ಗಾದೆಗಳು 291 ಹಣವಿದ್ದವನಿಗೆ ಗುಣವಿಲ್ಲ, ಗುಣವಿದ್ದವನಿಗೆ ಹಣವಿಲ್ಲ. ಹಣವಿಲ್ಲದವ ಹೆಣ. ಹಣವಂದರೆ ಹೆಣಾ ಬಾಯಿ ಬಿಡುತ್ತೆ. ಹಣ್ಣು ಜಾರಿ ಹಾಲಿನಲ್ಲಿ ಬಿದ್ದ ಹಾಗೆ, ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದ ಹಾಗೆ. ಹಣ್ಣೆಂದು ಶಲಭ ದೀಪದ ಮೇಲೆ ಬಿದ್ದು ಸತ್ತ ಹಾಗೆ. ಹತ್ತರ ಸಾವು ಮದುವೆ ಸಮಾನ. ಹತ್ತರ ಹಲ್ಲ ಕಡ್ಡಿ ಒಬ್ಬನ ತಲೆ ಹೊರೆ. ಹನಿಗೂಡಿದರೆ ಹಳ್ಳ, ತೆನೆಗೂಡಿದರೆ ಭತ್ತ. ಹನುಮಂತರಾಯ ಹಗ್ಗ ತಿನ್ನು ವಲ್ಲಿ ಪೂಜಾರೆಯ ಸೇವಿಗೇ ಬಯಸಿದ. ಹನ್ನೆರಡು ವರುಷ ಸಾಧಕಾ ಮಾಡಿ ಮನೇ ಮುದುಕಿ ಸೊಂಟಾ ಮುರಿದ ಹಾಗೆ, ಹಬೆಗೆ ತಾಳದೆ ಉರಿಯೊಳಗೆ ಬಿದ್ದನಂತೆ. ಹರಿವಿಯ ಅನ್ನ ದಲ್ಲಿ ಒಂದಗುಳು ನೋಡಿದರೆ ಸರಿ. ಹರಿಯೋ ಪರಿಯಂತರ ಎಳೆಯಬಾರದು; ಮುರಿಯೋ ಪರಿಯಂತರ ಬೊಗ್ಗಿ ಸಬಾರದು. ಹಲವು ಸಮಗಾರರು ಕಡಿ ತೊಗಲು ಹದಾ ಕೆಡಿಸಿದರು. ಹಲ್ಲು ಇರುವಾಗಲೇ ಕಡ್ಲಿ ತಿನ್ನಬೇಕು. ಹಸೀ ಗೋಡೆಗೆ ಕಲ್ಲು ಹೊಡೆದ ಹಾಗೆ. ಹಳೆದು ಮಾರಿ ಹೊಸದಿಲ್ಲ; ಬಿಳಿದು ಮಾರಿ ಬಣ್ಣವಿಲ್ಲ. ಹಳ್ಳಿ ಕುರುಬರಿಗೆ ಗಾಜೇ ಮಾಣಿಕ್ಯ. ಹಾಕುವದಕ್ಕೆ ತೆಗೆಯುವದಕ್ಕೆ ಗೌಡನ ಕೋಳವೇ ? ಹಾಕೋದು ಬಿತ್ತೋದು ನನ್ನಿ ಚೆ; ಆಗೋದು ಹೋಗೋದು ದೇವರಿಚ್ಛೆ. ಹಾಗದ ಗೋಧಿ ಮುಪ್ಪಾಗದ ಬೆಲ್ಲಾ ತಿಂತು. ಹಾಗಲವಾಡಿಗೆ ಹೋದರೆಗೀದರೆ ಹಾಗನ್ನೊಂದೆಮ್ಮೆ ತಂದರೆಗಿಂದರೆ ಕರೆದರೆಗಿರೆದರೆ ನಿಮ್ಮವರಿಗೆ ಮಜ್ಜಿಗೆಗಿಚ್ಚಿಗೆ ಕೊಟ್ಟ ಗಿಟ್ಟಿಯಾ ! ಹಾಡಿದ್ದೇ ಹಾಡೋ ಕಿಸುಬಾಯಿ ದಾಸ. ಹಾದೀ ಜಗಳವ ಹಣವಡ್ಡಕ್ಕೆ ಕೊಂಡ. ಹಾರೋ ಗುಬಿಗೆ ಗೋದೀ ಕೇಳು ಕಟಿ, ದ ಹಾಗೆ. ಹಾಲಕ್ಕಿಯಾದರೆ ಹಾಲ ಕರದೀತೇ ? ಹಾಲಿದ್ದಾಗಲೇ ಹಬ್ಬಾ ಮಾಡು. ಹಾವಿಗೆ ಹಾಲೆರೆದರೆ ತನ್ನ ವಿಷಾಬಿಟ್ಟಿತೇ ? ಹಾವಿನ ಕೂಡೆ ಕಪ್ಪಗೆ ಸಗಸವೇ ? ಹಾವ ಕೊಂದು ಹದ್ದಿನ ಮುಂದೆ ಹಾಕಿದ ಹಾಗೆ. ಹಾವು ಮುಪ್ಪಾದರೆ ವಿಷ ಮುಪ್ಪೇ, ಹಾಸಿಗೇ ಅರಿತು ಕಾಲ್ಮೀಡಬೇಕು. מך
ಪುಟ:ಕಥಾ ಸಂಗ್ರಹ - ಭಾಗ ೨.djvu/೩೦೧
ಗೋಚರ