ಪುಟ:ಕಥಾ ಸಂಗ್ರಹ - ಭಾಗ ೨.djvu/೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾವಣನ ದಿಗ್ವಿಜಯವು 25 ಯುದ್ಧ ವಾಗುತ್ತಿರಲು ; ಬಲಿಷ್ಠರಾದ ರಾಕ್ಷಸವೀರರು ಅಪ್ರತಿಮಬಲವುಳ್ಳವರಾದ ಸುಂವೀರರಿಂದ ಗಾಯವಡೆದವರಾಗಿ ಕಂಗೆಟ್ಟು ದಿಕ್ಕು ದಿಕ್ಕಿಗೆ ಓಡುತ್ತಿದ್ದರು. ಅದನ್ನು ಕಂಡು ರಾವಣನು-ಶುಕಸಾರಣ ಮಹೋದರ ಧೂಮ್ರಾಕ್ಷ ದುರ್ಮುಖ ಖರ ಮಹಾಪಾರ್ಶ್ವ ಮಾರೀಚ ಪ್ರಹಸ್ಯ ನಿಕುಂಭ ತ್ರಿಶಿರ ದೂಷಣ ಯಜ್ಞಾಂತಕ ಸುರಾಂತಕ ನರಾಂತಕ ಸೂರ್ಯರಿಪು ವಿಕಟ ಸುಪ್ತಪ್ಪ ದುರ್ಧರ ಸುಮಾಲಿ ಇವರೇ ಮೊದಲಾದ ರಾಕ್ಷಸವೀರಾಗ್ರೇಸರರನ್ನು ಯುದ್ಧಕ್ಕೆ ನೇಮಿಸಲು ; ಆಗ ಸುಮಾಲಿ ಎಂಬವನು ಬಹುರಾಕ್ಷಸಸೇನೆಗಳನ್ನು ಕರೆದು ಕೊಂಡು ಬಂದು ಸರಳು ಮಳೆಯನ್ನು ಸುರಿಸುತ್ತ ತಿರುಗಿದ ಕಡೆ ಬಡಿದು ದೇವತೆಗಳನ್ನು ದಿಕ್ಕು ದಿಕ್ಕಿಗೆ ಓಡಿಸುತ್ತಿರಲು ; ವಸುಗಳಲ್ಲಿ ಎಂಟನೆಯವನಾದ ಸಾವಿತ್ರನೆಂಬವನು ಅದನ್ನು ನೋಡಿ-ರಥವನ್ನು ಹತ್ತಿ ಸುಮಾಲಿಯ ಎದುರಿಗೆ ಬಂದು ನಿಂತು ಬಿಲ್ಲಿಗೆ ಹೆದೆಯನ್ನು ಏರಿಸಿ ಝೇಂಕರಿಸಿ ಅನೇಕ ಬಾಣಗಳನ್ನು ಹೂಡಿ ಸುಮಾಲಿಯ ಮೇಲೆ ಬಿಡಲು ; ಅವನು ಆ ಬಾಣಗಳ ನ್ನೆಲ್ಲಾ ನಡುದಾರಿಯಲ್ಲೇ ಕತ್ತರಿಸಿ ಪ್ರತಿಯಾಗಿ ಸಾವಿತ್ರನ ಮೇಲೆ ನೂರು ಬಾಣಗ ಇನ್ನು ಪ್ರಯೋಗಿಸಿ ಆತನ ತೇರಿನಚ್ಚನ್ನು ಕಡಿದನು. ಆಗ ಎರಥನಾದ ಸಾವಿತ್ರನು ರೋಪಾರುಣ ನೇತ್ರಗಳುಳ್ಳವನಾಗಿ ಮತ್ತೊಂದು ತೇರನ್ನೇರಿ ಬಂದು ಹತ್ತು ಬಾಣ ಗಳಿಂದ ಸುಮಾಲಿಯ ಸಾರಥಿಯ ತಲೆಯನ್ನೂ ಇಪ್ಪತ್ತು ಬಾಣಗಳಿಂದ ರಥಾಶ್ವಗ ಇನ್ನೂ ನಾಲ್ಕು