ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥ 47 ಇಂಥವರು ಪರಾಧೀನದಲ್ಲಿರುವುದಕ್ಕೆ ಅರ್ಹರೇ ಹೊರತು ಸ್ವಾತಂತ್ರಕ್ಕೆ ಯೋಗ್ಯರ ವು. ಅದು ಕಾರಣ ಬುದ್ಧಿ ಶೂನ್ಯನಾದ ದಶರಥನು ಇನ್ನೂ ವಿಪರೀತವಾಗಿ ಹರಟು ವುದಾದರೆ ಅವನನ್ನು ಸಂಹರಿಸದೆ ಬಿಡುವುದಿಲ್ಲ ವು. ನನ್ನೊಡನೆ ಕೂಡಿ ರಾಜ್ಯಭಾರ ವನ್ನು ಮಾಡುವಂಥ ಈ ರಾಮನಿಗೆ ಅಪ್ರಿಯವನ್ನು ಆಚರಿಸುವುದಕ್ಕೆ ಸಮರ್ಥನು ಯಾವನು ? ಒಂದು ವೇಳೆ ಕೈಕೇಯಿಯ ದುರ್ಬೋಧನೆಗೆ ಒಳಗಾಗಿ ಭರತನೇನಾದರೂ ನನಗೆ ಅಹಿತವನ್ನು ಮಾಡಿದರೆ ನಿಮಿಷಮಾತ್ರದಲ್ಲಿ ಅವನನ್ನೂ ಕೊಂದುಬಿಡುವೆನು. ಗರ್ವದಿಂದ ಕಾರ್ಯಾಕಾರ್ಯ ವಿವೇಕಹೀನನಾಗಿ ದುರ್ಮಾರ್ಗಪ್ರವರ್ತಕನಾದ ಗುರುವನ್ನಾದರೂ ಶಿಕ್ಷಿಸಬೇಕೆಂದು ಶಾಸ್ತ್ರವಚನವಿರುವುದು. ಲೋಕದಲ್ಲಿ ಯಾವ ಮನುಷ್ಯನು ಮೃದುಸ್ವಭಾವಿಯಾಗಿರುವನೋ ಅವನು ಜನರಿಂದ ಹೆಚ್ಚಾಗಿ ಬಾಧಿಸ ಲ್ಪಡುವನೆಂದಿರುವಲ್ಲಿ ಇಂಥವನು ಮಢಾತ್ಮರಾದವರಲ್ಲಿದ್ದರೆ ಹೇಳತಕ್ಕುದೇನು ? ಎಂದು ಕೋಪೋದ್ರೇಕದಿಂದ ಕಠಿಣವಾಗಿ ಮಾತಾಡುತ್ತಿರುವ ಲಕ್ಷ್ಮಣನನ್ನು ನೋಡಿ ರಾಮನು--ಎಲೈ ತಮ್ಮನೇ, ಅವಿಚಾರದಿಂದ ನೀನು ಇಂಥ ಮಾತುಗಳನ್ನು ಆಡಬಹುದೇ ? ಒಳ್ಳೆಯದು, ನೀನು ಹೀಗೆ ಆಡಿದುದು ನಿನ್ನ ಸ್ವಭಾವದಿಂದಲ್ಲ. ನಿನಗಿರುವ ನನ್ನ ಮೇಲಣ ವ್ಯಾಮೋಹವೆಂಬ ಹುಚ್ಚಿನಿಂದ ಕೂಡಿ ಆಡಿದವನಾಗಿ ದೀಯೆ. ಆದರೂ ನೀನಾಡಿದ ಮಾತು ಯುಕ್ತವಾದುದೇ ಸರಿ. ನಿನ್ನೊಡನೆಯ ನನ್ನೊಡನೆಯ ಹಗೆತನವನ್ನು ಸಂಪಾದಿಸಿಕೊಂಡು