ಕಥಾಸಂಗ್ರಹ-೫ ನೆಯ ಭಾಗ 'ಡೆಯ ಬಳಿಗೆ ತೆಗೆದು ಕೊಂಡು ಬಂದು ಶಿಶುವಿನೆರಡು ಕಾಲುಗಳನ್ನೂ ಕೈಯಲ್ಲಿ ಹಿಡಿದು ಕೊಂಡು ಬಂಡೆಯ ಮೇಲೆ ಬಡಿಯುವುದಕ್ಕೆ ಎತ್ತಲು ; ಆಗ ಆ ಶಿಶುವು ಇವನ ಕೈಯಿಂದ ನುಣುಚಿಕೊಂಡು ಆಕಾಶಕ್ಕೆ ಹಾರಿ ಅಲ್ಲಿ ಮಹಾ ಭಯಂಕರವಾದ ದುರ್ಗಿಯ ರೂಪವನ್ನು ತಾಳಿ ಎಂಟು ತೋಳುಗಳುಳ್ಳ ಆಕಾರವನ್ನು ಧರಿಸಿ ಅಟ್ಟಹಾ ಸವನ್ನು ಮಾಡಿ-ಎಲೈ ಹೆಡ್ಡನಾದ ಕಂಸನೇ, ನಾನು ನಿನ್ನ ಪ್ರಾಣಗಳನ್ನು ಕೊಲ್ಲು ವುದಿಲ್ಲ, ನಿನ್ನ ಪ್ರಾಣಗಳಿಗೆ ಮುನಿಯುವವನು ಆಗಲೇ ಹುಟ್ಟಿ ಭೂಮಿಯಲ್ಲಿ ಬೆಳೆ ಯುತ್ತಿದ್ದಾನೆ ಎಂದು ಹೇಳಿತು. ತರುವಾಯ ಕಂಸನು ದುರ್ಗಿಯ ಮಾತುಗಳನ್ನು ಕೇಳಿ ಬಹಳವಾಗಿ ಆಶ ರ್ಯಪಟ್ಟು ಬಹು ಚಿಂತಾಕ್ರಾಂತನಾಗಿ ಆಯ್ಕೆ, ಸುಳ್ಳಾದ ಆಕಾಶವಾಣಿಯನ್ನು ಕೇಳಿ ನನ್ನ ತಂಗಿಯಾದ ದೇವಕೀದೇವಿಯನ್ನೂ ವಸುದೇವನನ್ನೂ ಬಹಳವಾಗಿ ಹಿಂಸಿಸಿ ಅನ್ಯಾಯವಾಗಿ ಅವರ ಶಿಶುಗಳನ್ನು ಕೊಂದೆನು ಎಂದು ಪಶ್ಚಾತ್ತಾಪಗೊಂಡು ಅವರ ಬಳಿಗೆ ಹೋಗಿ ಒಳ್ಳೆಯ ಮಾತುಗಳಿಂದ ಅವರನ್ನು ಸಮಾಧಾನಪಡಿಸಿ ವಸುದೇ ವನ ಕಾಲುಗಳ ಸಂಕೋಲೆಯನ್ನು ತೆಗಿಸಿ ಸೆರೆಯಿಂದ ಬಿಡಿಸಿ-ಸುಖದಿಂದ ಬಾಳಿರಿ ಎಂದು ಹೇಳಿ ತಾನು ಏಕಾಂತದಲ್ಲಿ ಕುಳಿತುಕೊಂಡು ತನಗೆ ಆಪ್ತರಾದ ಪೂತನಿ ಶಕಟಾ ಸುರ ಧೇನುಕಾಸುರ ಪ್ರಲಂಭಾಸುರ ಅರಿಷ್ಟಾ ಸುರ ಕೇಶಿರಾಕ್ಷಸ ಎಂಬವರೇ ಮೊದಲಾ ದವರನ್ನು ಕುಳ್ಳಿರಿಸಿಕೊಂಡು--ನನ್ನ ಶತ್ರುವ ಯಾವುದೋ ಒಂದು ಸ್ಥಾನದಲ್ಲಿ ಹುಟ್ಟಿ ಬೆಳೆಯುತ್ತಿರುವನಂತೆ ಮಹಾಶಕ್ತರಾದ ನೀವೆಲ್ಲರೂ ಒಂದೊಂದು ಕಾರಣ ದಿಂದ ಒಂದೊಂದು ವಿಧವಾದ ವೇಷವನ್ನು ತಾಳಿಕೊಂಡು ಲೋಕದಲಿ ಎಲಾ ಕಡೆಗಳಲ್ಲೂ ತಿರುಗುತ್ತ ಹುಟ್ಟಿರುವ ಶಿಶುಗಳನ್ನೆಲ್ಲಾ ಬಿಡದೆ ಕೊಂದುಹಾಕುತ್ತ ಒಂದುವೇಳೆ ಏನಾದರೂ ಕಾರಣದಿಂದ ತಪ್ಪಿಸಿಕೊಂಡಿದ್ದರೆ ಆ ಶಿಶುಗಳನ್ನು ಮತ್ತೊ೦ ದುವೇಳೆ ಬಂದು ಕೊಲ್ಲುತ್ತ ಈ ಪ್ರಕಾರ ಈಗ ಲೋಕದಲ್ಲಿ ಹುಟ್ಟಿರುವ ಶಿಶುಗ ಳನ್ನೆಲ್ಲಾ ಕೊಂದುಹಾಕಿರಿ ಎಂದು ಹೇಳಿಕಳುಹಿಸಿ ತಾನು ಮಹಾ ಶಂಕಾತಂಕಹೃದ ಯನಾಗಿದ್ದನು. ಹೀಗಿರುವಲ್ಲಿ ಈ ಕಂಸನಿಗೆ ಕಟ್ಟಳೆಯ ಮೇರೆಗೆ ಪ್ರತಿ ಸಂವತ್ಸರವೂ ಕೊಡುವ ಪೊಗದಿಯನ್ನು ತೆಗೆದು ಕೊಂಡು ಗೋಕುಲದಿಂದ ಬಂದು ಆ ಕಪ್ಪವನ್ನು ಕಂಸನಿಗೆ ಒಪ್ಪಿಸಿ ಬೀಡಾರದಲ್ಲಿಳಿದುಕೊಂಡಿರುವ ನಂದಗೋಪನ ಒಳಿಗೆ ವಸುದೇವನು ರಹಸ್ಯ ವಾಗಿ ಬಂದು-ಏಲೈ ಪ್ರಿಯನೇ, ನಿನ್ನ ಹೆಂಡತಿಯಾದ ಯಶೋದಾದೇವಿಯು ಗಂಡುಮಗುವನ್ನು ಹೆತ್ತಳೆಂದು ವರ್ತಮಾನವನ್ನು ಕೇಳಿ ನನಗೆ ಬಹಳ ಸಂತೋಷ ವಾಯಿತು, ಅಲ್ಲಿ ನನ್ನ ಹಿರಿಯಹೆಂಡತಿಯಾದ ರೋಹಿಣೀದೇವಿಯು ಹೆತ್ತಿರುವ ನನ್ನ ಮಗನನ್ನೂ ಕೂಡ ನಿಮ್ಮ ಮಗನ ಜೊತೆಯಲ್ಲಿ ಇವನೊಬ್ಬ ಮಗನೆಂದೆಣಿಸಿ ನನ್ನ ಮಗನು ಪರಾಕ್ರಮಿಯಾಗುವ ವರೆಗೂ ಪ್ರೀತಿಯಿಂದ ಕಾಪಾಡಬೇಕೆಂದು ಹೇಳಲು ; ನಂದಗೋಪನು ಆ ಮಾತುಗಳನ್ನು ಕೇಳಿ ಬಹಳವಾಗಿ ಸಂತೋಷಪಟ್ಟು ವಸುದೇ ವನನ್ನು ಕುರಿತು-ಅಯ್ಯಾ ಪರಮ ಪ್ರಿಯನೇ, ಈ ಭಾಗದಲ್ಲಿ ಸಂದೇಹವುಂಟೇ ?
ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೦
ಗೋಚರ