ಪುಟ:ಕಥಾ ಸಂಗ್ರಹ - ಭಾಗ ೨.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಕಥಾಸಂಗ್ರಹ-೪ ನೆಯ ಭಾಗ ಅಪ್ಪಣೆಯ ಮೇರೆಗೆ ಹದಿನಾಲ್ಕು ವರುಷಗಳ ವರೆಗೂ ವನದಲ್ಲೇ ವಾಸಮಾಡಿಕೊಂ ಡಿದ್ದು ಆ ಮೇಲೆ ಆಯೋಧ್ಯೆಗೆ ಬಂದು ನಿನ್ನ ಮಾತಿನಂತೆ ಪಟ್ಟಾಭಿಷಿಕ್ತನಾಗುವೆ. ನಲ್ಲದೆ ಈಗ ಬಂದು ಪಟ್ಟಾಭಿಷಿಕ್ತನಾಗುವುದು ಧರ್ಮವಿಹಿತವಲ್ಲವು ಎಂದು ಭರತ ನನ್ನು ಸಮ್ಮತಿಪಡಿಸಲು ; ಆಗ ಭರತನು-ಹಾಗಾದರೆ ನಾನು ರಾಜ್ಯಾಭಿಷಿಕ್ತನಾ ಗುವುದೂ ಅಯುಕ್ತವಾದುದರಿಂದ ಈಗ ನಿನ್ನ ಪಾದುಕೆಗಳನ್ನು ನನಗೆ ಕೊಟ್ಟರೆ. ಅವುಗಳನ್ನು ಸಿಂಹಾಸನದ ಮೇಲಿಟ್ಟು ನಾನು ಅವುಗಳ ಸೇವಕನಾಗಿ ನೀನು ಬರುವ ವರೆಗೂ ರಾಜ್ಯಭಾರದ ಕೆಲಸಗಳನ್ನು ಮಾಡುತ್ತಿರುವೆನು ಎನ್ನಲು ; ರಾಮನು ಆ ಮಾತಿಗೆ ಸಮ್ಮತಿಪಟ್ಟು ತನ್ನ ಎರಡು ಆವುಗೆಗಳನ್ನೂ ಕೊಟ್ಟು ಅವನನ್ನು ಅಯೋ ಧ್ಯಾ ಪಟ್ಟಣಕ್ಕೆ ಕಳುಹಿಸಿ ಈ ಚಿತ್ರಕೂಟಪರ್ವತವು ಅಯೋಧ್ಯೆಗೆ ಹತ್ತಿರವಾಗಿರು ವುದರಿಂದ ಪುರಜನರು ಆಗಾಗ್ಗೆ ಇಲ್ಲಿಗೆ ಬಂದು ನನಗೆ ತೊಂದರೆಯನ್ನು ಕೊಡು ತಿರುವರು. ಅದು ಕಾರಣ ಇನ್ನು ಇಲ್ಲಿರಕೂಡದು ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಸೀತಾಲಕ್ಷ್ಮಣರೊಡನೆ ಚಿತ್ರ ಕೂಟಸ್ಥಲದಿಂದ ಹೊರಟು ದಂಡಕಾರಣ್ಯವನ್ನು ಹೊಕ್ಕು ಲಂಕಾನಗರದ ಉಕ್ಕಡವಾದ ಜನಸ್ನಾನವೆಂಬ ಪ್ರದೇಶಕ್ಕೆ ಸಮಾನವಾಗಿ ಗೋದಾ ವರೀ ನದಿಯ ದಡದಲ್ಲಿರುವ ಪಂಚವಟಿಯೆಂಬ ಸ್ಥಳದಲ್ಲಿ ಪರ್ಣಶಾಲೆಯನ್ನು ಮಾಡಿ ಸಿಕೊಂಡು ಅಲ್ಲಿ ಸೀತಾಲಕ್ಷ್ಮಣರೊಡನೆಯ ತನ್ನ ತಂದೆಯ ಮಿತ್ರನಾದ ಜಟಾ ಯುವೆಂಬ ಗೃಧ್ರರಾಜನೊಡನೆಯೂ ಕೂಡಿ ಸುಖವಾಗಿ ವಾಸಮಾಡಿಕೊಂಡಿದ್ದನು. ಹೀಗಿರಲು ಭೂಲೋಕದಲ್ಲಿ ಹಿಮಂತರ್ತುವು ತಲೆದೋರಿತು. ಆಗ ಲಕ್ಷಣನು. ರಾಮನನ್ನು ಕುರಿತು-ಎಲೈ ಅಣ್ಣನೇ, ಈ ಹಿಮ ಕಾಲವು ಬಹಳ ವಿಚಿತ್ರವಾಗಿರು ವುದು, ದಿಕ್ಕುಗಳೆಂಬ ಸ್ತ್ರೀಯರು ಹಿಮವೆಂಬ ಶುಭ್ರಾಂಬರದಿಂದ ಅಲಂಕರಿಸಿಕೊಂ. ಡಿರುವಂತೆ ಕಾಣುತ್ತದೆ. ಈ ಕಾಲದಲ್ಲಿ ಜನರು ಪಚ್ಚಕರ್ಪೂರದಿಂದ ಮಿಶ್ರವಾದ ಗಂಧವನ್ನು ಮೈಗೆ ಲೇಪಿಸಿಕೊಳ್ಳುವುದರಲ್ಲಿಯ ತಾವರೆ ಕನ್ನೈದಿಲೆ ಆವಲ ಮುಂ ತಾದ ಹೂವುಗಳಿಂದ ಕೂಡಿ ರಮಣೀಯವಾದ ಕೊಳಗಳ ಮೆಟ್ಟಿಲುಗಳಲ್ಲಿ ಕುಳಿತು ಶೈತ್ಯಸೌರಭಮಾಂದ್ಯವಿಶಿಷ್ಟವಾದ ವಾಯುವಿನ ಸ್ಪರ್ಶಸುಖವನ್ನು ಅನುಭವಿಸುವುದು ರಲ್ಲಿಯ ಉಪ್ಪರಿಗೆಗಳ ಕಿಟಕಿಗಳಲ್ಲಿದ್ದು ಮೊಗಗಳನ್ನು ಹೊರಗೆ ಚಾಚುವುದರಲ್ಲಿ ಯ ತಣ್ಣೀರುಗಳ ಮಜ್ಜನದಲ್ಲಿಯೂ ವಿಮುಖರಾಗಿ ಶಶೋದರದಂತೆ ನಯವಾಗಿ ರುವ ಕಂಬಳಿಗಳನ್ನು ಹೊದೆದು ಕೊಳ್ಳುವುದರಲ್ಲಿಯ ಅರಳೆಗಳನ್ನು ಹಾಕಿ ಹೊಲಿದಿ ರುವ ದಪ್ಪಂಗಿಗಳನ್ನು ತೊಟ್ಟು ಕೊಳ್ಳುವುದರಲ್ಲಿಯ ಮಧುರಾಹಾರಗಳನ್ನು ಭುಂಜಿ ಸುವುದರಲ್ಲಿಯ ಕಸ್ತೂರೀ ಘನಸಾರಮಿಶ್ರವಾದ ತಾಂಬೂಲವನ್ನು ತಿನ್ನು ವುದರಲ್ಲಿ ಯ ಹೊಗೆಯಿಲ್ಲದೆ ಬರಿಗೆಂಡಗಳಿಂದ ತುಂಬಲ್ಪಟ್ಟಿರುವ ಅಗ್ಗಿಷ್ಟಿಗೆಯಲ್ಲಿ ಕಾಸಿ ಕೊಳ್ಳುವುದರಲ್ಲಿಯೂ ಇಟ್ಟಿಗೆಗಳಿಂದ ಕಟ್ಟಲ್ಪಟ್ಟ ಗೃಹಗಳ ಮಧ್ಯದಲ್ಲಿ ವಾಸಿಸುವು ದರಲ್ಲಿಯ ಆಲದ ಮರದ ನೆಳಲಿನಲ್ಲಿ ಕೂತು ಕೊಳ್ಳುವುದರಲ್ಲಿಯ ಸೇದುವ ಬಾವಿ ಯ ನೀರಿನಿಂದ ಊಾಯುವುದರಲ್ಲಿಯೂ ಆಗಿಲು ಗಂಧ ಇವುಗಳನ್ನು ತೊಡೆದುಕೊ. ಳ್ಳುವುದರಲ್ಲಿಯ ಅತ್ಯಾಶೆಯುಳ್ಳವರಾಗಿರುವರು.