ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 45 ಚಾವಡಿಯಲ್ಲಿ ಸಿದ್ಧಪಡಿಸಿಟ್ಟಿದ್ದ ಅಭಿಷೇಕಸಾಮಗ್ರಿಗಳನ್ನು ಪ್ರದಕ್ಷಿಣಮಾಡಿ ಕೈ ಮುಗಿದು ಛತ್ರಚಾಮರಧಾರಿಗಳೇ ಮೊದಲಾದ ಸಕಲವಿಧ ಪರಿಜನರನ್ನೂ ಬಿಟ್ಟು ತಾನೊಬ್ಬನೇ ಹೊರಟು ನಿಜಮಾತೃವಾದ ಕೌಸಲ್ಯಾದೇವಿಯ ಮನೆಗೆ ಬರುತ್ತಿರಲು ; ಆಗ ಲಕ್ಷ್ಮಣನು ಮಾತ್ರ ಧನುರ್ಬಾಣಗಳನ್ನು ತೆಗೆದುಕೊಂಡು ರಾಮನ ಹಿಂದೆಯೇ ಹೋದನು. - ಅನಂತರದಲ್ಲಿ ಶ್ರೀರಾಮನು ತನ್ನ ತಾಯಿಯ ಅಂತಃಪುರವನ್ನು ಪ್ರವೇಶಿಸಿ ಆಕೆಯ ಸನ್ನಿಧಾನಕ್ಕೆ ಹೋಗಿ ನಮಸ್ಕರಿಸಲು ; ಆಕೆಯು ಪರಮಸಾತ್ವಿಕನಾದ ರಾಮನನ್ನು ಬಾಚಿ ತಬ್ಬಿ ಕೊಂಡು ಮುಂಗುರುಳುಗಳನ್ನು ತಿದ್ದಿ ಶಿರಸ್ಸನ್ನು ಆಘಾ ಣಿಸಿ ಮುದ್ದಾಡಿ ಅಪಾರವಾದ ಪುತ್ರವಾತ್ಸಲ್ಯದಿಂದ ಕೂಡಿದವಳಾಗಿ ರಾಮನನ್ನು ಕುರಿತು-ಮಹಾರಾಜನಾದ ನಿನ್ನ ತಂದೆಯು ಈಗ ನಿನ್ನನ್ನು ರಾಜ್ಯಾಭಿಷಿಕ್ತನ ಸ್ನಾಗಿ ಮಾಡುವನು. ಇನ್ನು ಮೇಲೆ ನೀನು ಭಯಭಕ್ತಿಯಿಂದ ಪಿತೃಶುಕ್ರೂಷೆಯನ್ನು ಮಾಡುತ್ತ ನನಗಿಂತಲೂ ಚಿಕ್ಕವರಾಗಿದ್ದು ನಿನ್ನ ತಂದೆಯ ಪತ್ನಿಯರಾದ ನಿನ್ನ ಬಲತಾಯಂದಿರೆಲ್ಲರನ್ನೂ ನನ್ನನ್ನು ಕಂಡಂತೆಯೇ ಕಾಣುತ್ತ ಅವರೆಲ್ಲರಿಗೂ ಪ್ರಿಯ ವಾಗುವಂತೆ ನಡೆಯುತ್ತ ಪ್ರಜಾಪರಿವಾರಗಳನ್ನು ನಿನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ಕಾಪಾಡುತ್ತ ಗುರೂತ್ತಮರಾದ ವಶಿಷ್ಠಾದಿಗಳನ್ನು ಭಕ್ತಿಭಾವದಿಂದ ಕೂಡಿ ಪೂಜೆ ಸುತ್ತ ಅವರ ಆಜ್ಞೆಗಳನ್ನು ಸ್ವಲ್ಪವಾದರೂ ಮಾರದೆ ರಾಜನೀತಿಯನ್ನು ತಪ್ಪದೆ ಆಚಂದ್ರಾರ್ಕಸ್ಥಾಯಿಯಾಗಿ ಸಾಮ್ರಾಜ್ಯವನ್ನು ಅನುಭವಿಸುತ್ತಿರೆಂದು ಹೇಳಿ ಆಶೀ ರ್ವದಿಸಲು ; ಆಗ ರಾಮನು ಲಜ್ಞಾನಿತನಾಗಿ--ಎಲೈ ಪೂಜ್ಯಳಾದ ತಾಯಿಯೇ; ಈಗ ನಿನಗೆ ಒದಗಿರುವ ಮಹಾಭಯವನ್ನರಿಯದೆ ಹೀಗೆ ಹೇಳುತ್ತಿರುವೆಯಲ್ಲಾ! ಪಾಪಿಷ್ಠನಾದ ನಾನು ನಿನಗೂ ಸೀತೆಗೂ ಲಕ್ಷ್ಮಣನಿಗೂ ಮಹಾದುಃಖವನ್ನುಂಟು ಮಾಡುವುದಕ್ಕಾಗಿಯೇ ಹುಟ್ಟಿ ದೆನು. ನಾನು ಈಗ ದಂಡಕಾರಣ್ಯವನ್ನು ಕುರಿತು ಹೋಗುವೆನು.” ನಾನು ಮಾಂಸಾದಿ ಶ್ರೇಷ್ಠ ಭೋಜನಗಳನ್ನು ಬಿಟ್ಟು ಇನ್ನು ಮೇಲೆ ಮುನಿಜನಗಳಂತೆ ಗಡ್ಡೆ ಗೆಣಸುಗಳನ್ನು ತಿಂದು ಜೀವಿಸುತ್ತ ಹದಿನಾಲ್ಕು ಸಂವತ್ಸರಗಳ ವರೆಗೂ ದಂಡಕವನದಲ್ಲಿ ವಾಸಮಾಡಬೇಕಾಗಿ ಬಂದಿದೆ. ಮಹಾರಾಜನು ಭರತನಿಗೆ ಪಟ್ಟಾಭಿಷೇಕವನ್ನು ಮಾಡುವನು. ವನವಾಸಕ್ಕಾಗಿ ನನಗೆ ಅಪ್ಪಣೆಯನ್ನಿತ್ತನು ಎಂದು ಹೇಳಲು ; ಆಗ ಕೌಸಲ್ಯಾದೇವಿಯು ಆ ಮಾತುಗಳನ್ನು ಕೇಳಿ ಕೆಂಪಗೆ ಕಾಯಿಸಿದ ಉಕ್ಕಿನ ಶಲಾಕೆಗಳಿಂದ ಕಿವಿಯಲ್ಲಿ ತಿವಿಯಲ್ಪಟ್ಟಂತಾಗಿ ಕರಿಯು ತನ್ನ ಕರದಿಂ ಬಿಸುಟ ಪುಷ್ಪಮಾಲಿಕೆಯಂತೆಯ ಸ್ವರ್ಗದಿಂದ ಭೂಮಿಗೆ ಬಿದ್ದ ದೇವತೆ ಯಂತೆಯ ಪ್ರಚಂಡಮಾರುತದಿಂದ ಮುರಿದುಕುಳಿದ ಬಾಳೆಗಂಬದಂತೆಯ ನೆಲದ ಮೇಲೆ ಬಿದ್ದು ಮರ್ಛಿತಳಾಗಲು ; ರಾಮನು ಶೈತ್ಯೋಪಚಾರಗಳನ್ನು ಮಾಡಿ ಚೇತನಗೊಳಿಸಿ ಎಬ್ಬಿಸಿದನು. ಅನಂತರದಲ್ಲಿ ಆಕೆಯು ರಾಮನನ್ನು ನೋಡಿ--ನಾನು ವೃತೋಪವಾಸಗ ಇನ್ನು ಆಚರಿಸಿ ಅನೇಕ ದೇವತಾಪ್ರಾರ್ಥನೆಗಳನ್ನು ಮಾಡಿ ಬಹುಕಾಲಕ್ಕೆ ನಿನ್ನನ್ನು