ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಗ್ರೀವಸಖ್ಯದ ಕಥೆ 71 ರಣ ಅಪಾಯಕಾರಿಯಾದ ಶೋಕವನ್ನು ಬಿಟ್ಟು ಸುಗ್ರೀವನ ಸಹಾಯವನ್ನು ಹೊಂದಿ ರಾವಣ ಸಂಹಾರಕ್ಕೆ ಪ್ರಯತ್ನಿಸುವವನಾಗೆಂದು ಲಕ್ಷ್ಮಣನು ಹೇಳಿದ ಮಾತುಗಳನ್ನು ಕೇಳಿ ಧೈರ್ಯವನ್ನು ತಾಳಿ ರಾಮನು ಸಂಪಾತೀರದಲ್ಲಿ ಲಕ್ಷ್ಮಣ ನಿರ್ಮಿತವಾದ ಪರ್ಣಶಾಲೆಯೊಳಗೆ ವಾಸಿಸುತ್ತಿದ್ದನು. 4. RAMA FORMS AN ALLIANCE WITH SUGRIVA, THE MONKEY KING, ೪, ಸುಗ್ರೀವಸಖ್ಯದ ಕಥೆ. ಸುಗ್ರೀವನ ಸ್ನೇಹಾ ಪೇಕ್ಷೆಯಿ೦ದ ಸಂಪಾ ತೀರದಲ್ಲಿ ವಾಸಮಾಡುತ್ತಿದ್ದ ರಾಮನು ಒಂದು ದಿನ ಲಕ್ಷ್ಮಣನನ್ನು ಕುರಿತು--ಎಲೈ, ತಮ್ಮನೇ, ಇತ್ತ ನೋಡು. ಈ ಉದ್ಯಾನವನಲಕ್ಷ್ಮಿಯು ವಸಂತರ್ತುವೆಂಬ ನಿಜಪತಿಯನ್ನು ಆಲಿಂಗಿಸಿಕೊಂಡಿ ರುವಳು. ಜಗದಾಹ್ವಾದಕರನಾದ ಈ ವಸಂತನೆಂಬ ರಾಜನು ಸತ್ಪುರುಷರ ಶೀತೋದಕಸ್ಥಾನಗಳಿಗೆ ತೊಂದರೆಯನ್ನು ಂಟುಮಾಡುತ್ತ ಲಕ್ಷ್ಮಿದೇವಿಗೆ ಮನೆಯಾದ ತಾವರೆಗಳ ಅಂದವನ್ನು ಕೆಡಿಸುತ್ತ ಲೋಕೋಪಕಾರಿಯಾದ ಸೂರ್ಯನ ತೇಜೋ ಒಲವನ್ನು ಕುಂದಿಸಿ ಲೋಕದಲ್ಲಿ ಬಡತನದಿಂದ ಹಾಸಿಗೆ ಹೊದಿಕೆಗಳಿಲ್ಲದ ಜನರನ್ನು ಶೈತ್ಯದಿಂದ ಕೈಶಪಡಿಸುತ್ತ ಸಾಂದ್ರವಾದ ತಮ್ಮ ನೆಳಲುಗಳಿಂದ ಮಾರ್ಗಸ್ಥರ ಶ್ರಮಗಳನ್ನು ಪರಿಹರಿಸುತ್ತಿದ್ದ ವೃಕ್ಷಗಳ ಎಲೆಗಳನ್ನೆಲ್ಲಾ ಉದುರಿಸಿ ಅವುಗಳನ್ನೂ ಪೂರ್ಣ ಶೂನ್ಯಗಳನ್ನಾಗಿ ಮಾಡುತ್ತ ಲೋಕಕಂಟಕನಾಗಿದ್ದ ಹಿಮಂತರ್ತುವೆಂಬ ಅರಸ : ಜಯಿಸಿ ಓಡಿಸಿ ಈ ವನರಾಜ್ಯದಲ್ಲಿ ಪಟ್ಟಾಭಿಷಿಕ್ತನಾದನೋ ಎಂಬ ಹಾಗೆ ಈ ಕಾಲವು ಕಲ್ಯಾಣದಾಯಕವಾಗಿರುವುದು, ಇದೋ, ಇಲ್ಲಿ ನೋಡು ! ಮಲ್ಲಿ ಕಾಕುಸುಮಗಳಲ್ಲಿ ಮಕರಂದಪಾನವನ್ನು ಮಾಡಿ ಮದಿಸಿದ ಶೃಂಗಗಳು ಮಾಡುತ್ತಿರುವ ಝೇಂಕಾರಧ್ವನಿಯು ಲೋಕತ್ರಯ ಜಯೋದ್ಯತನಾದ ಮಾರಮಹಾ ವೀರನ ಜೈತ್ರಯಾತ್ರಾಸೂಚಕವಾದ ಮಹಾಶಂಖಧಾನದಂತಿರುವುದು, ತಮಗೆ ರಕ್ಕೆ ಪುಕ್ಕಗಳು ಬೆಳೆದು ಹಾರುವ ಶಕ್ತಿಯುಂಟಾಗುವ ಪರ್ಯ೦ತರವೂ ಕಾಗೆ ಗಳೊಡನೆ ಸದ್ದು ಮಾಡದೆ ಇದ್ದು ಈಗ ಉಲ್ಲಾಸದಿಂದ ಪಂಚಮಸ್ವರವನ್ನು ಮಾಡು ತಿರುವ ಕೋಗಿಲೆಗಳು ಸಮಯ ಬರುವ ವರೆಗೂ ಗುಟ್ಟಾಗಿದ್ದು ಆ ಮೇಲೆ ತಮ್ಮನ್ನು ತೋರ್ಪಡಿಸಿಕೊಳ್ಳುವ ಕಾರ್ಯಸಾಧಕರಾದ ನಿಯೋಗಿಪುರುಷರನ್ನು ಹೋಲುತ್ತಿರು ವುವು, ಮಾವಿನ ಮರಗಳೆಂಬ ಮೇಘಗಳು ಎಳೆದಳಿರೆಂಬ ಮಿಂಚುಗಳಿಂದಲೂ ಪಿಕಧ್ವನಿ ಯೆಂಬ ಗುಡುಗಿನಿಂದಲೂ ಕೂಡಿ ಹೂವುಗಳೆಂಬ ಆನೆಕಲ್ಲುಗಳನ್ನು ಸುರಿಸುತ್ತ ಮಕ ರಂದರಸವೆಂಬ ದೃಷ್ಟಿಯನ್ನು ಕರೆಯುತ್ತಿರುವುವು, ಎಡೆಯಿಲ್ಲದಂತೆ ತುಂಬಿರುವ ಪುಷ್ಪಗಳಿಂದ ಕೂಡಿದ ಅಶೋಕವೃಕ್ಷಗಳು ಮನ್ಮಥನ ವಿಜಯಪ್ರಯಾಣದಲ್ಲಿ ಹೊಡೆದ ಕೆಂಪುಬಟ್ಟೆ ಯ ಗೂಡಾರಗಳೋ ಎಂಬ ಹಾಗೆ ಪ್ರಕಾಶಿಸುತ್ತಿವೆ. ಪರಿಪಕ್ವವಾದ ಫಲ