ಭರತನಿಗೆ ರಾಜವನ್ನು ಕೊಡು ವವರು ಯಾರುಂಟು ? ಆದರೆ ನಾನು ನನ್ನ ತಮ್ಮನಾದ ಭರತನಲ್ಲಿ ಬಹು ಪ್ರೀತಿಯು ಳ್ಳವನಾಗಿದ್ದೇನೆ. ಆದುದರಿಂದ ಭರತನು ಕೋಸಲರಾಜ್ಯವನ್ನಾಳುವುದು ನನಗೆ ಬಹುಸಂತೋಷಕರವಾದುದೇ, ಯಾಕಂದರೆ ಆತನು ಬೇರೆಯಲ್ಲ, ನಾವು ಬೇರೆ ಅಲ್ಲ. ನಮ್ಮೆಲ್ಲರ ದೇಹಗಳು ಯಾರಿಂದುಂಟಾದುವು ? ತಂದೆಯಾದ ದಶರಥರಾಜನಿಂದ ಲ್ಲವೇ ? ಆತನು ತನ್ನ ಸೊತ್ತುಗಳಾದ ಈ ನಮ್ಮ ದೇಹಗಳನ್ನು ಏನು ಮಾಡಿದರೂ ಮಾಡಬಹುದು, ಆ ಭಾಗದಲ್ಲಿ ಸ್ವಲ್ಪವಾದರೂ ಅಡ್ಡಿ ಮಾಡುವವರು ಯಾರುಂಟು ? ಲೋಕದಲ್ಲಿ ಸರ್ವರಿಗೂ ತಂದೆಯೇ ಪರದೇವತೆಯು. ಆದುದರಿಂದ ಆತನ ವಿಷಯ ದಲ್ಲಿ ನೀನು ಇಂಥ ಮಾತುಗಳನ್ನಾಡುವುದು ಪಾಪಕರವೆಂದು ಹೇಳಿ ಲಕ್ಷ್ಮಣನನ್ನು ಸಮಾಧಾನಪಡಿಸುತ್ತಿರಲು ; ಆಗ ಕೌಸಲ್ಯಾದೇವಿಯು-ಎಲೆ ನನ್ನ ಮುದ್ದು ಮಗನಾದ ರಾಮನೇ, ನಿನ್ನನ್ನು ಅಗಲಿದ ಮೇಲೆ ಸುಖದಿಂದಲೂ ಪ್ರಾಣಗಳಿಂದಲೂ ನನಗೆ ಪ್ರಯೋಜನ ಎಲ್ಲ ವು. ಅದು ಕಾರಣ ನಾನು ನಿನ್ನೊಡನೆ ಇದ್ದುಕೊಂಡು ಗಡ್ಡೆ ಗೆಣಸುಗಳನ್ನು ತಿನ್ನುತ್ತ ಹುಲ್ಲಿನ ಹಾಸಿಗೆಯ ಮೇಲೆ ಮಲಗುತ್ತ ಕಾಲಕಳೆಯುವುದೇ ನನಗೆ ಪರಮ ಸುಖದಾಯಕವಾಗಿರುವುದು, ಅದು ಕಾರಣ ನಾನು ಕಷ್ಟಕೂ, ದುಃಖಕ್ಕೂ ಒಳ ಗಾಗದೆ ಸುಖದಿಂದಿರಲೆಂಬ ಕೃಪೆಯಿಂದಲಾದರೂ ನನ್ನ ನ್ಯೂ ವನಕ್ಕೆ ಕರೆದುಕೊಂಡು ಹೋಗು, ಹಾಗೆ ಮಾಡದಿದ್ದರೆ ನಿನ್ನ ತಂದೆಯಾದ ದಶರಥನು ತನ್ನ ಮೋಹದ ಪತ್ನಿಯಾದ ಕೈಕೇಯಿಯ ಮಗನಿಗೆ ರಾಜ್ಯವನ್ನು ಸಂತೋಷದಿಂದ ಕೊಟ್ಟು ಕೊಳ್ಳಲಿ.