262 ಕಥಾಸಂಗ್ರಹ-೫ ನೆಯ ಭಾಗ ಆ ಮಹಾತ್ಮನಾದ ಜಮದಗ್ನಿಯ ಹೊಟ್ಟೆಯಲ್ಲಿ ಹುಟ್ಟಿದ ಪರಶುರಾಮನಾಮಕನಾದ ನಾನು ಬಂದಿದ್ದೇನೆ. ನಿನಗೆ ಪುತ್ರಮಿತ್ರಕಳತ್ರಾದಿಗಳೊಡನೆ ಕೂಡಿ ಇನ್ನೂ ಭೂಲೋಕದಲ್ಲಿ ಬಾಳಬೇಕೆಂಬ ಅಪೇಕ್ಷೆಯಿದ್ದರೆ ಬೇಗದಿಂದ ನಮ್ಮ ಧೇನುವನ್ನು ತೆಗೆದುಕೊಂಡು ಬಂದು ಒಪ್ಪಿಸಿ ಶರಣಾಗತನಾದರೆ ಮನ್ನಿಸಿಬಿಡುವೆನು. ಅದು ನಿನ್ನ ಮನಸ್ಸಿಗೆ ಸರಿಬಾರದೆ ಸಾಯುವದಕ್ಕೆ ಆಶೆಯಿದ್ದರೆ ನಿನ್ನ ಚತುರಂಗಬಲ ದೊಡನೆ ಕೂಡಿ ನಮ್ಮೊಡನೆ ಯುದ್ಧಕ್ಕೆ ಬರಬೇಕು ಎಂಬುದೇ ಎಂದು ಹೇಳಿ ಕಳುಹಿಸಲು; ಅವರು ಶೀಘ್ರವಾಗಿ ಕಾರ್ತವೀರ್ಯಾರ್ಜುನನ ಬಳಿಗೆ ಬಂದು ಅವನೊಡನೆ ಪರಶುರಾಮನು ಹೇಳಿದ ಮಾತುಗಳಲ್ಲಿ ಸ್ವಲ್ಪವಾದರೂ ಹೆಚ್ಚು ಕಡಮೆಯಾಗದಂತೆ ಹೇಳಿದರು. ಆ ಮಾತುಗಳನ್ನು ಕೇಳಿ ಕಾರ್ತವೀರ್ಯಾರ್ಜುನನು ನಸುನಕ್ಕು-ಅಹಹ ! ತಿಥಿಕಾಲಗಳಲ್ಲಿ ಅಂದವಾಗಿ ಕುಳಿತುಕೊಂಡು ಪರಾನ್ನವನ್ನು ಮಿತಿಮೀರಿ ತಿಂದು ಹೊಟ್ಟೆ ಹೊರೆಯುವ ಹಾರವರಿಗೆ ಪರಮತೇಜಸ್ವಿಗಳಾಗಿ ಚಕ್ರವರ್ತಿಗಳಾದ ನಮ್ಮಂಥ ಕ್ಷತ್ರಿಯೋತ್ತಮರೊಡನೆ ಸೆಣಸುವ ಶಕ್ತಿಯುಂಟಾದುದಲ್ಲಾ ! ಇದೇನೋ ಕಾಲಗತಿಯೇ ಸರಿ. ಈ ದುಷನೂ ಅವಿವೇಕಿಯೂ ಆದ ಮುನಿವಟುವಿನ ಕೆಟ್ಟ ಮಾತುಗಳಿಂದ ಕೋಪವುಳ್ಳವನಾಗಿ ನಾನು ಯುದ್ದ ಕ್ಕೆ ಹೋದರೆ ಆ ಯುದ್ಧದಲ್ಲಿ ಮಹಾ ಕೋಪಪರವಶನಾದ ನನ್ನಿಂದ ಅವನು ಹತನಾದರೆ ನನಗೆ ಬ್ರಹ್ಮಹತ್ಯೆಯು ಬಂದು ಸಂಘಟಿಸುವುದು, ಅದಲ್ಲದೆ ಬ್ರಾಹ್ಮಣನ ಪದಾರ್ಥವು ನಮಗೇಕೆ ? ಆ ಧೇನುವನ್ನು ಹಿಂದಕ್ಕೆ ಕೊಟ್ಟುಬಿಟ್ಟರೆ ಚಕ್ರವರ್ತಿಯಾದ ಕಾರ್ತವೀರ್ಯಾರ್ಜುನನು ಬ್ರಾಹ್ಮಣವಟುವಿನೊಡನೆ ಯುದ್ಧ ಮಾಡುವುದಕ್ಕೆ ಕೈಲಾಗದೆ ಹೆದರಿ ಹಿಡಿದು ತಂದ ಧೇನುವನ್ನು ತಿರಿಗಿ ಅವನಿಗೆ ಕೊಟ್ಟು ಬಿಟ್ಟನು ಎಂದು ಲೋಕದಲ್ಲಿ ಅಪಕೀರ್ತಿಯುಂ ಟಾಗುವುದು. ಈ ಅಸಂಗತವಾದ ಕಾರ್ಯಕ್ಕೆ ಏನು ಮಾಡಬೇಕು? ಎಂದು ಒಂದು ಗಳಿಗೆಯ ವರೆಗೂ ಯೋಚಿಸಿ ಆ ಹುಡುಗನನ್ನು ಕೊಂದುಹಾಕದೆ ಅವನ ಅವಿವೇಕಜ ನ್ಯವಾದ ಕೊಬ್ಬನ್ನು ಮುರಿದು ಅವನನ್ನು ಹಿಡಿದು ತಂದು ಸೆರೆಯಲ್ಲಿಟ್ಟುಬಿಡಬೇಕು. ತರುವಾಯ ಅವನ ತಂದೆಯಾದ ಜಮದಗ್ನಿ ಯು ಬಂದು ಬೇಡಿಕೊಂಡರೆ ಬಿಟ್ಟು ಬಿ ಡೋಣ ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ತತ್ವ ದಳಪತಿಗಳನ್ನು ಕರೆದು--ನೀವು ನಿಮ್ಮ ಸೇನೆಗಳೊಡನೆ ಕೂಡಿ ಆ ಮುನಿಪುತ್ರನ ಬಳಿಗೆ ಹೋಗಿ ಅವನೊಡನೆ ಜಗಳವಾಡಿ ಅವನನ್ನು ಕೈಸೆರೆಯಾಗಿ ಹಿಡಿದು ಕೊಂಡು ಬನ್ನಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು. ಅವರು ಆ ಕೂಡಲೆ ಚತುರಂಗಬಲಸಮೇತರಾಗಿ ಬಂದು ಪರಶುರಾಮನನ್ನು ಮುತ್ತಿ ಕೊಳ್ಳಲು ; ಆಗ ಪರಶುರಾಮನು ಮಹೋಗ್ರ ಕೋಪಕವಾಯಿತಾಕ್ಷನಾಗಿ ಬಂದ ಶತ್ರುಸೇನೆಯಲ್ಲಿ ಹಿಂದಿರುಗಿ ಹೋಗಿ ಸುದ್ದಿಯನ್ನು ಹೇಳುವುದಕ್ಕೆ 'ಒಬ್ಬನಾ ದರೂ ಉಳಿಯ ದಂತೆ ಎಲ್ಲ ರನ್ನೂ ತನ್ನ ಕೈ ಕೊಡಲಿಯಿಂದ ಕಡಿದು ಮಲಗಿಸಿದನು. ಕಾರ್ತವೀರ್ಯಾರ್ಜುನನು ಆ ಸುದ್ದಿಯನ್ನು ಕೇಳಿ ಪ್ರಳಯಾಗ್ನಿಗೆ ಸಮಾನವಾದ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೭೨
ಗೋಚರ