ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- ಕೃಷ್ಣಾವತಾರದ ಕಥೆ 275 ಕತ್ತೆಯ ರೂಪಿನ ಧೇನುಕನೆಂಬ ರಾಕ್ಷಸನು ಕೃಷ್ಣನು ವನಕ್ಕೆ ಬಂದುದನ್ನು ಕಂಡುಇವನನ್ನು ಕಚ್ಚಿ ಒದೆದು ಕೊಂದು ತಿಂದುಹಾಕುವೆನೆಂದು ಯೋಚಿಸಿಕೊಂಡು ಆತನ ಬಳಿಗೆ ಓಡಿಬರಲು ; ಕೃಷ್ಣನು ಅದರ ಆರ್ಭಟಕ್ಕೆ ಸ್ವಲ್ಪವಾದರೂ ಅಂಜದೆ ಹತ್ತಿರಕ್ಕೆ ಹೋಗಿ ಆ ಕತ್ತೆಯ ನಾಲ್ಕು ಕಾಲುಗಳನ್ನು ಜೋಡಿಸಿ ಹಿಡಿದು ಕೊಂಡು ಓಲೆಮ ರಗಳ ಮೇಲಿರುವ ಹಣ್ಣಿನ ಗೊನೆಗಳನ್ನು ಕೆಡಹುವುದಕ್ಕೆ ಒಳ್ಳೆಯ ಸಹಾಯವಾಯಿ ತೆಂದು ಹೇಳಿ ಗದ್ರನೆ ಬೀಸಿ ಮರದ ಮೇಲಿರುವ ಗೊನೆಗಳಿಗೆ ಗುರಿಕಟ್ಟಿ, ಎಸೆಯುತ್ತ ಬಿದ್ದು ಎಚ್ಚೆತ್ತುಕೊಳ್ಳುವುದಕ್ಕೆ ಸ್ವಲ್ಪವಾದರೂ ಅವಕಾಶವನ್ನು ಕೊಡದೆ ತಿರಿಗಿ ತೆಗೆದು ಕೊಂಡು ಇಡುತ್ತ ಇದೇ ರೀತಿಯಾಗಿ ಮಾಡುತ್ತ ಬಂದುದರಿಂದ ಆ ರಕ್ಕಸನು ನೊಂದು ಬಳಲಿ ಕಂಗೆಟ್ಟು ಮೈಮರೆತು ಸತ್ತುಹೋದನು, ಆ ಮೇಲೆ ಕೃಷ್ಣನು ಜೊತೆಯ ಹುಡುಗರನ್ನೆಲ್ಲಾ ಕರೆದು--ಇದೋ, ಹೆದರಬೇಡಿರಿ, ನೀವು ಹೇಳಿದ ಕತೆಯು ಸತ್ತು ಬಿದ್ದಿದೆ, ನೋಡಿರಿ, ಓಲೆಯ ಹಣ್ಣಿನ ಗೊನೆಗಳು ಅಪರಿಮಿತವಾಗಿ ಬಿದ್ದಿವೆ. ತಿನ್ನೋಣ, ಬನ್ನಿರಿ ಎಂದು ಹೇಳಲು ; ಅವರೆಲ್ಲರೂ ಬಂದು ನೋಡಿ ಕೃಷ್ಣನ ಸಾಮ ರ್ಥ್ಯಕ್ಕೆ ಆಶ್ಚರ್ಯಪಟ್ಟು ಸಂತೋಷದಿಂದ ಬೇಕಾದಷ್ಟು ಹಣ್ಣುಗಳನ್ನು ತಿಂದು ಸಾಯಂಕಾಲದ ವೇಳೆಯಲ್ಲಿ ಹಣ್ಣಿನ ಗೊನೆಗಳನ್ನು ಹೊತ್ತು ಕೊಂಡು ತಮ್ಮ ಹಳ್ಳಿಗೆ ಬಂದು ಈ ವರ್ತಮಾನವನ್ನು ನಂದಗೋಪಾದಿಗಳಿಗೆ ತಿಳಿಸಿದರು, ಅವರೆಲ್ಲ ರೂ ಕೇಳಿ ಬಹಳ ಸಂತೋಷಾಶ್ಚರ್ಯಮನಸ್ಕರಾಗಿ- ಈ ಕೃಷ್ಣನು