ಪುಟ:ಕಥಾ ಸಂಗ್ರಹ - ಭಾಗ ೨.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೪ ನೆಯ ಭಾಗ ಹೋಗುವುದು ಯುಕ್ತವಲ್ಲವೆಂದುಸಿರಲು ; ಅರಸನು ಆ ಮಾತುಗಳನ್ನು ಗ್ರಹಿಸಿ ಹಿಡಿದಿದ್ದ ಬಿಲ್ಲನ್ನು ಕೆಳಗಿಟ್ಟು ರಾವಣನ ಬಳಿಗೆ ಬಂದು--ಎಲೈ ವೀರನೇ, ನಾನು ನಿನಗೆ ಸೋತೆನೆಂದು ಹೇಳಿಬಿಟ್ಟನು. ಆ ಮೇಲೆ ರಾವಣನು ಅಲ್ಲಿಂದ ಹೊರಟುಹೋಗಲು; ಮೊದಲಿನಂತೆ ನಿಜರೂಪ ಧಾರಿಗಳಾದ ಇಂದ್ರಾದಿ ದೇವತೆಗಳೂ ಮುನಿಗಳೂ ಯಜ್ಞಶಾಲೆಗೆ ಬಂದು--ಆಕಾ ತ್ಯಾಗಿನಮಗೊದಗಿದ್ದ ರಾಕ್ಷಸರೂಪಮೃತ್ಯುವ ತಪ್ಪಿಹೋಯಿತೆಂದು ಸಂತೋಷಿಸಿದರು. ಇಂದ್ರನು ತಾನು ನವಿಲಾಗಿದ್ದು ವಿಪತ್ತನ್ನು ತಪ್ಪಿಸಿಕೊಂಡನಾದುದರಿದ ಆ ನವಿಲನ್ನು ಕುರಿತು-ನಿನ್ನ ರಕ್ಕೆಯಲ್ಲಿ ನನ್ನ ಕಣ್ಣುಗಳಂತಿರುವ ಚಿನ್ನೆಗಳುಂಟಾಗಲಿ ಮತ್ತು ವರ್ಷಕಾಲದಲ್ಲಿ ನಿನಗೆ ವಿಶೇಷವಾಗಿ ಸಂತೋಷೋದಯವಾಗಲಿ ಎಂದು ವರವನ್ನಿ ತನು. ಯಮನು ಹಾಗೇ ಕಾಗೆಯನ್ನು ನೋಡಿ-ಎಲೈ ವಾಯಸವೇ, ಈ ದಿವಸ ಮೊದಲು ನಿನಗೆ ಬೇಗ ಮರಣವಾಗದೆ ಅನೇಕ ದಿನಗಳ ವರೆಗೂ ಬದುಕು ಚಿರಜೀವಿ ಯೆನ್ನಿಸಿಕೊಂಡಿರು, ಇದು ಮೊದಲು ಲೋಕದ ಜನರು ಮಾಡುವ ಪಿತೃಕಾರ್ಯ ಗಳಲ್ಲಿ ಪಿತೃಪ್ರೀತ್ಯರ್ಥವಾಗಿ ಹಾಕುವ ಪಿಂಡಗಳನ್ನು ನೀನು ಭಕ್ಷಿಸಿದರೆ ಅದರಿಂದ ನಾನು ಬಹಳವಾಗಿ ತೃಪ್ತಿ ಯನ್ನು ಹೊಂದುವೆನೆಂದು ವರವನ್ನು ಕೊಟ್ಟನು. ಕುಬೇರನು ಗೋಸುಂಬೆಯನ್ನು ನೋಡಿ ನಿನ್ನ ಕ೦ಠದಲ್ಲಿ ಸುವರ್ಣರೇಖೆಯಂತಿರುವ ಗೆರೆಯು ಯಾವಾಗಲೂ ಇರಲೆಂದು ವರವನ್ನಿತ್ತನು. ಆ ಮೇಲೆ ಎಲ್ಲರೂ ಯಜ್ಞ ವನ್ನು ಮುಗಿಸಿಕೊಂಡು ಯಥಾಸ್ಥಾನಗಳನ್ನು ಕುರಿತು ತೆರಳಿದರು.

