ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೌದ್ಧಾವತಾರದ ಕಥೆ 277 ಆ ಮೇಲೆ ಕೃಷ್ಣನು ಸಿಂಹಾಸನದ ಮೇಲೆ ಕುಳಿತಿರುವ ಕಂಸನ ಬಳಿಗೆ ಹೋಗಿ ಅವನ ಜುಟ್ಟು ಹಿಡಿದೆಳೆದು ಕೆಳಗೆ ಕೆಡುಹಿಕೊಂಡು ತನ್ನ ಕಾಲಿನಿಂದ ಒದೆದು ತುಳಿದು ಕೊಂದುಹಾಕಿ ಯಥಾಪ್ರಕಾರವಾಗಿ ಅವನ ತಂದೆಯಾದ ಉಗ್ರಸೇನನಿಗೆ ಯಾದವ ಪಟ್ಟ ವನ್ನು ಕಟ್ಟಿ ನರಕಾಸುರನೆಂಬ ದೈತ್ಯನನ್ನೂ ಕೊಂದು ಅವನು ಸೆರೆಯಲ್ಲಿಟ್ಟಿದ್ದ ಹದಿನಾರು ಸಾವಿರ ದೇವಕನ್ನಿಕೆಯರನ್ನೂ ರುಕ್ಷ್ಮಿಣೀ ಸತ್ಯಭಾಮೆಯರೇ ಮೋಲಾದ ಅಷ್ಟಮಹಿಷಿಯರನ್ನೂ ತಾನು ಮದುವೆಯಾಗಿ ಅವರಲ್ಲಿ ಸಾಂಬ ಮನ್ಮಥರೆಂಬವರೇ ಮೊದಲಾದ ಮಕ್ಕಳುಗಳನ್ನು ಪಡೆದು ಇನ್ನೂ ಹಂಸ ಡಿಬಿಕ ಮುರ ಸಾಲ್ಯಾದ್ಯನೇಕ ದೈತ್ಯರನ್ನು ಸಂಹರಿಸಿ ವೈಕುಂಠ ದ್ವಾರಪಾಲಕರಾದ ಜಯವಿಜಯರು ಮರನೆಯ ಜನ್ಮದಲ್ಲಿ ಶಿಶುಪಾಲ ದಂತವಕ್ರರೆಂಬ ಹೆಸರಿನಿಂದ ಹುಟ್ಟಿದುದರಿಂದ ಅವರಿಬ್ಬರನ್ನೂ ಸಂಹರಿಸಿ ಪಾಂಡವರಿಗೆ ಸಹಾಯವನ್ನು ಮಾಡಿ ಭಾರತಯುದ್ಧ ದಲ್ಲಿ ಜರಾಸಂಧ ಕೌರವ ಜಯದ್ರಥ ಶಲ್ಯ ದೃಪದ ಕೇಕಯ ವಿರಾಟ ತ್ರಿಗರ್ತ ಭೂರಿಶ್ರವ ಎಂಬವರೇ ಮೊದಲಾದ ಅನೇಕ ದುಷ್ಟ ರಾಜರುಗಳನ್ನೂ ಕೊಲ್ಲಿಸಿ ಭೂಭಾರವನ್ನಿಳಿಸಿ ಹಸ್ತಿನಾ ವತೀ ನಗರದಲ್ಲಿ ಸತ್ಯಸಂಧನಾದ ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿ ಭೂಲೋಕದಲ್ಲಿ ತನ್ನ ಮಾನವದೇಹವನ್ನು ಬಿಟ್ಟು ವೈಕುಂಠಕ್ಕೆ ತೆರಳಿದನು. 