ಪುಟ:ಕಥಾ ಸಂಗ್ರಹ - ಭಾಗ ೨.djvu/೨೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಷ್ಣಾವತಾರದ ಕಥೆ 269 ವನ್ನು ಅಡಗಿಸಿ ಶಿಶುರೂಪವನ್ನು ಕೈಕೊಂಡು ವಸುದೇವದೇವಕಿಯರನ್ನು ತನ್ನ ಮಾಯೆಯಿಂದ ಮರುಳೊಳಿಸಲು ; ಅವರು ಬಹಿರ್ವಾಪಾತ ವಿರಹಿತರಾಗಿ--ಈಗ ನಾವು ಯಾರೊಡನೆ ಮಾತನಾಡಿದೆವು ? ನಮಗೆ ಯಾರು ಉತ್ತರವನ್ನು ಕೊಟ್ಟರು ? ಈ ಶಿಶು ಬೇರೆ ಅಲ್ಲ. ಸಾಕ್ಷಾನ್ನಾರಾಯಣನೇ ಬಂದು ನುಡಿದು ಹೋದನೋ ಏನೋ ಎಂದು ಭಾಂತಿಗೊಂಡರು. ಆ ಬಳಿಕ ಕಂಸನು ವಸುದೇವನ ಕಾಲಿಗೆ ಹಾಕಿದ್ದ ಸಂಕೋಲೆಯು ತನಗೆ ತಾನೆ ಕಳಚಿ ನೆಲಕ್ಕೆ ಬಿದ್ದುದರಿಂದ ವಸುದೇವನು ಬಂದು ಶಿಶುವನ್ನು ಬೇಗ ಎತ್ತಿ ಕೊಂಡು ಹೊರಡುವಲ್ಲಿ ಕಾವಲುಗಾರರೆಲ್ಲರೂ ವಿಷ್ಣು ಮಾಯೆಯಿಂದ ಮೋಹಿತರಾಗಿ ಎಚ್ಚರವಿಲ್ಲದೆ ಬಿದ್ದಿದ್ದರು. ಅಗುಳಿಗಳಿಂದ ಭದ್ರಪಡಿಸಿದ್ದ ಊರುಬಾಗಿಲ ಕದಗಳು ತಮ್ಮಿಂದ ತಾನೇ ತೆರೆದು ನಿಂತುವು ಆಕಾಶವು ಮೇಘಗಳಿಂದ ತುಂಬಲ್ಪಟ್ಟು ತುಂತುರು ಹನಿಗಳನ್ನು ಸುರಿಸುತ್ತಿದ್ದಿತು. ವಸುದೇವನು ಈ ಪ್ರಕಾರವಾದ ಅದ್ಭುತ ವ್ಯಾಪಾರಗಳನ್ನು ನೋಡುತ್ತ ಕಾರ ಕಗ್ಗತ್ತಲೆಯಲ್ಲಿ ಊರನ್ನು ಬಿಟ್ಟು ಹೊರಗೆ ಬರಲು ; ಆಗ ಮಹಾಶೇಷನು ಬಂದು ಶಿಶುವು ಮಳೆಯಿಂದ ನೆನೆಯದ ಹಾಗೆ ತನ್ನ ಸಾವಿರ ಹೆಡೆಗಳನ್ನು ಆ ವಸುದೇವನ ಮೇಲೆ ಕೊಡೆಯಂತೆ ಹಿಡಿದು ತನ್ನ ಹೆಡೆಗಳ ಮಾಣಿಕ್ಯಗಳ ಪ್ರಕಾಶದಿಂದ ಗೋಕುಲಕ್ಕೆ ಹೋಗುವ ದಾರಿಯನ್ನು ಚೆನ್ನಾಗಿ ಕಾಣಿ ಸುವ ಹಾಗೆ ಮಾಡಿದನು, ಆ ಮೇಲೆ ವಸುದೇವನು ವಿಷ್ಣು