದನಿಗೆ ನಮಸ್ಕರಿಸಿ ಅನರ್ಥ್ಯವಾದ ರತ್ನಾಭರಣಗಳಿಂದ ಮನೋಹರವಾಗಿ ಅಲಂಕರಿಸಿ ತಾನೇ ಎತ್ತಿ ಕೊಂಡು ಬಂದು ದಡದಲ್ಲಿರುವ ರಾಕ್ಷಸ ದೂತರ ವಶಕ್ಕೆ ಕೊಟ್ಟು ಅದೃಶ್ಯನಾದನು, ಆ ಮೇಲೆ ಆ ರಾಜದೂತರು ಆ ಪ್ರಜ್ಞಾ ದನ ಮಹಾತ್ಮಗೆ ಬೆಚ್ಚಿಬೆರಗಾಗಿ--ಇವನು ಸಾಮಾನ್ಯ ಪುರುಷನಲ್ಲ, ದೇವಾಂಶ