ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಕಥಾಸಂಗ್ರಹ-೪ ನೆಯ ಭಾಗ ಕಣಾಣದವನಾಗಿ ಅವನಿರುವ ಸ್ಥಳಕ್ಕೆ ಹೋಗಿ ಅವನನ್ನು ನೋಡಿ-ಜಗದೇಕವೀರ ನಾದ ನಾನು ಜಗಳಕ್ಕೆ ಬಂದು ನಿಂತಿದ್ದಾಗ ನೀನು ಹೇಡಿಯ ಹಾಗೆ ಹೆಣ್ಣಳೊಡನೆ ನೀರಾಟವನ್ನಾಡುತ್ತಿರುವುದು ಶೂರತ್ವವೋ ? ನಿನಗೆ ಸಹಸ್ರಬಾಹುಗಳಿದ್ದರೂ ವ್ಯರ್ಥ ವೆಂದು ಹೇಳಲು ; ಕಾರ್ತವೀರ್ಯಾರ್ಜುನನು ರಾವಣನನ್ನು ನೋಡಿ, ಇವನು ಹುಚ್ಚ ನೆಂದು ನಸುನಕ್ಕು-ತಾನು ಕೋಡಗನಾಗಿ ವನವನ್ನಣಕಿಸಿತು ಎಂಬ ಗಾಧೆಗೆ ಸರಿಯಾಗಿ ಹೆಂಗಸರೊಡನೆ ಕ್ರೀಡಿಸುವಂಥವನ ಬಳಿಗೆ ನಾಚಿಕೆಯಿಲ್ಲದೆ ಬಂದು ಯುದ್ದ ಕ್ಕೆ ಕರೆಯುವುದರಿಂದ ನಿನ್ನ ಜಗದೇಕವೀರತ್ವವೂ ಮಾನವೂ ತಿಳಿದ ಹಾಗೇ ಆಯಿತು.” ಹತ್ತು ತಲೆಯ ಹುಳುವಿನಂತಿರುವ ನಿನ್ನನ್ನು ಕೊಲ್ಲಬೇಕಾದರೆ ನನ್ನ ಸಹಸ್ರಬಾಹುಗಳೂ ಬೇಕೇ ? ನಿಮೇಷಕಾಲ ಮಾತ್ರ ನಿಲ್ಲು ಎಂದು ಹೇಳಿ ಸ್ತ್ರೀಯರ ನೈಲ್ಲಾ ಪಟ್ಟಣಕ್ಕೆ ಕಳುಹಿಸಿ ಗದಾಯುಧವನ್ನು ತೆಗೆದು ಕೊಂಡು ಹಗಲೂ ರಾತ್ರಿಯ ಮರು ದಿನಗಳ ವರೆಗೂ ರಾವಣನೊಡನೆ ಕಾದಾಡಲು; ಆ ಮೇಲೆ ರಾವಣನು ಬಲ ಹೀನನಾಗಿ ಕಾರ್ತವೀರ್ಯಾರ್ಜುನನ ಗದಾಘಾತದಿಂದ ಮೂರ್ಛಿತನಾಗಲು ; ಅವ ನನ್ನು ಎತ್ತಿ ತನ್ನ ರಥದ ಮೇಲೆ ಹಾಕಿಕೊಂಡು ಕಾರ್ತವೀರ್ಯಾರ್ಜುನನು ಮಾಹಿ «ತೀನಗರಕ್ಕೆ ಹೊರಟುಹೋದನು. ಆಗ ಪ್ರಹಸ್ವಾದಿ ಪ್ರಧಾನರೆಲ್ಲರೂ ಹೆದರಿ ಭಯ ಕಂಪಿತವಾದ ರಾಕ್ಷಸಸೇನೆಯೊಡನೆ ಓಡಿಬಂದು ಲ೦ಕಾಪಟ್ಟಣವನ್ನು ಸೇರಿ ನಿಟ್ಟುಸಿರುಬಿಟ್ಟು ಬದುಕಿದೆವೆಂದು ಹೇಳಿಕೊಂಡರು.

