ಪುಟ:ಕಥಾ ಸಂಗ್ರಹ - ಭಾಗ ೨.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 ಕಥಾಸಂಗ್ರಹ-೪ ನೆಯ ಭಾಗ ನಾಡುತ್ತಿರುವೆಯಲ್ಲ ? ನಿನ್ನ ನೆಳಲಿನಂತಿರುವ ನನ್ನನ್ನು ಇಲ್ಲೇ ಬಿಟ್ಟು ನೀನು ಮಾತ್ರ ವನಕ್ಕೆ ಹೋಗುವೆಯೋ ? ಬಲು ಚೆನ್ನಾಯಿತು, ನಿನ್ನ ಸಕಲಧರ್ಮಜ್ಜತೆಯ ತಿಳಿದಂ ತಾಯಿತು. ಎಲೈ ಆರ್ಯನೇ, ಲೋಕದಲ್ಲಿ ತಂದೆಯ ತಾಯಿಯ ಮಕ್ಕಳ ಅಣ್ಣ ತಮ್ಮಂದಿರೂ ಅತ್ತೆ ಮಾವಂದಿರೂ ಬಂಧುಮಿತ್ರರೂ ಸೊಸೆಯರೂ ಇವರೆಲ್ಲರೂ ತಮ್ಮತಮ್ಮ ಕರ್ಮಾನುಗುಣವಾಗಿ ಭಾಗ್ಯವನ್ನು ಅನುಭವಿಸುತ್ತಿರುವರು. ಹೆಂಡತಿ ಯೊಬ್ಬಳು ಮಾತ್ರ ಗಂಡನ ಐಶ್ವರ್ಯದಾರಿದ್ರಗಳಲ್ಲೂ ಸುಖದುಃಖಗಳಲ್ಲೂ ಸರಿ ಪಾಲುಗಾತಿಯಾಗಿ ಅನುಭವಿಸುವಳು ಎಂದು ಸಕಲಶಾಸ್ತ್ರಪುರಾಣಗಳೂ ಒರಲುತ್ತಿ ರುವುವು. ನೀನು ವನಕ್ಕೆ ಹೊರಡುವುದಾದರೆ ನಾನು ನಿನಗಿಂತಲೂ ಮುಂಚಿತವಾಗಿ ಹೊರಟು ಕಲ್ಲು ಮುಳ್ಳುಗಳನ್ನು ತುಳಿಯುತ್ತ ನಿನ್ನೊಡನೆಯೇ ಬರುವೆನೆಂದು ಕಂಬ ನಿಗಳನ್ನು ಸುರಿಸುತ್ತ ಹೇಳಲು ; ಆಗ ರಾಮನು ಸೀತೆಯನ್ನು ಕುರಿತು..ಎಲೈ ಪ್ರಾಣನಾಯ ಕಿಯೇ, ನೀನು ಹೇಳಿದುದೆಲ್ಲವೂ ಯುಕ್ತವಾದುದೇ ಸರಿ. ಆದರೂ ಮಹಾರಾಜನ ಮಗಳೂ ಮಹಾರಾಜನ ಸೊಸೆಯ ಅತಿಸುಕುಮಾರಾಂಗಿಯ ಆಗಿ ಸೂರ್ಯಾತಪಸ್ಪರ್ಶವನ್ನರಿಯದ ನಿನ್ನನ್ನು ಸಿಂಹಶಾರ್ದೂಲಭಲ್ಲೂ ಕಾದಿ ಕೂರ ಮೃಗಗಳಿಂದಲೂ ಬಹುದುಷ್ಟ ರಾದ ರಾಕ್ಷಸರಿಂದಲೂ ಕೂಡಿ ದುರ್ಗಮವಾದ ಮಹಾರಣ್ಯಕ್ಕೆ ಕರಕೊಂಡುಹೋಗಿ ಹೇಗೆ ಕಾಪಾಡಲಿ ? ವ್ಯತ್ಯಸ್ತವಾದ ಕಾಡುದಾ ರಿಯಲ್ಲಿ ನಡೆಯುವ ನಿನ್ನ ಕೋಮಲವಾದ ಕಾಲುಗಳಿಗೆ ಕಲ್ಕುಳ್ಳುಗಳು ತಗುಲಿ ರಕ್ತವು ಚಿಲ್ಲೆಂದು ಹೊರಡುವುದನ್ನು ನೋಡಿ ನಾನು ಹೇಗೆ ಸಹಿಸಲಿ ? ಬೆಂಕಿಯಲ್ಲಿ ಸುಟ್ಟ ಎಳೆಬಾಳೆಯಂತೆ ಅತ್ಯುಷ್ಣವಾದ ಸೂರ್ಯನ ಬಿಸಿಲಿಂದ ಕಂದಿದ ನಿನ್ನ ಸುಕು ಮಾರಾಂಗವನ್ನು ನೋಡಿ ಸಹಿಸಿಕೊಂಡು ನಾನು ಬದುಕುವುದು ಹೇಗೆ ? ಅದು ಕಾ ರಣ ನೀನು ಇಲ್ಲೇ ಇರಬೇಕೆನ್ನ ಲು ; ಆಗ ಸೀತೆಯು....ಎಲೈ ಪ್ರಿಯನೇ, ಹೆಂಡತಿಯನ್ನು ಕಾಪಾಡಲಾರೆನಲ್ಲಾ ಎಂದು ಸಾಧಾರಣ ಜನರಂತೆ ವ್ಯಸನಪಡುತ್ತಿರುವುದರಿಂದ ನನ್ನ ತಂದೆಯಾದ ಜನ ಕನು ನಿನ್ನನ್ನು ಮಹಾವೀರನೆಂದು ತಿಳಿದು ಅನ್ಯಾಯವಾಗಿ ನಿನಗೆ ನನ್ನನ್ನು ಮದುವೆ ಮಾಡಿಕೊಟ್ಟವನಾಗಿರಬಹುದೇ ? ಅಥವಾ ನಾನು ಮೂಢಳೆಂದು ತಿಳಿದು ನಿನ್ನ ಮನೋಗತಾಭಿಪ್ರಾಯವನ್ನು ಹೊರಪಡಿಸದೆ ಬಾಯಿಯಲ್ಲಿ ಮಾತ್ರ ಹೀಗೆ ಮಾತಾ ಡುತ್ತಿರುವೆಯೋ ? ಒಳ್ಳೆಯದು, ಇದನ್ನೆಲ್ಲಾ ನಾನು ಬಲ್ಲೆನು, ನಿನ್ನ ಶಕ್ತಿ ಪರಾಕ್ರಮ ಗಳು ಲೋಕೋತ್ತರವಾದುವುಗಳೆಂಬುದನ್ನು ತಿಳಿಯದವರೊಡನೆ ನೀನು ಇಂಥ ಕಪಟ ವಚನಗಳನ್ನಾಡಬೇಕೇ ಹೊರತು ಸರ್ವಪ್ರಕಾರದಿಂದಲೂ ನಂಬಿದವಳಾದ ನನ್ನೊಡನೆ ಈ ರೀತಿಯಾಗಿ ಮಾತಾಡುವುದು ಉಚಿತವಲ್ಲವು, ಮಹಾತ್ಮನಾದ ನಿನ್ನೊಡನೆ ಇರುವ ನನಗೆ ದುಷ್ಟಮೃಗ ರಾಕ್ಷಸರ ಭೀತಿಯಂದರೇನು ? ಇಹಪರಗತಿದಾಯಕನಾದ ನಿನ್ನೊಡನೆ ಕಾಡಿನಲ್ಲಿದ್ದು ಕೊಂಡು ಗಡ್ಡೆ ಗೆಣಸುಗಳನ್ನು ತಿಂದು ಜೀವಿಸುತ್ತಿರುವುದೇ ನನಗೆ ಸ್ವರ್ಗಸೌಖ್ಯವ; ನಿನ್ನನ್ನು ಬಿಟ್ಟಿರುವುದಾದರೆ ಅದು ಸ್ವರ್ಗವಾದರೂ ನನಗೆ ಮಸಣವು, ನಾನು ನಿನ್ನೊಡನೆ ಇರುವುದಾದರೆ ಯಾವ ರಾಜಭೋಗಗಳನ್ನೂ ನೆನ