ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಕಥಾಸಂಗ್ರಹ-೪ ನೆಯ ಭಾಗ ನೀನು ವನಕ್ಕೆ ಹೋಗದೆ ಇಲ್ಲಿಯೇ ಇದ್ದು ಕೊಂಡು ಶೋಕಸಂತಪ್ತಳಾದ ನನ್ನನ್ನು ಉಪಚರಿಸುವವನಾಗು. ನೀನು ಈ ಕೆಲಸವನ್ನಾದರೂ ಮಾಡದೆ ನನ್ನ ಸವತಿಯ ಸಹಿಸಲಶಕ್ಯವಾದ ಕರವಚನಗಳನ್ನು ಕೇಳುವವಳಾಗಿ ದಾರುಣವಾದ ವ್ಯಥೆಯಿಂದ ಬಾಧಿಸಲ್ಪಡುತ್ತಿರುವ ನನ್ನನ್ನು ಇಲ್ಲಿ ಬಿಟ್ಟು ಹೋಗುವುದು ನಿನಗೆ ನಿಜವಾಗಿಯೂ ಧರ್ಮವಲ್ಲವು. ಲೋಕದಲ್ಲಿ ಪುತ್ರರಾದವರಿಗೆ ತಂದೆತಾಯಿಗಳಿಬ್ಬರೂ ಸಮಾನರ ಲ್ಲವೇ ? ಹೌದು, ಹೀಗಿರುವಲ್ಲಿ ನೀನು ತಂದೆಯ ಮಾತನ್ನು ಮಾತ್ರ ಕೇಳಿ ತಾಯಿಯ ಮಾತನ್ನು ಅತಿಕ್ರಮಿಸುವುದು ಯುಕ್ತವಲ್ಲ. ಇದರ ಮೇಲೂ ನೀನು ನನ್ನ ಮಾತನ್ನು ಮಿಾರಿ ನನ್ನನ್ನು ಇಲ್ಲೇ ಬಿಟ್ಟು ವನಕ್ಕೆ ಹೋದರೆ ನಾನು ಪ್ರಾಣಗಳನ್ನು ಬಿಡುವುದೇ ನಿಜವು ಎಂದು ಮೊರೆಯಿಟ್ಟು ದುಃಖಿಸುತ್ತಿರುವ ತಾಯಿಯನ್ನು ನೋಡಿ ರಾಮನುಎಲೈ ಪೂಜ್ಯಳಾದ ತಾಯಿಯೇ, ತಂದೆಯ ಮಾತನ್ನು ಮೀರಿ ನಡೆಯುವುದಕ್ಕೆ ನನಗೆ ಎಷ್ಟು ಮಾತ್ರವೂ ಶಕ್ತಿ ಸಾಲದು, ನಾನು ಭಯಭಕ್ತಿಯಿಂದ ನಮಸ್ಕರಿಸಿ ನಿನ್ನನ್ನು ಬೇಡಿಕೊಳ್ಳುವೆನು, ನಾನು ವನಕ್ಕೆ ಹೋಗುವುದಕ್ಕಾಗಿ ಅಪೇಕ್ಷಿಸುತ್ತೇನೆ. ನಿನ್ನನ್ನು ದುಃಖಪಡಿಸುವುದರಿಂದ ಪಾಪಿಯಾದ ನನ್ನಲ್ಲಿ ದಯೆಯಿಟ್ಟು ಅಪ್ಪಣೆಯನ್ನು ದಯ ಪಾಲಿಸು, ಪೂರ್ವದಲ್ಲಿ ನಮ್ಮ ವಂಶೀಯನಾದ ಸಗರಚಕ್ರವರ್ತಿಯ ಮಕ್ಕಳಾದ ಅರವತ್ತು ಸಾವಿರ ಜನರು ತಂದೆಯ ಆಜ್ಞೆಯಿಂದ ಭೂಮಿಯನ್ನು ಅಗೆದು ಮೃತರಾ ಗಲಿಲ್ಲ ವೇ ? ಮತ್ತು ಪರಶುರಾಮನು ತಂದೆಯಾದ ಜಮದಗ್ನಿಯ ಅಪ್ಪಣೆಯಿಂದ ತನ್ನ ತಾಯಿಯಾದ ರೇಣುಕೆಯನ್ನು ಕೊಡಲಿಯಿಂದ ಕಡಿಯಲಿಲ್ಲ ವೇ ? ಇಂಥವ ರೆಲ್ಲಾ ತಮ್ಮ ತಮ್ಮ ಪಿತೃಗಳ ಆಜ್ಞೆಯನ್ನು ದಯಪಾಲಿಸುವುದಕ್ಕಾಗಿ ಎಷ್ಟೋ ಅಸಾಧ್ಯ ಕಾರ್ಯಗಳನ್ನು ಮಾಡಿದ್ದಾರೆಂಬುದನ್ನು ನೀನೇ ತಿಳಿದಿರುವೆಯಲ್ಲವೇ? ನಾನು ಮಾತ್ರ ನನ್ನ ತಂದೆಯ ಸಾಮಾನ್ಯವಾದ ಇಂಥ ಆಜ್ಞೆಯನ್ನು ನೆರವೇರಿಸು ವುದು ಯುಕ್ತವಲ್ಲ ಎಂದು ಹೇಳುವುದು ಯಾವ ಧರ್ಮವು ? ಪಿತೃಗಳ ಆಜ್ಞೆಯನ್ನು ಪರಿಪಾಲಿಸುವುದು ಪುತ್ರರಿಗೆ ಶ್ರೇಯಸ್ಕರವೆಂದು ಧರ್ಮಶಾಸ್ತ್ರವಚನವಿರುವುದು. ಅದು ಕಾರಣ ನಾನು ಈ ಕಾರ್ಯವನ್ನು ನೆರವೇರಿಸುವುದು ನಮ್ಮ ವಂಶಕ್ಕೆ ಭೂಷಣ ಪ್ರಾಯವಾಗಿರುವುದು. ಹೀಗಿರುವಲ್ಲಿ ತಂದೆಯು ಕ್ಷೇಮವಂತನಾಗಿ ಮಹೋನ್ನತ ಪದವಿಯಲ್ಲಿರುವಾಗ ನಾನು ನಿನ್ನನ್ನು ವನಕ್ಕೆ ಕರೆದು ಕೊಂಡು ಹೋಗುವುದೂ ನೀನು ನನ್ನ ಜತೆಯಲ್ಲಿ ಬರುವುದೂ ಕೂಡ ಬಹಳ ಅಯುಕ್ತವು, ಲೋಕದಲ್ಲಿ ಸ್ತ್ರೀಯರಿಗೆ ಪತಿಗಿಂತ ಪ್ರಿಯರಾದವರು ಯಾರೂ ಇಲ್ಲ ವು, ಮತ್ತು ಮಾನಿನಿಯರಿಗೆ ತಾಯಿ ತಂದೆ ಅಣ್ಣ ತಮ್ಮ ನೆಂಟರು ಇಷ್ಟರು ಮುಂತಾದವರೆಲ್ಲರಿಗಿಂತಲೂ ಪತಿಯೇ ಪರಮ ಪ್ರಿಯನೂ ಸೇವನೂ ಆಗಿದ್ದಾನೆ. ಇದೂ ಅಲ್ಲದೆ ಈಗ ನನ್ನ ತಂದೆಯು ಕೈಕೇ ಯಿಯ ಮಾತುಗಳೆಂಬ ಸಂಕೋಲೆಯಲ್ಲಿ ಸಿಕ್ಕಿಬಿದ್ದವನಾಗಿ ಸತ್ಯವನ್ನು ಮಾರುವು ದಕ್ಕೂ ನನ್ನನ್ನು ವನಕ್ಕೆ ಕಳುಹಿಸಿಬಿಡುವುದಕ್ಕೂ ಅಶಕ್ತನಾದುದರಿಂದ ಇತಿಕರ್ತವ್ಯ ತಾಮಢನಾಗಿ ಶೋಕಸಾಗರದಲ್ಲಿ ಮುಳುಗಿ ದಡವನ್ನು ಕಾಣದೆ ಪ್ರಾಣಗಳನ್ನೇ ಬಿಡುವುದಕ್ಕೆ ಯೋಗ್ಯವಾದ ದುರವಸ್ಥೆಯಲ್ಲಿದ್ದಾನೆ, ನಿನ್ನ ಪತಿಗೆ ಒದಗಿರುವ ಇಂಥ