ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ S). ನಾನಾ ವಿಧವಾಗಿ ಹಂಬಲಿಸಿ ಮೊರೆಯಿಡುತ್ತಿರುವ ತಾಯಿಯಾದ ಕೌಸಲೈಯನ್ನು ನೋಡಿ ರಾಮನು ಆಕೆಯ ಕಾಲುಗಳನ್ನು ತನ್ನ ಕೈಗಳಿಂದ ಹಿಡಿದು ಕೊಂಡುಅಮ್ಮಾ ತಾಯೇ, ನೀನು ಈ ರೀತಿಯಾಗಿ ದುಃಖಿಸುತ್ತಿರುವುದನ್ನು ನೋಡುತ್ತಿರುವ ನನಗೂ ಬಹು ದುಃಖವುಂಟಾಗುವುದು, ಮತ್ತು ನೋಡುತ್ತಿರುವವರಾದ ಈ ಜನರೆ ಲ್ಲರೂ ಬಹುದುಃಖವೆಂಬ ಕಡಲಿನಲ್ಲಿ ಮುಳುಗುವರು, ಕೋಸಲದೇಶಾಧೀಶ್ವರನಿಗೆ ಪಿಯ ದಶರಥಮಹಾರಾಜನ ಪತ್ನಿ ಯ ಸಕಲನ್ಯಾಯಮಾರ್ಗಗಳನ್ನೂ ತಿಳಿದ ವೃದ್ದ ಭೂ ಆಗಿರುವ ನೀನು ಆಪತ್ತು ಬಂದಾಗ ಧೈರ್ಯವನ್ನು ಅವಲಂಬಿಸಬೇಕೆಂದು ದೊಡ್ಡವರು ಹೇಳುವ ಮಾತನ್ನು ಮೀರಿ ಉತ್ತಮವಾದ ನಿನ್ನ ಬುದ್ಧಿ ವಿವೇಕಗಳನ್ನು ಶೋಕಕ್ಕೆ ಮಾರಿಬಿಡಬಹುದೇ ? ಈ ಸಂಸಾರ ಮಾರ್ಗದಲ್ಲಿ ಸರ್ವರಿಗೂ ಸುಖದುಃಖ ಗಳು ದ್ವಂದ್ವವಾಗಿರುವುವು. ಇದೋ, ನೋಡು ! ನಾವು ಅಪೇಕ್ಷಿಸದಿದ್ದರೂ ದುಃಖವು ಹೇಗೆ ಬಂದೊದಗಿತೋ ಹಾಗೆಯೇ ಸುಖವೂ ಕೂಡ ಅನಪೇಕ್ಷಿತವಾಗಿ ಬಂದೊದಗುವುದು, ಹಿಂದೆ ನಮ್ಮ ವಂಶದಲ್ಲಿ ಮಹಾರಾಜನೂ ಸತ್ಯಸಂಧನೂ ಆಗಿದ್ದ ಹರಿಶ್ಚಂದ್ರನ ಪಟ್ಟಮಹಿಷಿಯ ಮಹಾ ಪತಿವ್ರತೆಯ ಆಗಿದ್ದ ಚಂದ್ರಮತಿದೇವಿಯು ಪತಿಯ ಆಜ್ಞಾನುಸಾರವಾಗಿದ್ದು ಮಹಾಕಷ್ಟವನ್ನೂ ಕೂಡ ಅನುಭವಿಸಿದುದನ್ನೂ ಪುನಃ ಪತಿಯೊಡನೆ ಸುಖಸಾಮ್ರಾಜ್ಯಗಳನ್ನನುಭವಿಸುತ್ತ ಲೋಕದಲ್ಲಿ ಅಪಾರವಾದ ಯಶಸ್ಸನ್ನು ಪಡೆದು ದನ್ನೂ ನೀನು ಕೇಳಿಲ್ಲ ವೇ ? ಈಗ ದಶರಥ ಭೂಪಾಲನು ನನ್ನ ವಿಯೋಗವಾಗುವುದೆಂಬ ದುಃಖದಿಂದ ಪ್ರಾಣಗಳನ್ನು