  • ಇತ್ತಲಾ ಕಾರ್ತವೀರ್ಯಾರ್ಜುನನು ಮಾಹಿಷ್ಯ ತೀನಗರಕ್ಕೆ ಹೋಗಿ ಮೂರ್ಛಾ ಗತನಾಗಿರುವ ದಶಾನನನಿಗೆ ಶೈತ್ಯೋಪಚಾರಗಳನ್ನು ಮಾಡಿಸಿ ಚೇತರಿಸಿಕೊಳ್ಳುವಂತೆ ಮಾಡಿದ ಮೇಲೆ ಅವನ ಕಾಲುಗಳಿಗೆ ಸುವರ್ಣದ ಸಂಕೋಲೆಗಳನ್ನು ಹಾಕಿಸಿ ಕಾರಾಗೃಹದಲ್ಲಿಡಿಸಿದನು. ಹೀಗೆ ರಾವಣನು ಒಂದು ಸಹಸ್ರಸಂವತ್ಸರಗಳ ವರೆಗೂ ಮಾಹಿಷ್ಯ ತೀನಗರದ ಕಾರಾಲಯದಲ್ಲಿರುತ್ತಿರಲು ; ಈ ವರ್ತಮಾನವನ್ನು ಕೇಳಿದ ಆತನ ಅಜ್ಜನಾದ ಪುಲಸ್ತ್ರಮುನಿಯು ಮಾಹಿಷ್ಮತೀನಗರಕ್ಕೆ ಬಂದು ಕಾರ್ತವೀ ರ್ಯಾರ್ಜುನನಿಂದ ಸಮ್ಮತನಾಗಿ ಆತನನ್ನು ಅನೇಕ ವಿಧವಾಗಿ ಶ್ಲಾಘಿಸಿ ನೀನು ಇಂದ್ರಾದಿದಿಗೀಶರನ್ನು ಜಯಿಸಿದ ದುರುಳನಾದ ಈ ದಶಾನನನ್ನು ಭಂಗಿಸಿ ದೇವತೆ ಗಳಿಗೂ ಮುನಿಗಳಿಗೂ ಸಂತೋಷವನ್ನು ೦ಟುಮಾಡಿದೆ. ಇವನ ಗರ್ವವನ್ನು ಮುರಿದು ಈ ರೀತಿಯಾಗಿ ಮಾನಭಂಗ ಮಾಡಿದುದೇ ಸಾಕು, ಇವನು ನನ್ನ ಮೊಮ್ಮಗನಾದು ದರಿಂದ ಇವನನ್ನು ನನ್ನ ವಶಕ್ಕೆ ಕೊಡಬೇಕೆಂದು ಕೇಳಿಕೊಂಡು ದರಿಂದ ಕಾರ್ತವೀ ರ್ಯಾರ್ಜುನನು ರಾವಣನ ಸಂಕೋಲೆಗಳನ್ನು ಕಡಿಸಿ ಮಂಗಳಸ್ನಾನಾದಿಗಳನ್ನು ಮಾಡಿಸಿ ತನ್ನ ಸಭೆಗೆ ಕರಿಸಿ ಸಂತೋಷದಿಂದ ಆಲಿಂಗಿಸಿಕೊಂಡು ದಿವ್ಯ ವಸ್ತ್ರಾಭರಣ ಗಳನ್ನು ಕೊಟ್ಟು ಶೂರರಾದವರಿಗೆ ಒಂದು ಕಾಲದಲ್ಲಿ ಜಯವೂ ಇನ್ನೊಂದು ಕಾಲ ದಲ್ಲಿ ಪರಾಜಯವೂ ಉಂಟಾಗುವುದು ಸ್ವಾಭಾವಿಕವು, ಅದು ಕಾರಣ ಇಷ್ಟು ಮಾತ್ರ ಕ್ಕಾಗಿ ವ್ಯಸನಪಡಬಾರದೆಂದು ಸಮಾಧಾನಪಡಿಸಿ ಅವನನ್ನು ಪುಲಸ್ಯರ ವಶಕ್ಕೆ ಕೊಡಲು ಅವರು ಅವನನ್ನು ಕರೆದು ಕೊಂಡು ಬಂದು ಲಂಕೆಯಲ್ಲಿ ಬಿಟ್ಟು ಇನ್ನು