ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಕಳು ಕಪ್ಪಾದರೆ ಹಾಲು ಕಪ್ಪೆ

ಆಕಳು  ಕಪ್ಪಾದರೆ ಹಾಲು ಕಪ್ಪೇ ? ಆಗದ ಕಾರ್ಯಕ್ಕೆ ಆಶೆ ಪಟ್ಟರೆ ಸಾಗುವದಿಲ್ಲ ಹೋಗುವದಿಲ್ಲ. ಆಟಕ್ಕೆ ತಕ್ಕ ವೇಷ, ವೇಷಕ್ಕೆ ತಕ್ಕ ಭಾಷೆ. ಆನೆಗೆ ಗುಂಗುರು ಕಾಡಿದ ಹಾಗೆ. ಆನೇ ಕಂಡು ಶ್ಯಾನ ಬೊಗುಳಿದ ಹಾಗೆ. ಆನೇ ಕೈಲಿ ಕಬ್ಬು ಕೊಟ್ಟ ಹಾಗೆ. ಆನೇ ಮೇಲೆ ಹೋಗುವವನನ್ನು ಸುಣ್ಣಾ ಕೇಳಿದ ಹಾಗೆ, ಆರಾಳು ಮರು ಸೌಜು. ಆಶೆಗೆ ನಾಶವಿಲ್ಲ, ಇಡೀ ಮುಳುಗಿದ ಮೇಲೆ ಚಳಿಯೇನು ಗಾಳಿಯೇನು ? ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದನು. ಇಲಿ ಬೆಕ್ಕಿಗೆ ಸಾಕ್ಷಿ. ಇಲಿಗೆ ಹೆದರಿ ಹುಲಿಯ ಬಾಯಲ್ಲಿ ಬಿದ್ದನು. ಇವನವನಿಗೆ ಎಣ್ಣೆ ಸೀಗೆ. ಈಚಲು ಮರದ ಕೆಳಗೆ ಮಜ್ಜಿಗೇ ಕುಡಿದರೆ ನಾಚಿಕೆಗೇಡಾಗದೇ ? ಉಂಟುಮಾಡಿದ ದೇವರು ಊಟವ ಕೊಡಲಾರನೋ ? ಉಂಡದ್ದು ಉಂಡ ಹಾಗೆ ಹೋದರೆ ವೈದ್ಯನ ಹಂಗೇನು ? ಉಂಬೋಕ್ಕೆ ಉಡೋಕ್ಕೆ ಅಣ್ಣಪ್ಪ, ಕೆಲಸಕ್ಕೆ ಮಾತ್ರ ದೊಣ್ಣಪ್ಪ. ಊರೆಲ್ಲಾ ಸೂರೆ ಆದ ಮೇಲೆ ಬಾಗಿಲು ಹಾಕಿದರು. ಎಣ್ಣೆ ಬರುವಾಗ ಗಾಣಾ ಮುರಿಯಿತು. ಎಣ್ಣೆ ಅಳದ ಮಾನದ ಜೆಡ್ಡು ಹೋದೀತೇ ? ಎತ್ತ ಹೋದರೂ ಮೃತ್ಯು ಬಿಡದು. ಎತ್ತಿನ ಮುಂದೆ ತೆಂಗಿನ ಕಾಯಿ ಹಾಕಿದ ಹಾಗೆ, ಎತ್ತು ಹಾರುವುದಕ್ಕಿಂತ ಮುಂಚೆ ಕೌದಿ ಹಾರಿತು. ಎಮ್ಮೆ ಮೇಲೆ ಮಳೆಗರೆದ ಹಾಗೆ. ಎಲ್ಲಾ ಹೊಕ್ಕಿತು, ಬಾಲ ಮಾತ್ರ ಉಳಿಯಿತು.ಈ ಗಾದೆಯ ಅರ್ಥ