ಪುಟ:ಕಥಾ ಸಂಗ್ರಹ - ಭಾಗ ೨.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಶುರಾಮಾವತಾರದ ಕಥೆ 263 ಕೋಪವುಳ್ಳವನಾಗಿ ಸಮಸ್ರಾಯುಧಗಳನ್ನೂ ಧರಿಸಿ ಬಂದು ಪರಶುರಾಮನೊಡನೆ ಯುದ್ಧಕ್ಕೆ ನಿಂತು ಅಹೋರಾತ್ರಿಗಳಲ್ಲೂ ಎಡೆಬಿಡದೆ ಇಪ್ಪತ್ತೇಳು ದಿನಗಳ ವರೆಗೂ ಘೋರ ಯುದ್ಧವನ್ನು ಮಾಡಿ ಕಡೆಗೆ ಮಹಾ ಶೂರನಾದ ಪರಶುರಾಮನ ಕೊಡಲಿ ಯಿಂದ ಕಡಿಯಲ್ಪಟ್ಟ ತೋಳು ತಲೆಗಳುಳ್ಳವನಾಗಿ ನೆಲದಲ್ಲಿ ಒರಗಿ ಪ್ರಾಣಗಳನ್ನು ಬಿಟ್ಟನು, ಅದನ್ನು ನೋಡಿ ಆ ನಗರದ ಜನರೆಲ್ಲರೂ ಭಯದಿಂದ ಗಾಬರಿಯಾಗಿ ದಿಕ್ಕುದಿಕ್ಕಿಗೆ ಓಡಿಹೋದರು. ತರುವಾಯ ಶೂರಕುಲತಿಲಕನಾದ ಪರಶುರಾಮನು ಕಾರ್ತವೀರ್ಯಾರ್ಜುನನ ಅರಮನೆಯನ್ನು ಹೊಕ್ಕು ಅಲ್ಲಿ ಕಟ್ಟಿರುವ ತನ್ನ ಹೋಮ ಧೇನುವನ್ನು ನೋಡಿ ಅದರ ಮೈಯನ್ನೆಲ್ಲಾ ತುರಿಸಿ ಗೊಂತಿನಿಂದ ಬಿಚ್ಚಿ ತನ್ನ ಆಶ್ರ ಮಕ್ಕೆ ಹೊರಟುಬಂದನು. ಆ ಧೇನವೂ ಅವನೊಡನೆಯೇ ಆಶ್ರಮಕ್ಕೆ ಬಂದಿತು. ಅದನ್ನು ನೋಡಿ ಜಮದಗ್ನಿ ಯು ಪರಮಸಂತೋಷಯುಕ್ತನಾಗಿ ತನ್ನ ಮಗನನ್ನೂ ಆ ಧೇನುವನ್ನೂ ಬೇರೆ ಬೇರೆಯಾಗಿ ಆಲಿಂಗಿಸಿಕೊಂಡು ಮುದ್ದಿಸಿ ನಲಿದಾಡಿದನು. ಅನಂತರದಲ್ಲಿ ಇತ್ತ ಮಾಹಿಷ್ಮತೀ ಪಟ್ಟಣದಲ್ಲಿ ಕಾರ್ತವೀರ್ಯಾರ್ಜುನನ ಮಕ್ಕಳು ತಂದೆಯು ಸತ್ತು ಹೋದುದರಿಂದ ಬಹಳ ವ್ಯಸನಾಕ್ರಾಂತರಾಗಿ--ಒಬ್ಬ ಬ್ರಹ್ಮಚಾರಿಯಾದ ಹುಡುಗನು ಬಂದು ದಿಗ್ವಿಜಯವನ್ನು ಮಾಡಿದ ಮಹಾಶೂರನೂ ಚಕ್ರವರ್ತಿಯ ಆದ ನಮ್ಮ ತಂದೆಯನ್ನು ಕೊಂದುಹಾಕಿದನಲ್ಲಾ ! ಅವನ ಪರಾಕ್ರ ಮವನ್ನು ಎಷ್ಟೆಂದು ಹೇಳೋಣ ? ಆದರೂ ಕ್ಷತ್ರಿಯರಾದ ನಾವು ವೈರನಿರ್ಯಾತ ನಾರ್ಥವಾಗಿ ಹೋಗಿ ಆತನ ತಂದೆಯನ್ನು ಕೊಂದುಹಾಕಿದ ಹೊರತು ನಮ್ಮ ದುಃಖವು ತೀರುವುದಿಲ್ಲ, ನಾವು ಈ ಕೆಲಸವನ್ನು ಮಾಡುವುದು ಆ ದುಷ್ಟ ನಾದ ಪರಶುರಾಮನು ಆಶ್ರಯದಲ್ಲಿ ರುವ ಕಾಲದಲ್ಲಿ ಎಂದಿಗೂ ಸಾಧ್ಯವಾಗುವು ದಿಲ್ಲ, ಅವನು ಮಹಾದುಷ್ಟನು. ನಾವು ಈ ರೀತಿಯಾಗಿ ಮಾಡಿದ ಯೋಚನೆಯು ಸ್ವಲ್ಪಮಟ್ಟಿಗೆ ತಿಳಿದಾಗೂ ಕೂಡಲೆ ಆ ಪರಶುರಾಮನು ಬಂದು ನಮ್ಮನ್ನು ಮೂಲೋತ್ಪಾಟನ ಮಾಡದೆ ಬಿಡುವುದಿಲ್ಲ, ನಾವು ರಹಸ್ಯದಿಂದ ಅವನ ತಂದೆಯನ್ನು ಕೊಂದುಹಾಕಿದ ಮೇಲೆ ಆ ಪರಶುರಾಮನು ಬಂದು ನಮ್ಮನ್ನು ಕೊಂದುಹಾಕಿದರೂ ಹಾಕಲಿ ಎಂದು ತಮ್ಮ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಕೂಡಲೆ ಜಮದಗ್ನಿ ಯ ಆಶ್ರಯಕ್ಕೆ ಬಂದು ಪರಶುರಾಮನು ಆಶ್ರಮವನ್ನು ಬಿಟ್ಟು ಹೊರಗೆ ಹೋಗುವ ವರೆಗೂ ಒಂದು ಸ್ಥಳದಲ್ಲಿ ರಹಸ್ಯವಾಗಿ ಅವಿತುಕೊಂಡಿದ್ದು ಒಂದು ದಿವಸ ಅವನು ಗೋಗ್ರಾಸಾ ರ್ಥವಾಗಿ ಕಾಡಿಗೆ ಹೋದುದನ್ನು ತಿಳಿದು ಜಮದಗ್ನಿ ಯ ಪರ್ಣಶಾಲೆಯನ್ನು ಹೊಕ್ಕು ಕಣ್ಣುಗಳನ್ನು ಮುಚ್ಚಿಕೊಂಡು ಯೋಗಧ್ಯಾನಾಸಕ್ತನಾಗಿದ್ದ ಜಮದಗ್ನಿ ಯ ತಲೆ ಯನ್ನು ಕತ್ತಿಯಿಂದ ಕಡಿದು ಕೆಡಹಿ ಓಡಿಹೋದರು. ಆ ತರುವಾಯ ರಾಮನು ಎಂದಿನಂತೆ ಗೋಗ್ರಾಸವನ್ನು ತೆಗೆದು ಕೊಂಡು ಆಶ್ರ ಮಕ್ಕೆ ಬಂದು ಮಹಾ ದುಃಖಸಾಗರದಲ್ಲಿ ಮುಳುಗಿ ಗಟ್ಟಿಯಾಗಿ ರೋದಿಸುತ್ತಿರುವ ತಾಯಿ ಮೊದಲಾದವರನ್ನು ಕಂಡು ಭಯಾಶ್ಚರ್ಯಗ್ರಸ್ತನಾಗಿ ಕಡೆಗೆ ದುರಾತ್ಮರಾದ ಕಾರ್ತವೀರ್ಯಾರ್ಜುನನ ಮಕ್ಕಳು ಮಾಡಿದ ದುಷ್ಕೃತ್ಯವೆಂದು ನೋಡಿ ತಿಳಿದು