ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥ 55 ಸೆನು. ಇಷ್ಟರ ಮೇಲೂ ನೀನು ನನ್ನನ್ನು ಬಿಟ್ಟು ವನಕ್ಕೆ ಹೋದರೆ ನಾನು ಈ ಕ್ಷಣದ ಲ್ಲಿಯೇ ನಿನ್ನ ಮುಂದೆಯೇ ವಿಷವನ್ನು ಕುಡಿದು ಪ್ರಾಣಬಿಡುವೆನು ಎಂದು ಹೇಳಿ ರಾಮನನ್ನು ತಬ್ಬಿಕೊಂಡು ಧಾರಾರೂಪವಾಗಿ ಕಣ್ಣೀರನ್ನು ಸುರಿಸುತ್ತಿರಲು ; ರಾಮನು ಆಕೆಯ ದುಃಖವನ್ನು ನೋಡಿ ಸಮ್ಮತಿಸಿದವನಾಗಿ-ನಿನ್ನ ವಸ್ತ್ರಾಭರಣಗ ಳನ್ನೆಲ್ಲಾ ಮುತ್ತೈದೆಯರಿಗೆ ದಾನಮಾಡಿ ಶೀಘ್ರವಾಗಿ ಹೊರಡುವುದಕ್ಕೆ ಸಿದ್ದಳಾ ಗೆಂದು ಹೇಳಿದನು. ಆಗ ಲಕ್ಷ್ಮಣನು ಅಣ್ಣನಾದ ರಾಮನ ಕಾಲುಗಳ ಮೇಲೆ ಬಿದ್ದು ದುಃಖಿ ಸುತ್ತ- ಎಲೈ ಅಣ್ಣನೇ, ನಾನು ನಿನಗೆ ಹೊರಗಣ ಪ್ರಾಣವು ಅದು ಕಾರಣ ನೀನು ನನ್ನ ನ್ಯೂ ಸಂಗಡವೇ ಕರೆದು ಕೊಂಡು ಹೋಗು. ನೀನೂ ನನ್ನ ಅತ್ತಿಗೆಯ ಕಾಡಿ ನಲ್ಲಿ ಸ್ವಲ್ಪವಾದರೂ ಕಷ್ಟ ಪಡದಂತೆ ಶುಕ್ರೂಷೆಯನ್ನು ಮಾಡುತ್ತ ಮಧುರವಾದ ಕಂದಮೂಲಫಲಾದಿಗಳನ್ನೂ ನಿರ್ಮಲವಾದ ಶೀತಲೋದಕವನ್ನೂ ತಂದು ಕೊಡುತ್ತ ನಿಮಗೆ ಕು ತೃಷೆಗಳ ಬಾಧೆಯುಂಟಾಗದಂತೆ ಮಾಡುವೆನು, ಮತ್ತು ರಾತ್ರಿ ವೇಳೆ ಯಲ್ಲಿ ಬಹುಮೃದುವಾದ ಚಿಗುರುಗಳಿಂದ ಹಾಸಿಗೆಯನ್ನು ಮಾಡಿಕೊಟ್ಟು, ನಿದ್ರಿಸು ತಿರುವವರಾದ ನಿಮಗೆ ಕೂರ ಮೃಗಗಳಿಂದಲೂ ದುಷ್ಟ ರಾಕ್ಷಸರಿಂದಲೂ ಹಿಂಸೆ ಯುಂಟಾಗದ ಹಾಗೆ ಧನುರ್ಬಾಣಗಳನ್ನು ಧರಿಸಿಕೊಂಡು ಕಾದಿರುವೆನು ಎಂದು ಬಹು ಪ್ರಕಾರವಾಗಿ ಹೇಳಿಕೊಳ್ಳುತ್ತಿರುವ ತಮ್ಮ ನನ್ನು ಬರಬೇಡವೆಂದು ಎಷ್ಟು ವಿಧ ವಾಗಿ ಒಡಂಬಡಿಸಿದಾಗ ಒಪ್ಪದಿರಲು ; ಆಗ ರಾಮನು