ಪುಟ:ಕಥಾ ಸಂಗ್ರಹ - ಭಾಗ ೨.djvu/೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಥಾಸಂಗ್ರಹ-೪ ನೆಯ ಭಾಗ ತಿದ್ದಳು, ಈಗ ಸೂರ್ಯನ ಬಲುಬಿಸಿಲ ಹೊಯ್ಲಿಂದ ಬಾಡಿದ ಮುಖವುಳ್ಳವಳಾಗಿ ರಾಜವೀಧಿಯಲ್ಲಿ ಬರಿಗಾಲಿಂದಲೇ ನಡೆದು ಬರುತ್ತಿರುವಳಲ್ಲಾ ! ಮಹಾತ್ಮಳಾದ ಈಕೆಗೆ ಒದಗಿದ ಇಂಥ ದುರ್ಗತಿಯನ್ನು ನೋಡುತ್ತಿರುವವರಾದ ನಾವೇ ಪಾಪಿಗಳ ಲ್ಲವೇ ! ಲೋಕದಲ್ಲಿ ತಂದೆಯಾದವನು ತನ್ನ ಮಗನು ಗುಣಹೀನನಾಗಿ ಎಂಥ ಕೆಟ್ಟ ವನಾದರೂ ಅವನನ್ನು ಅರಣ್ಯಕ್ಕೆ ಅಟ್ಟು ವನೇ? ಈ ರಾಮನಾದರೋ ಶೌರ್ಯ ಧೈರ್ಯ ಪರಾಕ್ರಮಗಳಲ್ಲಿ ಅದ್ವಿತೀಯನೂ ಸರ್ವಲೋಕಮಾನ್ಯನೂ ಸುಗುಣಾಭರಣಭೂಷಿತ ನೂ ಆಗಿರುವನು. ಇಂಥವನನ್ನು ಅಡವಿಗಟ್ಟು ವ ಮಢನಾದ ದಶರಥನ ಬಾಳನ್ನು ಸುಡಬೇಕು, ನಾವು ಮಹಾಪುರುಷನಾದ ಇಂಥ ರಾಮನನ್ನು ಬಿಟ್ಟು ಈ ಪಟ್ಟಣದ ಲ್ಲಿರುವುದರಿಂದ ನಮಗೂ ಭಯಂಕರವಾದ ಕಷ್ಟವು ಪ್ರಾಪ್ತವಾದೀತು, ಅದು ಕಾರಣ ನಾವೆಲ್ಲರೂ ನಮ್ಮ ನಮ್ಮ ಸಂಸಾರಗಳೊಡನೆ ಕೂಡಿ ಈತನೊಡನೆಯೇ ಹೋದರೆ ಶೂರ ರಾದ ಈ ರಾಮ ಲಕ್ಷ್ಮಣರೂ ಸರ್ವಗುಣಸಂಪನ್ನೆ ಯಾದ ಈ ಸೀತೆಯ ನಮ್ಮೆಲ್ಲ ರನ್ನೂ ಕಾಪಾಡುವರು, ಕರಳಾದ ಕೈಕೇಯಿಯ ಅಧೀನನಾಗಿ ಯುಕ್ತಾಯುಕ್ತ ವಿಚಾರಶೂನ್ಯನಾದ ಈ ದಶರಥನ ರಾಜ್ಯದಲ್ಲಿ ನಾವಿರಬಾರದು, ಅದು ಕಾರಣ ನಾವೆ ಲ್ಲರೂ ಅರಣ್ಯಕ್ಕೆ ಹೊರಡುವಣ, ದಶರಥನೂ ಕೈಕೇಯಿಯ ರಾಜಾಧಿರಾಜನಾ ಗುವ ಭರತನನ್ನು ನೋಡಿ ಸಂತೋಷಿಸುತ್ತ ಇರಲಿ ಎಂದು ನಾನಾವಿಧವಾಗಿ ಹೇಳಿ ಕೊಂಡು ದುಃಖಿಸುತ್ತಿದ್ದರು. ರಾಮನು ಪುರಜನರ ಈ ವಿಧವಾದ ಮಾತುಗಳನ್ನು