ಪರಶುರಾಮಾವತಾರದ ಕಥೆ 255. 6. THE SIXTH OR PARASHU RAMA INCARNATION, ೬ ಪರಶುರಾಮಾವತಾರದ ಕಥೆ. ಶ್ರೀ ಮಹಾವಿಷ್ಣುವು ಶಂಖಚಕ್ರಗದೆಗಳನ್ನು ಧರಿಸಿ ಕ್ಷೀರಸಮುದ್ರದಲ್ಲಿ ಶೇಷ ಶಾಯಿಯಾಗಿ ಯೋಗನಿದ್ರೆ ಯನ್ನು ಮಾಡುತ್ತಿದ್ದನು. ಹೀಗಿರುವಲ್ಲಿ ಒಂದು ದಿವಸ ಆ ಮಹಾವಿಷ್ಣುವಿನ ಆಯುಧವಾದ ಸುದರ್ಶನವೆಂದು ಪರ್ಯಾಯನಾಮವುಳ್ಳ ಚಕ್ರವು ತನ್ನ ಮನಸ್ಸಿನಲ್ಲಿ ಈ ವಿಷ್ಣುವು ಮಹಾಬಲಗರ್ವಿತರಾದ ಮಧುಕೈಟಭಾದಿ ದೈತ್ಯರನ್ನು ನನ್ನ ಬಲಸಹಾಯದಿಂದ ಜಯಿಸಿ ದೈತ್ಯಾಂತಕನೆಂದು ಸರ್ವಲೋಕಗ ಳಿಂದಲೂ ಕೊಂಡಾಡಿಸಿಕೊಳ್ಳುತ್ತಿದ್ದಾನೆ, ನನ್ನ ಸಹಾಯವಿಲ್ಲದಿದ್ದರೆ ಈತನು ದೈತ್ಯ ರನ್ನು ಹೇಗೆ ಜಯಿಸುವನು ? ಎಂದಿಗೂ ಜಯಿಸಲಾರನು ಎಂದು ಯೋಚಿಸಿಕೊಂಡು ಮಹಾಗರ್ವದಿಂದ ಕೂಡಿ ತಾನೇ ಮಹಾ ಬಲಸಂಪನ್ನನೆಂದು ತಿಳಿದುಕೊಂಡಿತು. ಆ ಸಂಗತಿಯು ಸರ್ವಾ೦ತಾರ್ಯಾಮಿಯಾದ ವಿಷ್ಣುವಿಗೆ ತಿಳಿದುದರಿಂದ ಆತನು ಈ ಚಕ್ರದ ಗರ್ವವನ್ನು ಪರಿಹರಿಸಬೇಕು, ಏಕೆಂದರೆ ಲೋಕದಲ್ಲಿ ಪ್ರಭುತ್ವ ಮಾಡು ವವರ ಪ್ರಭಾವಶಕ್ತಿಯಿಂದ ಆ ಪ್ರಭುವಿನ ಕೈಕೆಳಗಿರುವ ಉದ್ಯೋಗಿಗಳು ತಮ್ಮ ತಮ್ಮ ಅಧಿಕಾರಗಳಲ್ಲಿ ಸ್ವಲ್ಪವಾದರೂ ನ್ಯೂನತೆಗಳಿಲ್ಲದೆ ಎಚ್ಚರಿಕೆಯಿಂದಿದ್ದು ಕೊಂಡು ಎಲ್ಲಾ ಕೆಲಸಗಳಲ್ಲೂ ಬಲ್ಲಿದರಾಗಿದ್ದಾಗ ಅಂಥವರನ್ನು ನೋಡಿ ಇತರರು-ನೀವು ಬಲ್ಲಿದರು, ನೀವು ಪಂಡಿತರು. ನೀವು ಚತುರೋಪಾಯಗಳನ್ನೂ ಬಲ್ಲವರೆಂದು ಹೊಗಳಿ ದರೆ ಆಗ ಆ ಅಧಿಕಾರಿಗಳು ಅವರನ್ನು ಕುರಿತು ನಾವು ಎಷ್ಟುಮಾತ್ರದವರು ? ಈ ಕಾರ್ಯಗಳೆಲ್ಲಾ ನಮ್ಮ ಪ್ರಭುಗಳ ಮಹಿಮೆಯಿಂದ ನಡೆಯುವುದೇ ಹೊರತು ಅಲ್ಪ ಜ್ಞರೂ ಅಲ್ಪಶಕರೂ ಆದ ನಮ್ಮಿ೦ದ ಅಣುಮಾತ್ರವಾದರೂ ನಡೆಯುವುದಿಲ್ಲ. ಲೋಕದಲ್ಲಿ ಕೇವಲ ಮೂಢನೂ ಬಡವನೂ ಅಶಕ್ತನೂ ಆಗಿರುವ ಒಬ್ಬ ಕಿಂಕರನ ಮೇಲೆ ಸರ್ವಾಭೀಷ್ಟಾರ್ಥದಾಯಕವಾದ ಪ್ರಭುವಿನ ಕಟಾಕ್ಷವು ಬಿದ್ದರೆ ಆ ಕೂಡಲೆ ಅವನು ಮಹಾಧೀರನ ಪಂಡಿತನೂ ಕಾರ್ಯದಕ್ಷನೂ ಸಾಮರ್ಥ್ಯವುಳ್ಳವನೂ ಆಗು ವುದಲ್ಲದೆ ಸಕಲವಿಧ ಕಾರ್ಯಗಳನ್ನೂ ಲೋಪವಿಲ್ಲದಂತೆ ತಾನೇ ನಿರ್ವಹಿಸಿ ಪ್ರಭು ವಿನ ರಾಜ್ಯ ಕೋಶಗಳನ್ನು ಅಭಿವೃದ್ದಿ ಮಾಡಿ ಆ ಪ್ರಭುವಿನಿಂದಲೇ ಹೊಗಳಿಸಿಕೊಳ್ಳು ವನು. ಎಂಥ ಪಂಡಿತನೂ ಸರ್ವಶಕ್ತನೂ ಮಹಾ ಬಲಸಂಪನ್ನ ನೂ ಆದಾಗ್ಯೂ ಅವನಿಗೆ ಪ್ರಭುವಿನ ಬಲ ತಪ್ಪಿದರೆ ಇವನು ಕೈಲಾಗದವನು, ಹೇಡಿಯು, ಮಡನು ಎಂದು ಎಲ್ಲರಿಂದಲೂ ತಿರಸ್ಕಾರವನ್ನು ಹೊಂದುವನು. ಇದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ತನ್ನ ಮನಸ್ಸಿನಲ್ಲಿ ಯೋಚಿಸಿಕೊಳ್ಳುತ್ತ ಪ್ರಭುವಿನ ವಿಷಯದಲ್ಲಿ ತಾಗಿ ಬಾಗಿ ನಡೆದರೆ ಅವನು ಯೋಗ್ಯತೆಯನ್ನು ವಿಚಾರಿಸಿ ಅವನು ಮತ್ತೂ ಗಟ್ಟಿ ಗನೆನ್ನಿ ಸಿಕೊಳ್ಳು ವಂತೆ ಅವನಲ್ಲಿ ಕೃಪೆಮಾಡಿ ನಡಿಸಿಕೊಡಬೇಕು. ಹಾಗೆ ನಡೆಯದೆ ಪ್ರಭುವಿಗೆ ಉಂಟಾ ಗಿರುವ ಸರ್ವ ಸಂಪತ್ತು ಗಳೂ ತನ್ನಿಂದಲೇ ಉಂಟಾದುವೆಂದು ತಿಳಿದು ಕೊಬ್ಬಿ ಅಹಂ ಬ್ರಹ್ಮತ್ವದಿಂದ ಕೂಡಿ ತನ್ನಿಂದಲೇ ತನ್ನ ಪ್ರಭುವಿಗೆ ಪ್ರಭುತ್ವವುಂಟಾಯಿತೆಂದು ಹೊಗಳಿ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೬೫
ಗೋಚರ