  • ಇತ್ತ ರಾವಣನು ಅಯೋಧ್ಯಾನಗರವನ್ನು ಕುರಿತು ಹೋಗಿ ಅನರಣ್ಯನೆಂಬ ಆ ಪುರಾಧಿಪತಿಯನ್ನು ಕಂಡು-ಎಲೈ ನೃಪನೇ, ಯುದ್ಧಕ್ಕೆ ಬರುವಿಯೋ ? ಅಥವಾ ಸೋತೆನೆಂದು ಹೇಳಿಬಿಡುವಿಯೋ ? ಎಂದು ಬಲಾತ್ಕರಿಸಲು ; ಆಗ ರಾಯನು ಮಹಾ ಕೋಪವುಳ್ಳವನಾಗಿ ಧನುರ್ಬಾಣಗಳನ್ನು ತೆಗೆದುಕೊಂಡು ಬಂದು ರಾವಣ ನೊಡನೆ ಬಹುದಿನಗಳ ವರೆಗೂ ಯುದ್ಧವನ್ನು ಮಾಡಿ ಕಡೆಗೆ ಅವನ ಬಾಣಘಾತ ದಿಂದ ನೊಂದು ಭೂಮಿಯಲ್ಲಿ ಬಿದ್ದು ಅಂತ್ಯಾವಸ್ಕೊಚಿತವಾದ ಬಾಧೆಯನ್ನನುಭವಿ ಸುತ್ತಿರಲು ; ಆ ಸಮಯದಲ್ಲಿ ರಾವಣನು ಅವನ ಬಳಿಗೆ ಬಂದು--ಏನೈಯ್ಯಾ ಅಲ್ಪ ಬಲಿಯಾದ ಅರಸೇ, ಅಗ್ನಿಯೊಡನೆ ಕಲಹಮಾಡಿದ ಮಿಡಿತೆಯಂತೆ ವ್ಯರ್ಥವಾಗಿ ಸಾಯುತ್ತಿರುವಿಯಲ್ಲಾ ! ನೀನೆಂಥ ಮೂಢನು ? ಮೊದಲೇ ಸೋತೆನೆಂದು ಹೇಳಿಬಿಟ್ಟಿ ದ್ದರೆ ಜೀವಿಸಿಕೊಂಡಿರಬಹುದಾಗಿದ್ದಿತ್ತು ಎಂದು ಗರ್ವೋಕ್ತಿಗಳಿಂದ ಹಾಸ್ಯಮಾಡಲು; ಅದಕ್ರಾರಾಯನು--ಎಲೈ ಮೂರ್ಖನೇ, ಯುದ್ಧದಲ್ಲಿ ಜಯಾಪಜಯಗಳು ದೈವಾ ಧೀನವಾದುವುಗಳು, ಯುದ್ದ ದಲ್ಲಿ ಎದುರಾಂತ' ವಿರೋಧಿಗಳನ್ನು ಜಯಿಸುವುದೂ ಹಗೆಗಳಿಂದ ಸಾಯುವುದೂ ಶೂರರಾದವರಿಗೆ ನೈಜಧರ್ಮವು, ಇದರಿಂದ ಬಹುಮಾ ನಾಪಮಾನಗಳುಂಟಾಗುವುದಿಲ್ಲ, ನೀನು ದುರಹಂಕೃತಿಯುಳ್ಳವನಾಗಿ ಇಂಥ ಕಾಲ ದಲ್ಲಿ ನನ್ನನ್ನು ಹಾಸ್ಯ ಮಾಡಿದ ಕಾರಣ ಮುಂದೆ ನನ್ನ ವಂಶದಲ್ಲಿ ರಾಮನೆಂಬವನು ಹುಟ್ಟಿ ನಿನ್ನನ್ನು ಕೊಲ್ಲುವನೆಂದು ಶಾಪವನ್ನಿತ್ತು ಪ್ರಾಣವನ್ನು ಬಿಟ್ಟನು.