ಪುಟ:ಕಥಾ ಸಂಗ್ರಹ - ಭಾಗ ೨.djvu/೨೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


254 ಕಥಾಸಂಗ್ರಹ-೫ ನೆಯ ಭಾಗ ಬಂದಿತು. ಆಗ ಚತುರ್ಮುಖಬ್ರಹ್ಮನು ಶೀಘ್ರವಾಗಿ ಬಂದು ಆ ಉದಕವನ್ನೆಲ್ಲಾ ತನ್ನ ಕಮಂಡಲದಲ್ಲಿ ತುಂಬಿಕೊಂಡು ಸಮಸ್ತರಾದ ದೇವತೆಗಳ ಮೇಲೂ ಮುನಿಗಳ ಮೇಲೂ ಪ್ರೋಕ್ಷಿಸಿ ಆ ಮೇಲೆ ತಾನೂ ಪ್ರೋಕ್ಷಿಸಿಕೊಂಡು ತರುವಾಯ ಮಿಕ್ಕ ಗಂಗಾಜಲವನ್ನು ಕಮಂಡಲದಲ್ಲೇ ತೆಗೆದು ಕೊಂಡು ಹೋಗಿ ತನ್ನ ಮನೆಯಲ್ಲಿಟ್ಟು ಕೊಂಡನು. ಅನಂತರದಲ್ಲಿ ತ್ರಿವಿಕ್ರಮಮೂರ್ತಿಯು ಬಲಿಚಕ್ರವರ್ತಿಯನ್ನು ಕುರಿತು ಎಲೈ ಔದಾರ್ಯಗುಣಮಣಿಹಾರನೇ, ದಾನಶೀಲನೇ, ಎರಡಡಿಗಳಷ್ಟು ಭೂಮಿಯು ಸಿಕ್ಕಿತು. ಇನ್ನೊಂದಡಿ ನೆಲನೆಲ್ಲಿರುವುದು ? ತೋರಿಸು ಎಂದು ಕೇಳಲು ; ಆಗ ಬಲೀಂದ್ರನು ವಾಮನನಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ-- ಎಲೈ ಸರ್ವಾ೦ತ ರ್ಯಾಮಿಯೇ, ಜಗನ್ನಾಥನೇ, ನಿನ್ನ ಇನ್ನೊಂದಡಿಗೆ ಸಾಕಾಗುವಷ್ಟು ಭೂಮಿ ಯನ್ನು ನಾನು ಇನ್ನೆಲ್ಲಿಂದ ತರಲಿ ? ಇದೋ, ಈ ನನ್ನ ಬೆನ್ನಿನ ಮೇಲಿಟ್ಟು ಇನ್ನೊ೦ ದಡಿಯಷ್ಟು ನೆಲವನ್ನು ಅಳೆದುಕೋ ಎಂದು ಹೇಳಲು ; ಆಗ ವಾಮನನು ಸಮ್ಮತಿ ಪಟ್ಟು ತನ್ನ ಮಹಾಪಾದವನ್ನು ಆತನ ಬೆನ್ನಿನ ಮೇಲಿಟ್ಟು ಆತನನ್ನು ಮೆಟ್ಟಿದನು. ಅಲ್ಲಿ ಅಷ್ಟು ಹೊತ್ತಿಗೆ ಭಗವದಾಜ್ಞೆಯಿಂದ ವಿಶ್ವಕರ್ಮನು ಸರ್ವಾಲಂಕಾರಭೂಷಿತ ವಾಗಿ ದಿವ್ಯವಾದ ಅರಮನೆಯನ್ನು ನಿರ್ಮಿಸಿದ್ದನು, ಆ ಮೇಲೆ ತ್ರಿವಿಕ್ರಮನು ತನ್ನ ಮಹಾರವನ್ನು ಬಿಟ್ಟು ಜಗದಾಹ್ಲಾದಕರವಾದ ದಿವ್ಯ ಮಂಗಳರೂಪನ್ನು ಧರಿಸಿ ಶಂಖಚಕ್ರಗದಾಧರನಾಗಿ ಒಲಿಚಕ್ರವರ್ತಿಗೆ ದರ್ಶನವನ್ನು