ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾಪಹಾರದ ಕಥ ಮತ್ತು ಈ ಕಾಲದಲ್ಲಿ ಪಕ್ಷಿಗಳು ತಮ್ಮ ತಮ್ಮ ಗೂಡುಗಳನ್ನು ಬಿಟ್ಟು ಹೊರಗೆ ಹೊರಡದೆ ಮರಿಗಳನ್ನು ರಕ್ಕೆಗಳಲ್ಲಿ ಹುದುಗಿಸಿಕೊಂಡು ಇರುತ್ತಿರುವುವು. ಗದ್ದೆಗಳಲ್ಲಿ ಬತ್ತದ ಪೈರುಗಳು ಹೊಂಬಣ್ಣವಾದ ತೆನೆಗಳನ್ನು ಜೋಲಾಡಿಸುತ್ತ ಚೆಲು ವಾಗಿರುವುವು. ದಾರಿದಾರಿಗಳಲ್ಲೆಲ್ಲಾ ಅರವಟಿಗೆಯ ಮನೆಗಳೂ ಪಾಳುಬಿದ್ದಿರುವುವು. ಪ್ರಾತಃಕಾಲದಲ್ಲೆದ್ದು ಹೊಳೆಗಳ ಶೀತಲೋದಕದಲ್ಲಿ ಸ್ನಾನಮಾಡುವುದರಿಂದುಂಟಾದ ದ್ವಿಗುಣಿತವಾದ ಚಳಿಯಿಂದ ಗಡಗಡನೆ ನಡುಗುತ್ತಿರುವ ಮುನಿಜನಗಳ ತುಟಿಗಳುಸರ್ವಲೋಕವನ್ನೂ ಹಿಡಿದು ಬಾಧಿಸುತ್ತಿರುವ ಶೀತವೆಂಬ ಪಿಶಾಚಿಯನ್ನು ನಿವಾರಿಸು ವುದಕ್ಕೋಸ್ಕರ ಉಚ್ಚಾಟನ ಮಂತ್ರ ಜಪವನ್ನು ಮಾಡುತ್ತಿರುವ ಒಂದು ಬಗೆಯೋ ಎಂಬಂತೆ ಕಾಣುತ್ತಿರುವುವು. ಈ ಕಾಲದಲ್ಲಿ ಎಲೆಗಳೆಲ್ಲಾ ಉದುರಿಹೋಗಿ ಬೆತ್ತಲೆಯಿ ರುವ ವೃಕ್ಷಗಳನ್ನು ನೋಡಿದರೆ ಇವು ಶೀತವೆಂಬ ಜಾಡ್ಯದಿಂದ ಅ೦ಗಲೋಪವನ್ನು ಹೊಂದಿದುವೋ ಎಂಬಂತೆ ಇರುತ್ತಿರುವುವು, ದನಗಳು ಯಥೇಚ್ಛವಾಗಿ ಬೆಳೆದಿರುವ ಹುಲ್ಲನ್ನು ಮೇಯ್ದು ಕೊಬ್ಬಿಯುಬ್ಬಿ ಹಿಮರಾಕ್ಷಸನ ದಂಡಿನಂತಿರುವುವು. ಕಮಲ ಗಳೆಲ್ಲಾ ಉದುರಿಹೋಗಿರುವದರಿಂದ ಹಿಮವೆಂಬ ಅಪಮಾನಕಾರಿಯ ಕಾಟದಿಂದ ಪದ್ವಿನಿಯರೆಂಬ ನಾರಿಯರು ತಮ್ಮ ಮುಖವನ್ನು ಹೊರಗೆ ತೋರಿಸದೆ ಮರೆಯಾಗಿ ರುವರೋ ಎಂಬಂತೆ ಕೊಳಗಳಲ್ಲಿ ತಾವರೆದಂಟು ಮಾತ್ರ ಇರುವುದು, ಕೋಗಿಲೆಗ ಳೆಲ್ಲಾ-ಮೀಡಾಕಾರಿಯಾದ ಈ ಹಿಮ ಕಾಲವು ಬೇಗಹೋಗಿ ಸಂತೋಷದಾಯಕ ವಾದ ವಸಂತಕಾಲವು ಒಂದು ವನಗಳೆಲ್ಲಾ ಪಲ್ಲವ ಪುಷ್ಪಭರಿತವಾಗಿ ವಿರಾಜಿಸಲೆಂಬ ಉದ್ದೇಶದಿಂದ ನಿಯಮವನ್ನು ಕೈಕೊಂಡು ಮೌನವ್ರತವನ್ನು ಧರಿಸಿರುವುವೋ ಎಂಬಂತೆ ನಿಶ್ಯಬ್ದವಾಗಿರುವುವು, ಕಾಗೆಗಳೆಲ್ಲಾ ಗೂಡುಗಳಲ್ಲಿರುವ ತಮ್ಮ ಮೊಟ್ಟೆಗಳೊಡನೆ ಸೇರಿದ ಕೋಗಿಲೆಗಳ ಮೊಟ್ಟೆಗಳನ್ನೂ ತಮ್ಮ ಮೊಟ್ಟೆಗಳೇ ಎಂದು ಭಾವಿಸಿ ಕಾವಿಗೋಸ್ಕರ ಅವುಗಳ ಮೇಲೆ ಕುಳಿತು ಪ್ರೀತಿಯಿಂದ ಮರಿಮಾಡುತ್ತಿರುವುವು, ಬಡವರ ಮನೆ ಗಳ ಗೋಡೆಗಳಲ್ಲಿರುವ ತಿಗಣೆಗಳು ತಾವು ಮೊದಲು ಮನುಷ್ಯರ ಮೈಗಳನ್ನು ಕಚ್ಚಿ ರಕ್ತವನ್ನು ಹೀರುತ್ತಿದ್ದಂಥ ದುಸ್ಸಭಾವವನ್ನು ಬಿಟ್ಟು ಪರಹಿಂಸೆಯನ್ನು ಮಾಡದೆ ಮೊದಲ್ನಾಡಿದ ಪಾಪಪರಿಹಾರಾರ್ಥವಾಗಿ ಸಜ್ಜನರಂತೆ ಉಪವಾಸವ್ರತವನ್ನು ಮಾಡು ತಿರುವುವೋ ಎಂಬಂತೆ ಕೃಶವಾಗಿ ಗೋಡೆಗಳಲ್ಲಿ ಹತ್ತಿಕೊಂಡಿರುವುವು. ಸೂರ್ಯನು ಚಂದ್ರನಂತಿರುವನು. ಬಿಸಿಲು ಬೆಳದಿಂಗಳಂತಾಯಿತು, ಮಧ್ಯಾನ್ನ ಕಾಲವು ಸಂಚಾರ ಮಾಡುವವರಿಗೆ ಹರ್ಷಕರವಾಗಿರುವುದು, ರಾತ್ರಿಯಲ್ಲಿ ಚಂದ್ರನು ಹಿಮದಿಂದ ಅಚ್ಚಾ ದಿಸಲ್ಪಟ್ಟವನಾಗಿ ಪ್ರಕಾಶರಹಿತನಾಗಿರುವನು. ಪಡುವಣದಿಕ್ಕಿನಿಂದ ನುಗ್ಗಿ ಬರುವೆ ಶೀತವಾತವು ಹಿಮದೈತ್ಯನ ವಾಹನದಂತಿರುವುದು, ಭೂಮಿಯು ಎಲ್ಲಿ ನೋಡಿದರೂ ಯವೆ ಗೋಧಿ ಮೊದಲಾದ ಧಾನ್ಯಗಳ ಸಸ್ಯಗಳಿಂದ ಕೂಡಿ ಪ್ರಕಾಶಿಸುತ್ತಿರುವುದು. ಚಾಡಿಮಾತನ್ನು ಕೇಳುವ ದೊರೆಯ ಐಶ್ವರ್ಯದಂತೆಯ ಸಮ್ಪುರುಷರ ಬಡತನ ದಂತೆಯ ಹಿಮಂತರ್ತುವಿನ ಹಗಲುಗಳು ಬೇಗ ಮುಗಿದುಹೋಗುತ್ತಿರುವುವು. ಅರಸುಗಳು ಹಗೆಗಳನ್ನು ಜಯಿಸುವುದಕ್ಕಾಗಿ ದಂಡೆತ್ತಿ ಪರಮಂಡಲಗಳಿಗೆ ಹೋಗು