ಮನುಷ್ಯ ಮಾತ್ರನಲ್ಲಿ, ಇವನ ಸಾಮರ್ಥ್ಯವನ್ನು ಇಷ್ಟೆಂದು ತಿಳಿಯಲಾಗದು ಎಂದು ಮಾತಾಡಿಕೊಳ್ಳುತ್ತಿದ್ದರು. ತರುವಾಯ ಮತ್ತೊಂದು ದಿವಸ ಕೃಷ್ಣ ಬಲರಾಮರು ತಮ್ಮ ದನಗಳನ್ನು ಅಟ್ಟಿ ಕೊಂಡು ಜೊತೆಯ ಹುಡುಗನೊಡನೆ ಯಮುನಾನದಿಯ ಪ್ರಾಂತ್ಯದಲ್ಲಿ ದನಗ ಳಿಗೆ ಒಳ್ಳೆಯ ಎಳೇಹುಲ್ಲನ್ನು ಮೇಯಿಸುತ್ತ ಮಧ್ಯಾಹ್ನವಾದ ಕೂಡಲೆ ತಿಳಿನೀರನ್ನು ಕುಡಿಸಿ ಸಮಿಾಪದಲ್ಲಿರುವ ಭಾಂಡೀರವೆಂಬ ಒಂದು ದೊಡ್ಡ ಆಲದ ಮರದ ನೆರಳಿಗೆ ದನ ಗಳನ್ನೆಲ್ಲಾ ಅಟ್ಟಿ ಕೊಂಡು ಬಂದು ನಿಲ್ಲಿಸಲು; ಆಗ ದನಗಳೆಲ್ಲಾ ಅಲ್ಲಿ ಮಲಗಿಕೊಂಡು ಮೆಲಕುಹಾಕುತ್ತಿದ್ದುವು. ಆ ವೇಳೆಯಲ್ಲಿ ಕೃಷ್ಣನೇ ಮೊದಲಾದವರೆಲ್ಲರೂ ಕೂಡಿ ಬಿಸಿಲು ಕಡಮೆಯಾಗುವ ವರೆಗೂ ಇಲ್ಲಿ ಕುದುರೆಚಂಡನ್ನು ಆಡೋಣ ! ಸೋ ಶಿವರು ಗೆದ್ದವರನ್ನು ಹೊತ್ತುಕೊಂಡಿರಬೇಕೆಂದು ಗೊತ್ತು ಮಾಡಿಕೊಂಡು ಆಟವನ್ನು ಆಡು ತಿರಲು ; ಆ ಸಮಯದಲ್ಲಿ ಕಂಸನಿಂದ ಕಳುಹಿಸಲ್ಪಟ್ಟ ಪ್ರಲಂಭಾಸುರನೆಂಬ ದೈತ್ಯನು ಆ ದನಗಳನ್ನು ಕಾಯುವ ಹುಡುಗರಂತೆ ವೇಷವನ್ನು ಹಾಕಿಕೊಂಡು ಅವರೊಳಗೆ ಬಂದು ಸೇರಿ ಕೃಷ್ಣನನ್ನು ಕೊಲ್ಲುವುದಕ್ಕೆ ತನ್ನಿಂದ ಅಸಾಧ್ಯವೆಂದೆಣಿಸಿ ಒಲರಾಮನ ಜೊತೆಯಲ್ಲಿ ಆಡುವುದಕ್ಕೆ ತೊಡಗಿ ಕಡೆಗೆ ತಾನವನಿಗೆ ಸೋತು ಆತನನ್ನು ಹೊತ್ತು ಕೊಂಡು ಆಕಾಶಕ್ಕೆ ಹಾರಿಹೋಗಲು ; ಕೃಷ್ಣನು ನೋಡಿ-ಎಲೈ ಅಣ್ಣಾ, ಇವನು ಕಪಟಿಯಾದ ರಾಕ್ಷಸನು ! ನಿನಗೆ ಮೋಸಮಾಡಿದನು ! ಬೇಗನೆ ಅವನನ್ನು ಕೊಂದು ಹಾಕು! ತಡಮಾಡಬೇಡ ಎಂದು ಕೂಗಿ ಹೇಳಿದುದರಿಂದ ಬಲರಾಮನು ಅವನೆರಡು ಕೈಗಳನ್ನೂ ಹಿಡಿದು ಕೊಂಡು ಕೆಳಕ್ಕೆ ತುಳಿದು ಕುಂಬಾರರ ಗಾಲಿಯಂತೆ ಗಿರನೆ ತಿರು