ಮಯಾಶಕ್ತಿಯಿಂದ ಕ್ಷಣಮಾತ್ರದಲ್ಲಿ ಗೋಕುಲದ ಬಳಿಗೆ ಬರಲು; ಅಲ್ಲಿ ಎರಡು ದಡಗಳನ್ನೂ ಮಾರಿ ಹರಿಯುತ್ತಿರುವ ಯಮುನಾ ನದಿಯು ಕಾಲುಹೊಳೆಯಂತಾಗಿ ದಾರಿಯನ್ನು ಕೊಡಲು; ಅದನ್ನು ದಾಟಿಬಂದು ನಂದಗೋಪನ ಹೆಂಡತಿಯಾದ ಯಶೋದೆಯು ಹೆತ್ತಿದ್ದ ಮನೆ ಯನ್ನು ಹೊಕ್ಕು ಆ ಶಿಶುವನ್ನು ಅಲ್ಲಿಟ್ಟು ಒಬ್ಬರೂ ಅರಿಯದಂತೆ ಅಲ್ಲಿದ್ದ ಹೆಣ್ಣು ಶಿಶುವನ್ನು ಎತ್ತಿ ಕೊಂಡು ಯಮುನಾ ನದಿಯನ್ನು ದಾಟಿ ಈಚೆಯ ದಡಕ್ಕೆ ಬಂದ ಕೂಡಲೆ ಆ ನದಿಯು ಮೊದಲಿನಂತೆ ನೀರು ತುಂಬಿ ಹರಿಯಿತು. ವಸುದೇವನು ಅಲ್ಲಿಂದ ಹೊರಟು ಮಧುರಾಪುರಿಯನ್ನು ಪ್ರವೇಶಮಾಡಲು ; ಊರುಬಾಗಿಲ ಕದ ಗಳೂ ಅಗಣಿಗಳೂ ಮೊದಲಿನಂತೆ ಹಾಕಿಕೊಂಡುವು. ಅಲ್ಲಿಂದ ಬಂದು ಅರಮನೆ ಯನ್ನು ಸೇರಿ ಆ ಹೆಣ್ಣು ಮಗುವನ್ನು ತನ್ನ ಹೆಂಡತಿಯಾದ ದೇವಕೀದೇವಿಯ ಕೈಯಲ್ಲಿ ಕೊಟ್ಟು ಕಳಚಿಹೋಗಿದ್ದ ಸಂಕೋಲೆಯನ್ನು ತೆಗೆದು ತನ್ನ ಕಾಲುಗಳಿಗೆ ತೊಡಿಸಿಕೊಳ್ಳಲು ಅವು ಯಥಾಪ್ರಕಾರವಾಗಿ ಸೇರಿಕೊಂಡುವು ಅತ್ತ ಗೋಕುಲದಲ್ಲಿ ಯಶೋದೆಯು ಎಚ್ಚೆತ್ತು ತನ್ನ ಮಗ್ಗುಲಲ್ಲಿರುವ ಪುರುಷ ಶಿಶುವನ್ನು ನೋಡಿ ಬಹಳವಾಗಿ ಸಂತೋಷಪಟ್ಟಳು, ಇತ್ತ ಮಧುರಾ ನಗರ ದಲ್ಲಿ ಈ ಹೆಣ್ಣು ಕೂಸು ಆರ್ಭಟಿಸಿ ಅಳುತ್ತಿರುವುದನ್ನು ಕೇಳಿ ಕಾವಲುಗಾರರೆಲ್ಲರೂ ಎದ್ದು ಶೀಘ್ರವಾಗಿ ಓಡಿಬಂದು ಮಲಗಿದ್ದ ಕಂಸನನ್ನು ಎಬ್ಬಿಸಿ-ದೇವಕಿಯ) ಹೆತ್ತಳೆಂದು ಹೇಳಲು ; ಆತನು ಆ ಕೂಡಲೆ ಎಡವಿ ಬೀಳುವುದನ್ನೂ ಕಾಣದೆ ವೇಗ ದಿಂದ ಓಡಿಬಂದು ಆ ಹೆಣ್ಣು ಮಗುವನ್ನು ಸೆಳೆದು ಕೊಂಡು ವಧ್ಯಸ್ಥಾನದ ಅರೆಬಂ ೯