8, THE NINTH OR BHUDDHA INCARNATION, ೮, ಬೌದ್ದಾ ವತಾರದ ಕಥೆ. ಪೂರ್ವಕಾಲದಲ್ಲಿ ತಾರಕಾಸುರನೆಂಬ ರಾಕ್ಷಸನು ಮಹಾ ಪರಾಕ್ರಮಶಾಲಿ ಯಾಗಿ ಇಂದ್ರಾದಿ ದೇವತೆಗಳಿಗೆ ಬಹಳವಾಗಿ ತೊಂದರೆಯನ್ನುಂಟುಮಾಡುತ್ತಿದ್ದನು. ಅದು ಕಾರಣ ದೇವತೆಗಳೆಲ್ಲರೂ ಬಹುವಿಧವಾಗಿ ಪ್ರಾರ್ಥನೆಯನ್ನು ಮಾಡಿಕೊಂಡು ದ ರಿಂದ ಈಶ್ವರನ ಮಗನಾದ ಷಣು ಖನು ಆ ದೇವಸೇನಾಪತಿತ್ವವನ್ನು ವಹಿಸಿ ಆ ದುಷ್ಟನಾದ ದೈತ್ಯನನ್ನು ಸಂಹರಿಸಿದನು. ಅವನ ಮಕ್ಕಳಾದ ತಾರಕಾಕ್ಷ ಕಮಲಾಕ್ಷ ವಿದ್ಯುನ್ಮಾಲಿ ಎಂಬ ಮರುಮಂದಿಯ ಸರೋಜಸಂಭವನನ್ನು ಕುರಿತು ಬಹಳವಾಗಿ ತಪಸ್ಸು ಮಾಡಿ ಮೆಚ್ಚಿಸಿ ಪ್ರತ್ಯಕ್ಷನಾಗಿ ಬಂದ ಬ್ರಹ್ಮನನ್ನು ನೋಡಿ ತಮ್ಮ ತಂದೆ ಯಾದ ತಾರಕಾಸುರನನ್ನು ಕೊಲ್ಲಿಸಿದ ದೇವತೆಗಳೆಂಬ ಮೃಗಗಳನ್ನು ಬೇಟೆಯಾಡಬೇ ಕೆಂದು ತಮ್ಮ ಮನಸ್ಸಿನಲ್ಲಿ ಯೋಚಿಸಿಕೊಂಡು--ಎಲ್ಲೆ ಚತುರ್ಮುಖನೇ, ನಮಗೆ ಆಮ ರತ್ನವುಂಟಾಗುವ ಹಾಗೂ ದೇವಾಸುರಾದಿಗಳೆಲ್ಲರೂ ನಮಗೆ ಸೇವಕರಾಗಿ ನಮ್ಮನ್ನು ಓಲೈಸಿಕೊಂಡಿರುವ ಹಾಗೂ ನಮ್ಮ ವಾಸಕ್ಕೆ ಯೋಗ್ಯವಾಗಿ ಯಾರಿಂದಲೂ ಜಯಿಸ ಆಶಕ್ಯವಾದ ಮೂರು ಪಟ್ಟಣಗಳು ಆಕಾಶಮಾರ್ಗದಲ್ಲಿ ಉಂಟಾಗುವ ಹಾಗೂ ಈ ಮೂರು ವರಗಳನ್ನೂ ನಮಗೆ ಕೊಡಬೇಕೆಂದು ಬೇಡಿಕೊಂಡರು, ಆಗ ಬ್ರಹ್ಮನು ಆಹಾ ! ಇದಕ್ಕೇನು ಮಾಡಬೇಕು ? ನಾನು ಹುಲಿಗೆ ಧೈರ್ಯವನ್ನೂ ಕತ್ತಲೆಗೆ ಕಾಠಿ ಇವನ್ನೂ ಕುಲಗಿರಿಗಳಿಗೆ ಚೈತನ್ಯವನ್ನೂ ಆನೆಗಳಿಗೆ ಸೂಕ್ಷ್ಮ ಬುದ್ಧಿಯನ್ನೂ ಕೊಲೆ ಗಾರರಿಗೆ ನಿತ್ಯ ದೇಹವನ್ನೂ ಒಲಿದು ಕೊಟ್ಟರೆ ಲೋಕಕ್ಕೆ ಲೇಸ್ತಾಗುವುದೇ ? ಎಂದಿಗೂ