ಬಿಡುವವನಾಗಿದ್ದಾನೆ. ಪ್ರಾಜ್ಞಳಾದ ನೀನು ಇಂಥ ವೇಳೆಯಲ್ಲಿ ಹೆಚ್ಚಾದ ಕಷ್ಟ ವ್ಯಥಾದುಃಖಗಳಲ್ಲಿ ತಗುಲಿ ವಿಚಾರಗೆಟ್ಟಿರುವ ಆತನಿಗೆ ಹಿತಚಿಂತಕಳಾಗಿ ಧೈರ್ಯವನ್ನೂ ವಿವೇಕವನ್ನೂ ಹೇಳು ತಿರುವವಳಾಗಿ ದುಃಖಸಮಾಧಾನವನ್ನು ಮಾಡುತ್ತ ಇಲ್ಲಿದ್ದರೆ ನಾನು ಕಾಡಿನಲ್ಲಿ ಹದಿನಾಲ್ಕು ಸಂವತ್ಸರಗಳನ್ನು ಹದಿನಾಲ್ಕು ದಿನಗಳನ್ನೋ ಎಂಬಂತೆ ಕಳೆದು ತಿರಿಗಿ ಶೀಘ್ರವಾಗಿ ನಿಮ್ಮ ಸನ್ನಿಧಾನಕ್ಕೆ ಬಂದು ನಿಮ್ಮನ್ನು ವಿಶೇಷವಾಗಿ ಸಂತೋಷ ಪಡಿ ಸುವೆನು. ಸ್ತ್ರೀಯರಿಗೆ ಪತಿಯೇ ಪರದೇವತೆಯ ಪ್ರಭುವೂ ಆಗಿದ್ದಾನೆ. ಇಂಥ ಆತನು ಜೀವಿತನಾಗಿರುವಲ್ಲಿ ನಿನಗೇನು ಕಡಮೆ ? ಮತ್ತು ಭರತನು ಧರ್ಮಿಷ್ಠನೂ ಸರ್ವಭೂತಪ್ರಿಯನೂ ಭ್ರಾತೃವತ್ಸಲನೂ ಆಗಿದ್ದಾನೆ. ಆತನು ನಿನ್ನ ವಿಷಯದಲ್ಲಿ ಬಹಳ ಭಕ್ತಿಯಿಂದ ಗೌರವದಿಂದಲೂ ನಡೆದು ಕೊಳ್ಳುವನು. ಎಲೆ ತಾಯಿಯೇ, ವಿಶೇಷವಾದ ಮಾತುಗಳಿಂದ ಪ್ರಯೋಜನವೇನು ? ನಾನು ವನದಲ್ಲಿ ಹದಿನಾಲ್ಕು ಸಂವತ್ಸರಗಳ ವರೆಗೂ ಸುಖವಾಗಿದ್ದು ತಿರಿಗಿ ನಿನ್ನ ಸನ್ನಿಧಾನಕ್ಕೆ ಬರುವ ಹಾಗೆ ನೀನು ಪುಣ್ಯದಾಯಕವಾದ ಪತಿಶುಶೂಷೆಯನ್ನೂ ವ್ರತಹೋಮಾದಿಗಳನ್ನೂ ದಾನ ಧರ್ಮಗಳನ್ನೂ ದೇವತಾರ್ಚನೆಗಳನ್ನೂ ಮಾಡುತ್ತ ನನ್ನ ಬರುವಿಕೆಯನ್ನೇ ನಿರೀಕ್ಷಿಸಿ ಕೊಂಡು ಕಾಲವನ್ನು ಕಳೆಯುತ್ತಿದ್ದರೆ ಅನಂತರದಲ್ಲಿ ಸಕಲ ವಿಧ ಸುಖಸಂತೋಷ ಗಳನ್ನು ಅನುಭವಿಸುತ್ತ ನಿಶ್ಚಿಂತೆಯಿಂದಿರುವೆ, ಮತ್ತು ಮಹಾರಾಜನಾಗುವ ಭರತ ನಲ್ಲಿ ಯಾವಾಗಲೂ ಅಪ್ರಿಯವಾದ ಮಾತುಗಳನ್ನಾಡದೆ ನನ್ನಲ್ಲಿ ಪುತ್ರವಾತ್ಸಲ್ಯವನ್ನಿ
ಪುಟ:ಕಥಾ ಸಂಗ್ರಹ - ಭಾಗ ೨.djvu/೬೧
ಗೋಚರ