ಬಾಣಗಳಿಂದ ಧ್ವಜಸ್ತಂಭವನ್ನೂ ಐವತ್ತು ಬಾಣಗಳಿಂದ ತೇರನ್ನೂ ನೂರು ಬಾಣಗಳಿಂದ ಸುಮಾಲಿಯ ಕರಗತಕೋದಂಡವನ್ನೂ ಕತ್ತರಿಸಿ ಬೊಬ್ಬಿರಿದನು. ಆಗ ಸುಮಾಲಿಯು ಎರಥನಾದಾಗೂ ಧೈರ್ಯಹೀನನಾಗದೆ ರಥದಿಂದ ಭೂಮಿಗೆ ಧುಮುಕಿ ತೋರವಾದ ಗದೆಯನ್ನು ತೆಗೆದು ಕೊಂಡು ಯುದ್ಧಕ್ಕೆ ಸಿದ್ದ ನಾಗಿ ನಿಂತನು. ಆಗ ಪರಾಕ್ರಮಶಾಲಿಗಳಾದ ಅವರಿಬ್ಬರೂ ಭಯಂಕರವಾದ ಗದಾ ಯುದ್ಧವನ್ನು ಮಾಡುತ್ತಿರುವಲ್ಲಿ ಶೂರನಾದ ಸಾವಿತ್ರನು ಸುಮಾಲಿಯು ಹೊಡೆದ ಗದೆಯ ಮಹಾಘಾತವನ್ನು ತಪ್ಪಿಸಿಕೊಂಡು ಅವನು ಮೇಲಕ್ಕೆ ಹಾರಿಬಂದು ತನ್ನನ್ನು ಹೊಡೆಯುವ ಸಮಯದಲ್ಲಿ ಮರ್ಮವನ್ನರಿತು ತನ್ನ ಗದೆಯಿಂದ ಸುಮಾಲಿಯ ಸೊಂಟ ವನ್ನ ಪ್ಪಳಿಸಲು ಅವನು ನಡು ಮುರಿದು ಭೂಮಿಯಲ್ಲಿ ಬಿದ್ದು ಸತ್ತನು.

  • ಅದನ್ನು ಕಂಡು ರಾಕ್ಷಸಸೇನಾಪತಿಗಳೆಲ್ಲರೂ ಬಂದು ನಾಲ್ಕು ಕಡೆಗಳ ಲ್ಲಿಯ ಸಾವಿತ್ರನನ್ನು ಮುಸುಕಿಕೊಂಡು ಆತನ ಮೇಲೆ ಬಾಣವೃಷ್ಟಿ ಯನ್ನು ಕರೆ ಯುತ್ತಿರಲು ; ಉಳಿದೇಳುಮಂದಿ ವಸುಗಳೂ ಸಾವಿತ್ರನಿಗೆ ಸಹಾಯಕರಾಗಿ ಬಂದು ತೀವ್ರ ಬಾಣಪ್ರಯೋಗಗಳಿಂದ ರಾವಣನ ಸೇನಾಧಿಪತಿಗಳನ್ನು ಮರ್ಛಾಗತರನ್ನಾಗಿ ಮಾಡಿದರು, ಅದನ್ನು ನೋಡಿ ರಾವಣನು ತಾನೇ ಯುದ್ಧ ಸನ್ನದ್ಧನಾಗಿ ಹೊರಡುತ್ತಿ ರಲು ; ಅವನ ಕುಮಾರನಾದ ಮೇಘನಾದನು ಅದನ್ನು ಕಂಡು ರಾವಣನನ್ನು ನಿಲ್ಲಿಸಿ ತಾನು ಧನುರ್ಬಾಣಗಳನ್ನು ತೆಗೆದುಕೊಂಡು ಪ್ರಳಯ ಕಾಲದ ಯಮನಂತೆ ದೇವಸಮೂಹವನ್ನು ಹೊಕ್ಕು ಬಾಣಗಳನ್ನು ಪ್ರಯೋಗಿಸುತ್ತ ಅಷ್ಟವಸುಗಳನ್ನೂ ದ್ವಾದಶಾದಿತ್ಯರನ್ನೂ ಏಕಾದಶರುದ್ರರನ್ನೂ ಸಪ್ತಮರುತ್ತುಗಳನ್ನೂ ಮೂರ್ಛಗೊಳ