ಲಕ್ಷ್ಮಣನನ್ನೂ ಸೀತೆ ಯನ್ನೂ ತನ್ನ ಸಂಗಡವೇ ಅರಣ್ಯಕ್ಕೆ ಕರೆದುಕೊಂಡು ಹೋಗುವುದಕ್ಕಾಗಿ ಒಪ್ಪಿ ಸ್ವಕೀಯವಾದ ಸಕಲಪದಾರ್ಥಗಳನ್ನೂ ದುರ್ಗತರಿಗೆ ದಾನಮಾಡಿ ಧನುರ್ಬಾಣಗ ಇನ್ನು ಧರಿಸಿ ಸೀತಾಲಕಣರೊಡನೆ ಕೂಡಿ, ತಿರಿಗಿ ಪಿತೃ ದರ್ಶನವನ್ನು ಮಾಡಿ ಹೋಗಬೇಕೆಂಬ ಉದ್ದೇಶದಿಂದ ಬೀದಿಯಲ್ಲಿ ಬರುತ್ತಿರಲು ; ಪುರಜನರೆಲ್ಲರೂ ಗುಂಪು ಗುಂಪಾಗಿ ನಿಂತು ಅವರನ್ನು ನೋಡುತ್ತ ರೋದಿಸುತ್ತ...ಅಕಟಕಟಾ ! ಭೂಲೋಕದಲ್ಲಿ ಇಂಥ ಭಯಂಕರವಾದ ಅನ್ಯಾಯವೂ ಉಂಟೇ ? ಮೊದಲು ಈ ರಾಮನು ಉತ್ತಮಾಶ್ವ ಗಳನ್ನು ಕಟ್ಟಿ ಶೋಭಿಸುತ್ತಿರುವ ದೇವಯೋಗ್ಯವಾದ ರಥದ ಮೇಲೆ ಕುಳಿತು ಉಭಯ ಪಾರ್ಶ್ವಗಳಲ್ಲೂ ಸೇವಿಸುತ್ತಿರುವ ಛತ್ರಚಾಮರಾದಿಗಳನ್ನು ಧರಿಸಿದವರಿಂದಲೂ ಅನನ್ಯ ಸಾಧಾರಣವಾದ ಬಿರುದುಗಳನ್ನು ಧರಿಸಿ ಇಕ್ಕೆಲದಲ್ಲೂ ಬರುತ್ತಿರುವವರಿಂದಲೂ ಇನ್ನೂ ವಿವಿಧವಾದ ಪರಿವಾರದವರಿಂದಲೂ ಹಿಂದೆಯ ಮುಂದೆಯ ಒಪ್ಪ ತಿರುವ ಚತುರಂಗಬಲದಿಂದಲೂ ಕೂಡಿ ರಾಜವೀಧಿಯಲ್ಲಿ ಬಲುಸೊಬಗಿಂದ ಬರುತ್ತಿದ್ದುದನ್ನು ಸಂತೋಷದಿಂದ ನೋಡುತ್ತಿದ್ದ ಈ ನಮ್ಮ ನೇತ್ರಗಳು ಈಗ ತನ್ನಂತೆ ಪಾದಚಾರಿಗಳಾ ಗಿರುವ ಸೀತಾಲಕ್ಷ್ಮಣರೊಡನೆ ಬರುತ್ತಿರುವುದನ್ನು ನೋಡುತ್ತಿವೆಯಲ್ಲಾ ! ಆಹಾ ! ಇಂಥ ಕಣ್ಣುಗಳು ಒಡೆದುಹೋಗಬಾರದೇ ? ಅಯ್ಯೋ ! ಸರ್ವಾಂಗ ಸುಂದರಿಯ ಸುಕುಮಾರಿಯ ಮಹಾಪತಿವ್ರತೆಯ ಆದ ಈ ಸೀತೆಯು ನಿರಂತರವೂ ಅಂತಃಪುರ ದಲ್ಲೇ ಇದ್ದು ಕೊಂಡು ಅಪರಿಮಿತರಾದ ಸೇವಕರಿಂದ ರಾಜೋಪಚಾರವನ್ನು ಹೊಂದು
ಪುಟ:ಕಥಾ ಸಂಗ್ರಹ - ಭಾಗ ೨.djvu/೬೫
ಗೋಚರ