ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಕಥಾಸಂಗ್ರಹ-೪ ನೆಯ ಭಾಗ ರಾಮಲಕ್ಷ್ಮಣರು ಮುನಿಯ ಅಪ್ಪಣೆಯನ್ನು ಹೊಂದಿ ಬಾಣಪ್ರಯೋಗದಿಂದ ಕೆಲ ರನ್ನು ಕೊಂದು ಕೆಲರನ್ನು ಹೆದರಿಸಿ ಕೆಲರನ್ನು ಓಡಿಸಿದರು, ಆಗ ವಿಶ್ವಾಮಿತ್ರನ ಯಜ್ಞಕರ್ಮಗಳೆಲ್ಲವೂ ಸಂಪೂರ್ಣವಾಗಿ ನೆರವೇರಿದುವು. ಇದರಿಂದ ಸಂತುಷ್ಟನಾದ ಮುನಿಪತಿಯು ರಾಮಲಕ್ಷ್ಮಣರಿಗೆ ಮಂತ್ರಾಸ್ತ್ರಗಳನ್ನು ಉಪದೇಶಿಸಿದನು. ಆ ಮೇಲೆ ಹೀಗೇ ಕೆಲದಿನಗಳ ವರೆಗೂ ರಾಮಲಕ್ಷ್ಮಣರನ್ನು ಸತ್ಕರಿಸುತ್ತ ತನ್ನ ಆಶ್ರ ಮದಲ್ಲಿರಿಸಿಕೊಂಡು ಇವರಿಗೆ ಲಗ್ನ ಮಾಡಬೇಕೆಂದು ನೆನಸಿದವನಾಗಿ ಯೋಗ್ಯರಾದ ಕನ್ಯಕೆಯರೆಲ್ಲಿರುವರೆಂದು ಯೋಚಿಸುತ್ತಿದ್ದನು. - ಇತ್ತ ಮಿಥಿಲಾನಗರಾಧಿಪತಿಯಾದ ಜನಕರಾಜನು ತಾನು ಮಾಡುವ ಯಜ್ಞ ಕ್ರೋಸ್ಕರ ಭೂಮಿಯನ್ನು ಉಳಿಸುತ್ತಿರಲು ; ಆಗ ಲಾಂಗಲಪದ್ಧತಿಯಲ್ಲಿ ಸಿಕ್ಕಿದುದ ರಿಂದ ಅನ್ವರ್ಥವಾಗಿ ಸೀತೆ ಎಂಬ ನಾಮಧೇಯವನ್ನು ಹೊಂದಿದ್ದ ಕನ್ಯಾರತ್ನ ಕ್ಕೆ ಸ್ವಯಂವರವನ್ನು ನಿಶ್ಚಯಿಸಿ ಆ ಸ್ವಯಂವರಮಂಟಪದಲ್ಲಿ ಈಶ್ವರನಿಂದ ಕೊಡಲ್ಪಟ್ಟಿದ್ದ ಬಿಲ್ಲನ್ನಿಟ್ಟು ಈ ಧನುಸ್ಸಿಗೆ ಹೆದೆಯನ್ನು ಏರಿಸಿದಂಥ ಶೂರಾಗ್ರೇಸರನಿಗೆ ಸೀತಾದೇವಿ ಯನ್ನು ಕೊಡುವುದಾಗಿ ಪಣಬಂಧವನ್ನು ಮಾಡಿ ಈ ವಿಷಯವನ್ನು ಎಲ್ಲಾ ದೇಶಗಳ ಲ್ಲಿಯ ಪ್ರಸಿದ್ಧ ಪಡಿಸಿದನು, ಆಗ ವಿಶ್ವಾಮಿತ್ರಯೋಗಿಯ ಸಂತುಷ್ಠಾಂತರಂಗ ನಾಗಿ ರಾಮಲಕ್ಷ್ಮಣರನ್ನು ಕರೆದು ಕೊಂಡು ಮಿಥಿಲಾನಗರಕ್ಕೆ ಬಂದು ಜನಕನಿಂದ ಸತನಾಗಿ ವಿಸ್ತಾರವಾಗಿಯ ಶೋಭಾಯಮಾನವಾಗಿಯೂ ಅನೇಕ ದೇಶಗಳ ರಾಜಕುಮಾರರಿಂದ ಕೂಡಿದುದಾಗಿಯೂ ಇರುವ ಸ್ವಯಂವರಮಂಟಪಕ್ಕೆ ಬಂದನು. ಅನಂತರದಲ್ಲಿ ನಿಯಮಿತಕಾಲದಲ್ಲಿ ರಾಜಕುಮಾರರೆಲ್ಲರೂ ಕ್ರಮವಾಗಿ ಬಂದು ಕೋದಂಡವನ್ನೆತ್ತಿ ಅದಕ್ಕೆ ಶಿಂಜಿನಿಯನ್ನು ಸೇರಿಸಲಾರದೆ ಹೋಗಲು ; ಶ್ರೀ ರಾಮನು ಮುನ್ನುಜ್ಞೆಯನ್ನು ಹೊಂದಿ ಧನುಸ್ಸನ್ನು ಎತ್ತಿ ಮೌರ್ವಿಯನ್ನು ಕಟ್ಟಿ ದುದಲ್ಲದೆ ಅದನ್ನು ಮುರಿದುಬಿಟ್ಟನು. ಆಗ ಅವನ ಶೌರ್ಯಾತಿಶಯವನ್ನು ಸರ್ವರೂ ಹೊಗಳಿ ದರು. ಕೂಡಲೆ ಕೋಮಲಾಂಗಿಯಾದ ಸೀತೆಯು ಪುಷ್ಪಮಾಲಿಕೆಯನ್ನು ತಂದು ಶ್ರೀ ರಾಮನ ಕಂಠದಲ್ಲಿ ಹಾಕಿದಳು. ಆಗ ದೇವತೆಗಳು ಪೂಮಳೆಗರೆದರು. ಸುರದುಂ ದುಭಿಗಳು ಮೊಳಗಿದುವು. ಅನಂತರದಲ್ಲಿ ಜನಕನು ಅಯೋಧ್ಯೆಯಿಂದ ದಶರಥಾದಿಗ ಳನ್ನು ಕರಿಸಿಕೊಂಡು ಅತ್ಯಂತ ವೈಭವದೊಡನೆ ಸೀತೆಯನ್ನು ರಾಮನಿಗೂ ಜನಕನ ಪುತ್ರಿಯಾದ ಊರ್ಮಿಳೆಯನ್ನು ಲಕ್ಷ್ಮಣನಿಗೂ ಜನಕನ ತಮ್ಮನಾದ ಕುಶಧ್ವಜನಕು ಮಾರಿಯರಾದ ಮಾಂಡವಿ ಶ್ರುತಕೀರ್ತಿ ಎಂಬವರನ್ನು ಭರತ ಶತ್ರುಘ್ನರಿಗೂ ಕೊಟ್ಟು ಶಾಸ್ಕೂಕ್ಕ ವಿಧಾನದಿಂದ ಮದುವೆಮಾಡಿದನು. ಸರ್ವರೂ ಸನ್ಮಾನಿತರಾಗಿ ತಮ್ಮ ತಮ್ಮ ಪತ್ನಿ ಯರೊಡನೆ ಪರಿವಾರಸಮೇತರಾಗಿ ಹೊರಟು ಅಯೋಧ್ಯಾನಗರವನ್ನು ಸೇರಿ ಸಕಲ ಸುಖವನ್ನೂ ಅನುಭವಿಸುತ್ತ ಇರುವಾಗ ಭರತನ ಸೋದರಮಾವನಾದ ಯುಧಾ ಬೆತ್ತೆಂಬ ಕೇಕಯ ದೇಶದ ಯುವರಾಜನು ಅಯೋಧ್ಯೆಗೆ ಬಂದು ದಶರಥರಾಜನ ಒಪ್ಪಿಕೆಯಿಂದ ತನ್ನ ಸೋದರಳಿಯನಾದ ಭರತನನ್ನು ಕರೆದುಕೊಂಡು ಕೇಕಯಪಟ್ಟ ಣಕ್ಕೆ ಹೋದನು. ಆಗ ಸುಮಿತ್ರೆಯ ಕುಮಾರನಾದ ಶತ್ರುಘ್ನನೂ ಭರತನೊಡನೆಯೇ ಹೋದನು.