ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

282 ಕಥಾಸಂಗ್ರಹ-೬ ನೆಯ ಭಾಗ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ತೊಡೆಯಬಹುದೇ ? ಒಡಂಬಡಿಕೆಯಿಂದ ಆಗುವದು ದಡಂಬಡಿಕೆಯಿಂದ ಆದೀತೇ ? ಒಪ್ಪೋತುಂಡುವ ಯೋಗಿ, ಎರಡೊತ್ತುಂಡವ ಭೋಗಿ, ಮತ್ತೊತ್ತುಂಡವ ರೋಗಿ, ಈ ನಾಲ್ಕೂ ತುಂಡುವನ ಹೊತ್ತು ಕೊಂಡು ಹೋಗಿ. ಒರಳಲ್ಲಿ ಕೂತರೆ ಒನಕೇ ಪೆಟ್ಟು ತಪ್ಪಿತೇ ? ಓದಿ ಓದಿ ಮರುಳಾದ. ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿ. ಕಂಡದ್ದು ಮಾತನಾಡಿದರೆ ಕೆಂಡದಂಥ ಕೋಪ. ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳಾ ನೋಡಿದ ಹಾಗೆ. ಕಟ್ಟೋ ನಾಯಿ ಬೊಗಳದು, ಬೊಗಳೋ ನಾಯಿ ಕಚ್ಛದು. ಕಡು ಕೋಪ ಬಂದಾಗ ತಡಕೊಂಡವನೇ ಜಾಣ. ಕಟ್ಟೆಗೆ ಬಾಯಿ ತೆರೆದು ಕಡಿವಾಣಕ್ಕೆ ಬಾಯಿ ಮುಚ್ಚಿದರೆ ಆದೀತೇ ? ಕತ್ತೆ ಕಸ್ತೂರೀ ಹೊತ್ತ ಹಾಗೆ. ಕ ಮೊಲೆಯಲ್ಲಿ ಖಂಡುಗ ಹಾಲಿದ್ದರೇನು ? ಕಪ್ಪೆ ಕೂಗಿ ಮಳೆ ಬರಿಸಿದ ಹಾಗೆ. ಕಬ್ಬಿಣ ಗಡಾರಿ ನುಂಗಿ ಶುಂಠಿ ಕಷಾಯಾ ಕುಡಿದ ಹಾಗೆ. ಕಬ್ಬು ಡೊಂಕಾದರೆ ಸವಿ ಡೊಂಕೇ ? ಕರಡಿಗೆ ಕೂದಲು ಯಾವದು, ರೋಮವು ಯಾವದು ? ಕರಡೀ ಕೈಗೆ ಹೆದರದವ ಕರೀ ಕಂಬಳಿಗೆ ಹೆದರಾನೇ ? ಕರೆಯುವ ಹಸಾ ಕೊಟ್ಟು ಒದೆಯುವ ಕತ್ತೇ ತಂದ ಹಾಗೆ. ಕಳ್ಳ ಕಳ್ಳಗೆ ಬಲ್ಲ. ಕಾಗೆ ಕೋಗಿಲೆಯ ಹಾಗಿದ್ದರೂ ರಾಗದಲ್ಲಿ ಭೇದವಿಲ್ಲ ವೇ ? ಕಾಡಲ್ಲಿ ಹೊಂಬಾಳೆ ಬಯಸಿದ ಹಾಗೆ. ಕಾಡಿನಲ್ಲಿ ತಿರುಗಿ ಕಟ್ಟಿಗೆ ಇಲ್ಲ ಅಂದ ಹಾಗೆ. ಕಿಚ್ಚೆದ್ದಾಗ ಬಾವಿ ತೋಡಿದ. ಕಿಟಿಕಿಯಿಂದ ನುಸುಳುವವ ಹೆಬ್ಬಾಗಿಲಿಂದ ಬಾರನೇ ? ಕಿಡಿಯಿಂದ ಕಾಡ ಸುಡಬಹುದು. ಕೀಟ ಸಣ್ಣದಾದರೂ ಕಾಟ ಬಹಳ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಕುರುಬನ ಮಂದೇ ತೋಳ ಕಾದ ಹಾಗೆ. ಕುಲವನ್ನು ನಾಲಿಗೆ ಹೇಳುವದು. ಕೂಸು ಕಾಸು ಬಾಳದು, ಜೋಗುಳ ಮುಗಿಲ ಮುಟ್ಟಿತು. ಕೂಳ ಚೆಲ್ಲಿದ ಕಡೆ ಸಾವಿರ ಕಾಗೆ.