ಪುಟ:ಕಥಾ ಸಂಗ್ರಹ - ಭಾಗ ೨.djvu/೨೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


268 ಕಥಾಸಂಗ್ರ-೫ ನೆಯ ಭಾಗ ಬಿಟ್ಟರೆ ನಾನು ಯಾವ ಭಯವೂ ಇಲ್ಲದೆ ಸುಖದಿಂದಿರಬಹುದು ಎಂದು ಯೋಚಿಸಿ ಮೊದಲಿಗಿಂತಲೂ ಬಹು ಜಾಗರೂಕತೆಯಾಗಿ ಆಕೆಯ ಬಳಿಯಲ್ಲಿ ಕಾವಲಿಟ್ಟು ತಾನೂ ಬಹಳ ಜಾಗರೂಕತೆಯಿಂದ ವಿಚಾರಿಸಿಕೊಳ್ಳುತ್ತಿದ್ದನು. ಇತ್ತಲಾ ನಂದಗೋಕುಲದಲ್ಲಿ ವಸುದೇವನ ಹಿರಿಯ ಹೆಂಡತಿಯಾದ ರೋಹಿಣಿ ದೇವಿಯು ಪೂರ್ಣಗರ್ಭವತಿಯಾಗಿ ಶುಭಮುಹೂರ್ತದಲ್ಲಿ ಮಹಾಶೇಷನು ಮುಂದೆ ಹ ಟ್ಟುವ ಭಗವಂತನಿಗೆ ಸಹಾಯಭೂತನಾಗಿ ಶುಭ್ರವರ್ಣವುಳ್ಳ ಶಿಶುರೂಪದಿಂದ ಹುಟ್ಟಲ ನೋಡಿದ ಸಮಸ್ತ ಜನರು ಮೇಘಮಾರ್ಗದಲ್ಲಿ ಪ್ರತಿಸಮಯದಲ್ಲೂ ನಡೆದು ನಡೆದು ಆಲಸ್ಯವನ್ನು ಹೊಂದಿ ವಿಶ್ರಮಿಸಿಕೊಳ್ಳುವುದಕ್ಕೋಸ್ಕರವಾಗಿ ಅಮೃತಕಿರಣನಾದ ಚ ದ್ರನು ಭೂಲೋಕದಲ್ಲಿ ಈ ಶಿಶು ರೂಪದಿಂದ ಹುಟ್ಟಿರುವನೆಂದು ಯೋಚಿಸುತ್ತಿದ್ದರು. ತರುವಾಯ ಮಧುರಾನಗರದಲ್ಲಿ ಶ್ರಾವಣ ಬಹುಳ ಅಷ್ಟ ಮಿಯ ಸಮರಾತ್ರಿಯಲ್ಲಿ ಎಳ್ಳಗಸೆ ಹೂವಿನಂತೆ ನೀಲವಾದ ಮೈಬಣ್ಣವುಳ್ಳವನಾಗಿ ಹೊಂಬಟ್ಟೆಯನ್ನು ಧರಿಸಿ ಕೌಸ್ತುಭರತ್ನದಿಂದ ಹೊಳೆಯುವ ಎದೆಯ ಶಂಖಚಕ್ರಗದಾಪದ್ಯಗಳೆಂಬ ಆಯುಧ ಗಳಿಂದ ಒಪ್ಪುತ್ತಿರುವ ಕೈಗಳೂ ಉಳ್ಳವನಾಗಿ ದೈತ್ಯಸಮಹವೆಂಬ ಮಹಾರಣ್ಯಕ್ಕೆ ದಾವಾಗ್ನಿ ಪ್ರಾಯನಾದ ಮಹಾವಿಷ್ಣುವು ಆ ವಸುದೇವ ದೇವಕಿಯರಿಗೆ ಪ್ರತ್ಯಕ್ಷ ನಾಗಿ ಕಾಣಿಸಿಕೊಂಡನು. ಆತನನ್ನು ನೋಡಿ ವಸುದೇವನು ಸಂತೋಷಸಮುದ್ರದಲ್ಲಿ ಮುಳುಗಿ ಕಣ್ಣು? ಳಿಂದ ಆನಂದಬಾಷ್ಪವನ್ನು ಸುರಿಸುತ್ತ ಬಾರಿ ಬಾರಿಗೂ ಅಡ್ಡಬಿದ್ದು ವಿವಿಧವಾಗಿ ಹೊಗಳುತ್ತ ಎದ್ದು ಕೈಮುಗಿದು ನಿಂತು ಕೊಂಡು ರೋಮಾಂಚಕಂಚುಕಿತಾ೦ಗನಾಗಿ ಆ ಮಹಾವಿಷ್ಣುವನ್ನು ಕುರಿತು ದುರಾತ್ಮನಾದ ಕಂಸನು ತಮಗೆ ಮಾಡಿದ ದ್ರೋಹ ಗಳನ್ನೆಲ್ಲಾ ಹೇಳಿಕೊಳ್ಳಲು ; ಆಗ ಕಮಲನಾಭನು ಕರುಣಾಸಾರಹೃದಯನಾಗಿಮೊದಲು ನಿಮಗೆ ಹುಟ್ಟಿದ ಆರು ಮಕ್ಕಳುಗಳು ಪಾತಾಳಲೋಕದಲ್ಲಿರುವ ಹಿರಣ್ಯಕ ಶಿಪುವಿನ ಮಕ್ಕಳುಗಳು.” ಅವರು ನನ್ನ ಅಪ್ಪಣೆಯಿಂದಲೇ ನಿಮ್ಮಲ್ಲಿ ಹುಟ್ಟಿ ಮೃತರಾ ದರು. ಏಳನೆಯ ಬಸುರಿನಲ್ಲಿದ್ದ ಶಿಶುವನ್ನು ಕಂಸನು ಕೊಲ್ಲುವೆನೆಂಬ ಯೋಚನೆಯಿಂದ ನಾನೇ ನನ್ನ ಮಾಯೆಯಿಂದ ತೆಗಿಸಿ ನಿನ್ನ ಹಿರೀ ಹೆಂಡತಿಯಾದ ರೋಹಿಣಿಯಲ್ಲಿ ನಿಲ್ಲಿ ಸಿದೆನು, ಆ ಮಹಾತ್ಮನು ಗೋಕುಲದಲ್ಲಿ ಹುಟ್ಟಿ ಬೆಳೆಯುತ್ತಿರುವನು, ನನ್ನ ಒಡಹು ಟ್ಟುಗಳಾದ ಶಿಶುಗಳನ್ನು ಕೊಂದು ತನ್ನ ತಂದೆಯಾದ ಉಗ್ರೇಸನನನ್ನು ಬಂಧನದಲ್ಲಿರಿಸಿ ನಿಮ್ಮನ್ನು ಹಿಂಸಿಸುತ್ತ ಲೋಕಕಂಟಕನಾಗಿರುವ ಈ ಕಂಸನನ್ನು ಕೊಂದುಹಾಕಿ ನಿಮ್ಮೆ ಲ್ಲರಿಗೂ ಸಮಾಧಾನವನ್ನುಂಟುಮಾಡುವೆನು, ನೀನು ಶಿಶು ರೂಪದಿಂದಿರುವ ನನ್ನನ್ನು ತೆಗೆದುಕೊಂಡು ಹೋಗಿ ನಂದಗೋಕುಲದಲ್ಲಿ ಒಂದು ಹೆಣ್ಣು ಕೂಸನ್ನು ಹೆತ್ತು ನನ್ನ ಮಾಯೆಯಿಂದ ಜ್ಞಾನತಪ್ಪಿ ಬಿದ್ದಿರುವ ನಂದಗೋಪನ ಹೆಂಡತಿಯಾದ ಯಶೋದೆಯ ಮಗ್ಗುಲಲ್ಲಿಟ್ಟು ಅಲ್ಲಿ ಹುಟ್ಟಿರುವ ಹೆಣ್ಣು ಶಿಶುವನ್ನು ತೆಗೆದು ಕೊಂಡು ತಿರಿಗಿ ಬಂದ ದೇವಕೀದೇವಿಗೆ ಕೊಡು, “ಈ ಕೆಲಸವನ್ನು ಮಾಡುತ್ತಿರುವ ನಿನ್ನನ್ನು ಒಬ್ಬರೂ ಅ ಯದಂತೆ ನನ್ನ ಮಾಯೆಯು ಸಹಾಯ ಮಾಡುವುದು ಎಂದು ಹೇಳಿ ಆ ದಿವ್ಯ ರೂಪ