ಕೇಳುತ್ತ ಮನಸ್ಸಿನಲ್ಲಿ ದುಸ್ಸಹ ದುಃಖಾನುಭವಿಯಾಗಿ ದಶರಥನ ಅರಮನೆಯ ಬಾಗಿಲ ಬಳಿಗೆ ಬಂದು ಅಲ್ಲಿದ್ದ ಸುಮಂತ್ರನನ್ನು ಕುರಿತು--ಎಲೈ ಸಾರಥಿಯೇ, ನಾನು ಬಂದಿರುವುದನ್ನು ಅರಸಿಗೆ ತಿಳಿ ಸೆನ್ನಲು; ಸುಮಂತ್ರನು ಒಳಗೆ ಹೋಗಿ.--ಹಾ, ರಾಮಾ! ಲೋಕಾಭಿರಾಮಾ! ಎಂದು ಭೂಮಿಯಲ್ಲಿ ಬಿದ್ದು ಹೊರಳಾಡುತ್ತ ಅಪರಿಮಿತವಾಗಿ ಅಶ್ರುಧಾರೆಯನ್ನು ಹರಿಸುತ್ತ ಕೈಕೇಯಿಯನ್ನೂ ತನ್ನ ನ್ಯೂ ಬಾರಿಬಾರಿಗೂ ನಿಂದಿಸಿಕೊಳ್ಳುತ್ತ ಗಳಿಗೆಗಳಿಗೆಗೆ ಮೂರ್ಛಹೊಂದಿ ಚೇತರಿಸಿಕೊಳ್ಳುತ್ತ-ಏನು ಮಾಡಲಿ! ಎಲ್ಲಿಗೆ ಹೋಗಲಿ: ವಿಷವ ನಾ ದರೂ ಕುಡಿಯಲೇ? ಪರ್ವತಾಗ್ರದಿಂದ ಕೆಳಗೆ ಬೀಳಲೇ? ಕಾಯ್ದುಕ್ಕಿನ ಮುಳ೦ ಬಗಳನ್ನು ಹಾಯ್ದಡಗಲೇ? ಅಯ್ಯೋ! ನಯನಾಭಿರಾಮನಾದ ರಾಮನನ್ನು ಬಿಟ್ಟು ಬದುಕುವುದು ಹೇಗೆ ? ಎಂದು ಪ್ರಲಾಪಿಸುತ್ತ ಒಣಗಿದ ತುಟಿಬಾಯ್ಸಳುಳ್ಳ ಗ್ರಹಗ್ರಸ್ತನಂತೆ ತಿರುತಿರುಗಿ ಭೂಮಿಯಲ್ಲಿ ಬಿದ್ದು ಹೊರಳಾಡುತ್ತ ಧೂಳಿಯಿಂದ ಲೇಪಿತ ವಾದ ಸರ್ವಾಂಗವುಳ್ಳವನಾಗಿ ನಿಟ್ಟುಸಿರುಗಳನ್ನು ಬಿಡುತ್ತಿರುವ ನಿಜಸ್ವಾಮಿಯಾದ ದಶರಥನನ್ನು ನೋಡಿ ಮಾತಾಡಿಸುವುದಕ್ಕೆ ಭಯ ಪಟ್ಟವನಾಗಿ ಮೆಲ್ಲ ಮೆಲ್ಲನೆ ಸಮಿಾ ಪಕ್ಕೆ ಹೋಗಿ--ಎಲೈ ಮಹಾರಾಜನೇ, ಶ್ರೀರಾಮನು ದೀನಾನಾಥವಿಪನ್ನರಿಗೆ ತನ್ನ ಸರ್ವವಸ್ತುಗಳನ್ನೂ ದಾನಮಾಡಿ ಅರಣ್ಯ ಗಮನಕ್ಕೆ ಸಿದ್ಧನಾಗಿ ಹೊರಟು ನಿನ್ನ ದರ್ಶ ನಕ್ಕೋಸ್ಕರವಾಗಿ ಬಂದು ಬಾಗಿಲಲ್ಲಿ ಕಾದಿದ್ದಾನೆ. ಸರ್ವಗುಣಸಂಪನ್ನನೂ ಲೋಕ ಮಾನ್ಯನೂ ನಿನ್ನ ಕುಮಾರನೂ ಆದ ರಾಮನನ್ನು ಒಳಗೆ ಕರಿಸಿ ಅಪ್ಪಣೆಯನ್ನು