ಕೊಟ್ಟು ಆತನನ್ನು ತೆಗೆದಾ ಲಿಂಗಿಸಿ ಕೈಹಿಡಿದು ಆ ಮಹಾಸುಂದರರಾಜಾಲಯದೊಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯುತ್ತಮವಾಗಿ ಕೋಟಿ ಸೂರ್ಯಪ್ರಕಾಶಮಾನವಾದ ದಿವ್ಯ ಸಿಂಹಾಸನದ ಮೇಲೆ ಕುಳ್ಳಿರಿಸಿ ಮುನಿಜನಗಳೊಡನೆ ಕೂಡಿ ಆತನಿಗೆ ಮುಂದಣ ಇ೦ದ್ರಪದವಿಗೆ ಪಟ್ಟಾಭಿಷೇಕವನ್ನು ಮಾಡಿ ಸಂತೋಷದಿಂದ ಕುಳಿತಿರುವ ಆತನನ್ನು ಕುರಿತು ಎಲೈ ಪರಮಭಾಗವತನೇ, ನಾನು ಮಹಾತ್ಮನಾದ ನಿನ್ನ ಭಕ್ತಿಗೆ ಬಹಳವಾಗಿ ಮೆಚ್ಚಿದೆನು. ಈ ದಿವಸ ಕಾರ್ತಿಕ ಶುದ್ಧ ಪಾಡ್ಯಮಿಯಾದುದರಿಂದ ಸಮಸ್ತ ಜನರೂ ಪ್ರತಿಸಂವತ್ಸರದಲ್ಲೂ ಸಂಭವಿಸುವ ಈ ದಿನದಲ್ಲಿ ಸಂತೋಷದಿಂದ ನಿನ್ನನ್ನು ಪೂಜಿ ಸಲಿ, ಮತ್ತು ನೀನು ಮನಸ್ಸಿನಲ್ಲಿ ಕೋರಿದ ಕೋರಿಕೆಗಳೆಲ್ಲಾ ನಿರ್ವಿಘ್ನವಾಗಿ ಸಿದ್ದಿ ಸಲಿ ಎಂದು ಪ್ರೀತಿಯಿಂದ ವರವನ್ನು ಕೊಟ್ಟನು. ಆಗ ಬಲಿಚಕ್ರವರ್ತಿಯುಸ್ವಾಮಿ, ಮಹಾವಿಷ್ಣುವೇ, ನಿನ್ನ ಭಕ್ತನಾದ ನನಗೆ ಯಾವ ವಿಧವಾದ ಎಡರೂ ಸಂಭವಿಸದಂತೆ ನೀನು ನನ್ನ ರಮನೆಯ ಬಾಗಿಲಲ್ಲಿ ಸದಾಕಾಲದಲ್ಲೂ ಕಾದು ಕೊಂಡಿರಬೇಕೆಂದು ಬೇಡಿ ಕೊಂಡು ದರಿಂದ ಮಹಾವಿಷ್ಣುವು ಸಂತೋಷವಳ್ಳವನಾಗಿ ಹಾಗೇ ಆಗಲಿ ಎಂದು ಒಪ್ಪಿ ಗದಾದಂಡವನ್ನು ಧರಿಸಿದವನಾಗಿ ಆತನ ಮನೆಯ ಬಾಗಿಲಲ್ಲಿರುತ್ಯ ಆತನ ಭಕ್ತಿಪೂರ್ವಕವಾದ ಪೂಜೆಯನ್ನು ಸ್ವೀಕರಿಸುತ್ತ ಇರುತ್ತಿದ್ದನು.

  • ತರುವಾಯ ಸರ್ವಗತನಾದ ಮಹಾವಿಷ್ಣುವು ಯಥಾಪ್ರಕಾರ ವಾಮನನಾಗಿ ಬಂದು ತಾಯ್ತಂದೆಗಳಿಗೆ ನಮಸ್ಕರಿಸಿ ಇ೦ದ್ರನನ್ನು ಕರಿಸಿ ಸ್ವರ್ಗಲೋಕಕ್ಕೆ ಕರೆದು ಕೊಂಡು ಹೋಗಿ ಆತನಿಗೆ ತ್ರಿಲೋಕಾಧಿಪತ್ಯವನ್ನು ನೇಮಿಸಿ ತಾನು ವೈಕುಂಠ ಲೋಕವನ್ನು ಕುರಿತು ತೆರಳಿದನು.