ಪುಟ:ಕಥಾ ಸಂಗ್ರಹ - ಭಾಗ ೨.djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


74 ಕಥಾಸಂಗ್ರಹ-೪ ನೆಯ ಭಾಗ ಇನೂ ನಿನ್ನ ಪತ್ನಿ ಯಾದ ಸೀತೆಯ ಸ್ವರ್ಗಮರ್ತ್ಯಪಾತಾಳಗಳೆಂಬ ಮೂರು ಲೋಕ ಗಳೊಳಗೆ ಎಲ್ಲಿದ್ದರೂ ಹುಡುಕಿ ಗೊತ್ತು ಮಾಡಿ ಆ ರಾವಣನ ಸಂಹಾರಕ್ಕೋಸ್ಕರ ಕಪಿಸೇನಾಸಮೇತನಾದ ನಾನು ನಿನಗೆ ಸಹಾಯಿಯಾಗಿರುವೆನೆಂದು ಭಾಷೆ ಕೊಟ್ಟನು. ತರುವಾಯ ಅಗ್ನಿ ಯನ್ನು ಪ್ರತಿಷ್ಠಿಸಿ ಅವರಿಬ್ಬರೂ ಅಗ್ನಿಸಾಕ್ಷಿಯಾಗಿ ಸಖ್ಯವನ್ನು ಮಾಡಿಕೊಂಡು ಒಬ್ಬರ ಕೈಯನ್ನೊಬ್ಬರು ಹಿಡಿದು ಪರಸ್ಪರವಾಗಿ ಆಲಿಂಗನಾದಿಗ ಳಿಂದ ಆನಂದಿಸಿದರು. ಆ ಬಳಿಕ ಸುಗ್ರೀವನು ವಿವಿಧವಾದ ಫಲಗಳಿಂದಲೂ ಗಡ್ಡೆ ಗೆಣಸುಗಳಿಂದಲೂ ಲಕ್ಷ್ಮಣಸಹಿತನಾದ ರಾಮನಿಗೆ ಆತಿಥ್ಯವನ್ನು ಮಾಡಿ ತೃಪ್ತಿ ಪಡಿಸಿದನು. ಆ ಮೇಲೆ ಮೊದಲು ಸೀತೆಯು ತಮ್ಮ ಬಳಿಗೆ ಹಾಕಿದ್ದ ಒಡವೆಗಳನ್ನು ಅವನಿಗೆ ಒಪ್ಪಿಸಿದನು. ಆಗ ರಾಮನು ಪತ್ನಿಯನ್ನು ನೆನಸಿಕೊಂಡು ವಿಶೇಷವಾಗಿ ದುಃಖಿಸಿ ವ್ಯಸನಪಡುತ್ತಿ ರಲು ; ಸುಗ್ರೀವಲಕ್ಷ್ಮಣರು ಆತನನ್ನು ಸಮಾಧಾನಪಡಿಸಿದರು. ತರುವಾಯ ಸುಗ್ರೀವನು ವಾಲಿಯ ಅಮೋಘವಾದ ಪರಾಕ್ರಮವನ್ನು ನೆನದು ರಾಮನಿಗೆ ಆತ ನನ್ನು ಕೊಲ್ಲುವ ಶಕ್ತಿಯುಂಟೋ ? ಇಲ್ಲವೋ ? ಪರೀಕ್ಷಿಸಿ ತಿಳಿಯಬೇಕೆಂದು ಮನ ಸ್ಸಿನಲ್ಲಿ ಯೋಚಿಸಿ ರಾಮನನ್ನು ಕುರಿತು-ಎಲೈ ರಾಜೇಂದ್ರನೇ, ಇದೋ, ಇಲ್ಲಿ ಬಿದ್ದಿರುವ ಈ ಮಳೆಯು ದುಂದುಭಿಯೆಂಬ ರಾಕ್ಷಸನ ಶರೀರಸಂಬಂಧವಾದುದು. ಕಿಂಧೆಯಲ್ಲಿ ವಾಲಿಯು ಅವನನ್ನು ಕೊಂದು ಇಲ್ಲಿಗೆ ಎಡಗೈಯಿಂದ ಬಿಸುಟನು. ಇದೋ, ನೋಡು, ಇಲ್ಲಿ ಕಾಣುವ ಏಳು ಓಲೆಯ ಮರಗಳು ಪಾತಾಳದಿಂದ ಆರಂ ಭಿಸಿ ಮೇಘಮಂಡಲದ ವರೆಗೂ ಬೆಳೆದಿರುವುವು. ಇವುಗಳನ್ನು ಕತ್ತರಿಸುವುದು ವಾಲಿಗೂ ಅಸಾಧ್ಯವು ಎಂದು ಹೇಳಲು ; ರಾಮನು ಸುಗ್ರೀವನ ಮನೋಭಾವವನ್ನು ತಿಳಿದು ಆ ದುಂದುಭಿಯ ಶರೀರದ ಎಲುವನ್ನು ತನ್ನ ಕಾಲಂಗುಟದಿಂದ ಹಾರಿಸಿ ಹತ್ತು ಗಾವುದಗಳ ದೂರದಲ್ಲಿ ಬೀಳಿಸಿ ಆ ಏಳು ಓಲೆಯ ಮರಗಳನ್ನೂ ಒಂದೇ ಬಾಣದಿಂದ ಕತ್ತರಿಸಿ ಕೆಡಹಲು ; ಆಗ ಸುಗ್ರೀವನು ಸಂತೋಷಪಟ್ಟು ನಿಸ್ಸಂಶಯ ಚಿತ್ತನಾದನು, ಆನಂತರದಲ್ಲಿ ರಾಮನು ವಾಲಿಯನ್ನು ಸಂಹರಿಸಿ ಸುಗ್ರೀವನಿಗೆ ಕಪಿ ರಾಜಾಭಿಷೇಕವನ್ನೂ ವಾಲಿಯ ಮಗನಾದ 5೦ಗದನಿಗೆ ಯೌವರಾಜ್ಯಾಭಿಷೇಕ ವನ್ನೂ ಮಾಡಿಸಿ ಸುಗ್ರೀವನನ್ನು ಕುರಿತು-ಎಲೈ ಮಿತ್ರನೇ, ಈಗ ಗ್ರೀಷ್ಮ ತುಣವು ಬಂದಿರುವುದರಿಂದ ನಾವು ದಂಡಯಾತ್ರೆಗೆ ಹೋಗುವುದನ್ನು ನಿಲ್ಲಿಸಿ ಈ ಗ್ರೀಷ್ಟ ರ್ತುವೂ ವರ್ಷತರ್ುವೂ ಕಳೆದು ಹೋಗುವ ವರೆಗೂ ನೀನು ಕಿಮ್ಮಂದಾಪಟ್ಟಣದಲ್ಲಿ ಸುಖ ವಾಗಿರು. ನಾನು ಈ ಋಷ್ಯಮಕಗಿರಿಯಲ್ಲಿ ಲಕ್ಷ್ಮಣನೊಡನೆ ವಾಸಮಾಡಿಕೊಂ ಡಿರುವೆನು, ಈ ನಾಲ್ಕು ತಿಂಗಳುಗಳು ಮುಗಿದ ಮೇಲೆ ದಯೆಯಿಟ್ಟು ನೀನು ಹೇಳಿದ ಪ್ರಕಾರ ನನಗೆ ಸಹಾಯಮಾಡಬೇಕೆಂದು ಹೇಳಲು ; ಸುಗ್ರೀವನು ಶ್ರೀ ರಾಮನಿಗೆ ನಮಸ್ಕರಿಸಿ ತನ್ನ ಪರಿವಾರದೊಡನೆ ಕೂಡಿ ಕಿಟ್ಟಂಧೆಗೆ ಹೋಗಿ ಸುಖದಿಂದಿದ್ದನು. ಇತ್ತಲಾ ರಾಮನು ಋಷ್ಯಮ ಕಾದ್ರಿಯಲ್ಲಿ ಲಕ್ಷ್ಮಣನೊಡನೆ ವಾಸಮಾಡಿ ಕೊಂಡಿರುತ್ತ ಗ್ರಿಷ್ಟ ರ್ತು ಬಂದುದನ್ನು ನೋಡಿ-ಎಲೈ ಲಕ್ಷ್ಮಣನೇ, ಈ ಕಾಲದಲ್ಲಿ