ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಷ್ಣಾವತಾರದ ಕಥೆ 271 d &4° ನಿಮ್ಮ ಮಗನನ್ನು ನನ್ನ ಮಗನಿಗಿಂತಲೂ ಹೆಚ್ಚೆಂದು ಸಹಜವಾಗಿ ಭಾವಿಸಿಕೊಂಡಿ ರುವೆನು. ಅದು ಕಾರಣ ನಿಮ್ಮ ಮನಸ್ಸಿನಲ್ಲಿ ಸ್ವಲ್ಪವಾದರೂ ಸಂಶಯ ಪಡಬೇಡಿರಿ ಎಂದು ನಂಬುಗೆಯನ್ನು ಕೊಟ್ಟು ಸನ್ಮಾನಿಸಿ ಮನೆಗೆ ಕಳುಹಿಸಿ ತಾನು ಕಂಸನ ಅಪ್ಪಣೆಯನ್ನು ತೆಗೆದುಕೊಂಡು ಗೋಕುಲಕ್ಕೆ ಬಂದು ಯಶೋದಾರೋಹಿಣಿಯರ ಮಕ್ಕಳುಗಳನ್ನು ನೋಡಿ ಸಂತೋಷಪಟ್ಟು ಕೊಂಡಿರುತ್ತಿದ್ದನು. ಹೀಗಿರುವಲ್ಲಿ ಮೊದಲು ಕಂಸಾಸುರನು ಕಳುಹಿಸಿದ್ದ ಪೂತನಿಯೆಂಬ ರಾಕ್ಷ ಸಿಯು ಯಶೋದಾದೇವಿಯು ಹೊರಗೆಹೋಗಿದ್ದ ವೇಳೆಯಲ್ಲಿ ಆಕೆಯ ಆಕಾರ ವನ್ನು ತಾಳಿ ಮನೆಯೊಳಗೆ ಹೋಗಿ ಆರು ದಿನಗಳ ಮಗುವನ್ನು ಎತ್ತಿ ಕೊಂಡು ವಿಷಸ್ತನ್ಯವನ್ನು ಕುಡಿಸಿ ಕೊಂದುಹಾಕುವೆನೆಂದು ಯೋಚಿಸಿ ಮೊಲೆಯನ್ನು ಉಣ್ಣ ಗೊಡಲು ; ಆ ಬಾಲಕನು ತನ್ನ ಬಾಯಿಯಿಂದ ಮೊಲೆಯ ತುದಿಯನ್ನು ಕಚ್ಚಿ ಅವಳ ಶರೀರಗತವಾದ ನೆತ್ತಿರ ನೆಣ ಮಾಂಸ ಇವು ಮೊದಲಾದುವುಗಳನ್ನೆಲ್ಲಾ ಹೀರಿಬಿ ಟೀನು, ಆ ಮೇಲೆ-ಅಯ್ಯೋ ಬಿಡು ಬಿಡು ಎಂದು ಒರಲುತ್ತ ಕೆಳಗೆ ಬಿದ್ದ ಅವಳ ಪ್ರಾಣಗಳನ್ನೂ ಹೀರಿಬಿಟ್ಟನು, ಆಗ ಮಹಾಘೋರವಾದ ರಾಕ್ಷಸಿಯ ಆಕಾರದ ಹೆಣವನ್ನೂ ಆ ಹೆಣದ ಮೊಲೆಯ ತೊಟ್ಟನ್ನು ತುದಿಯ ಬಾಯಿಯಲ್ಲಿ ಕಚ್ಚಿ ಕೊಂಡಿ ರುವ ಶಿಶುವನ್ನೂ ಯಶೋದೆಯು ಕಂಡು ಬೆದರಿ ಬೆಚ್ಚರಗೊಂಡು ಬೇಗ ಹೋಗಿ ಆ ಶಿಶುವನ್ನು ಎತ್ತಿ ಕೊಂಡು ಗಂಡನಿಗೆ ಹೇಳಿ ಆ ಹೆಣವನ್ನು ಹೊರಗೆ ಹಾಕಿಸಿಬಿಟ್ಟು ಕೂಡಲೆ ಮಂತ್ರಜ್ಞರನ್ನು ಕರಿಸಿ ಆ ಶಿಶುವಿಗೆ ಭೀತಿಶಂಕೆಯು ಪರಿಹಾರವಾಗುವ ಹಾಗೆ ಯಂತ್ರವನ್ನು ಕಟ್ಟಿಸಿ ಮಂತ್ರಿಸಿ ಹಣೆಗೆ ವಿಭೂತಿಯನ್ನಿಡಿಸಿದಳು. ಆ ಮೇಲೆ ನೆಂಟತಿಯರಾದ ವೃದ್ಧ ಸ್ತ್ರೀಯರು ಬಂದು ಮಗುವನ್ನು ರೂಪಿರಿದು ನೆಟ್ಟ ಗೆಗಳನ್ನು ಮುರಿದು ಹರಸಿಹೋದರು. ತರುವಾಯ ಯದುವಂಶೀಯರ ಪುರೋಹಿತನಾದ ಗಾರ್ಗ್ಯನೆಂಬುವನು ವಸುದೇವನ ಅಪ್ಪಣೆಯಿಂದ ಹನ್ನೆರಡನೆಯ ದಿನದಲ್ಲಿ ರಹಸ್ಯ ವಾಗಿ ವೇಷವನ್ನು ವರಿಸಿಕೊಂಡು ಗೋಕುಲಕ್ಕೆ ಬಂದು ರೋಹಿಣೀದೇವಕಿಯರ ಮಕ್ಕಳುಗಳಿಗೆ ರಾಮ ಕೃಷ್ಣ ಎಂದು ಹೆಸರನ್ನಿಟ್ಟು ಹರಸಿ ಹೊರಟುಹೋದನುಅನಂ ತರದಲ್ಲಿ ಯಶೋದೆಯ ನೆಂಟರೂ ಇಷ್ಟ ರೂ ಆದ ಮುತ್ತೈದೆಯರನ್ನು ಕರಿಸಿ ಬಾಗಿ ನಗಳನ್ನು ಕೊಟ್ಟು ಮಗುವನ್ನು ಚಿನ್ನದ ತೊಟ್ಟಿಲಿನಲ್ಲಿ ಮಲಗಿಸಿ ಉಡಿದಾರವನ್ನು ಕಟ್ಟಿ ತೊಟ್ಟಲನ್ನು ತೂಗುತ್ತ ಜೋಗುಳಗಳನ್ನು ಹಾಡಿ ಆ ಮಗುವನ್ನು ತೊಟ್ಟ ಲಲ್ಲಿ ಮಲಗಿಸಿ ತೂಗುವುದಕ್ಕೆ ಆರಂಭಿಸಿದಳು. ಕೃಷ್ಣನು ಬೆಳೆಯುತ್ತ ಕೆಲವು ದಿವಸ ಗಳಿಗೆ ಅಕಾರಣವಾದ ನಗೆಯಳುವಿಕೆಗಳಿಂದಲೂ ಉತ್ತಾನಶಯನಗಳಿಂದಲೂ ತಾಯಿ ತಂದೆಗಳನ್ನು ನಗಿಸಿ ಸಂತೋಷಪಡಿಸುತ್ತಿದ್ದನು. ಹೀಗಿರುವಲ್ಲಿ ಒಂದು ದಿವಸ ಯಶೋದೆಯು ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಿ ಪರಿಚಾರಕಳನ್ನು ಕರೆದು ಕೊಂಡು ಸ್ವಾನಾರ್ಥವಾಗಿ ಕಾಳಿ೦ದೀನದಿಗೆ ಹೋದ ಕಾಲದಲ್ಲಿ ಶಕಟಾಸುರನು ನಂದಗೋಪನ ಮನೆಯಲ್ಲಿ ನಿಲ್ಲಿಸಿರುವ ಗಾಡಿ ಯಲ್ಲಿ ಸೇರಿಕೊಂಡು ತೊಟ್ಟಿಲಿನಲ್ಲಿ ಮಲಗಿರುವ ಮಗುವನ್ನು ಕೊಂದುಹಾಕುವೆ