ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಗ್ರೀವಸಖ್ಯದ ಕಥೆ 77 ಲ್ಲದೆ ಆರಂಭದ ಕೆಲಸಗಳನ್ನು ನಡಿಸುತ್ತಿರುವರು. ಸೂರ್ಯಚಂದ್ರರು ಮೋಡಗಳಿಂದ ಮುಚ್ಚಲ್ಪಟ್ಟವರಾಗಿರುವರು. ಒಂದು ವೇಳೆ ಕಾಣಿಸಿದಾಗ್ಯೂ ಚೆನ್ನಾಗಿ ಪ್ರಕಾಶಿಸು ವುದಿಲ್ಲ. ಈ ಮಳೆಗಾಲವು ಐಶ್ವರ್ಯವಂತರಿಗೆ ಬಹಳ ಸುಖದಾಯಕವಾಗಿಯ ಬಡವರಿಗೆ ಬಹಳ ಕಷ್ಟದಾಯಕವಾಗಿಯೂ ಇರುವುದು ಎಂದು ಹೇಳುತ್ತ ಸೀತೆ ಯನ್ನು ನೆನಸಿಕೊಂಡು ಚಿಂತೆಪಡುತ್ತ ಶ್ರಾವಣ ಭಾದ್ರಪದಗಳೆಂಬ ಎರಡು ತಿಂಗಳು ಗಳನ್ನು ಕಳೆಯುತ್ತಿದ್ದನು.

  • ತರುವಾಯ ರಾಮನು ಲಕ್ಷ್ಮಣನನ್ನು ನೋಡಿ-ಎಲೈ ತಮ್ಮನೇ, ನೋಡು ! ಶರತ್ಕಾಲವು ಪ್ರಾಪ್ತವಾಯಿತು. ಆಕಾಶವು ಬಿಳುಪೇರಿತು. ಚ೦ದ್ರನು ಬಹಳ ನಿರ್ಮ ಲತೆಯುಳ್ಳವನಾಗಿರುವನು. ಈ ಶರತ್ಕಾಲದ ರಾತ್ರಿಗಳು ಬೆಳುದಿಂಗಳಿಂದ ಮನೋಹ ರವಾಗಿರುವವು. ಹೊಳೆಗಳೆಲ್ಲಾ ಸ್ವಲ್ಪ ಪ್ರವಾಹವಳ್ಳುವುಗಳಾಗಿ ನಿರ್ಮಲವಾದ ಉದಕ ಗಳಿಂದ ಕೂಡಿರುವುವು, ಅರಸುಗಳು ವಿಜಯಪ್ರಯಾಣಕ್ಕೆ ಸನ್ನದ್ಧರಾಗಿರುತ್ತಿರುವರು. ಇಂಥ ಕಾಲದಲ್ಲಿ ನಮ್ಮ ಪ್ರಿಯಸಖನಾದ ಸುಗ್ರೀವನು ನಮ್ಮನ್ನೂ ನಾವು ಮಾಡಿದ ಉಪಕಾರವನ್ನೂ ಮರೆತು ಹತಶತ್ರುವಾಗಿ ಕಾಮವಿಕಾರವನ್ನು ಹೊಂದಿ ಕಿಂಧೆ ಯಲ್ಲಿ ತಾನು ಮಾತ್ರ ಸುಖವಾಗಿರುತ್ತಿರುವನು. ಈಗಲೇ ನೀನು ಹೋಗಿ ಎಚ್ಚರಿಸು. ಆತನು ಕೃತಜ್ಞನಾಗಿ ನಿನ್ನ ಸಂಗಡ ಬಂದರೆ ಸಮ ; ರಾಜ್ಯ ಮದದಿಂದ ಮತ್ತನಾಗಿದ್ದರೆ ಅವನನ್ನು ಕೊಂದು ವಾಲಿಯ ಮಗನಾದ ಅಂಗದನಿಗೆ ಕಪಿರಾಜ್ಯಾಭಿಷೇಕವನ್ನು ಮಾಡಿ ಸೇನೆಯೊಡನೆ ಅವನನ್ನು ಕರೆದುಕೊಂಡು ಬರುವವನಾಗು ಎಂದು ಹೇಳಿ ಕಳುಹಿಸಿದನು.

ಆಗ ಲಕ್ಷ್ಮಣನು ಅಣ್ಣನ ಅಪ್ಪಣೆಯ ಪ್ರಕಾರ ಧನುರ್ಬಾಣಗಳನ್ನು ತೆಗೆದು ಕೊಂಡು ಕಿಕ್ಕಿಂಧಾಪಟ್ಟಣದ ಹೆಬ್ಬಾಗಿಲಿಗೆ ಹೋಗಿ ನಿಂತು, ಬಿಲ್ಲಿಗೆ ಹೆದೆಯನ್ನು ಏರಿಸಿ ಝೇಂಕಾರವನ್ನು ಕಟುಮಾಡಲು; ಪ್ರಳಯ ಕಾಲದ ಸಿಡಿಲಿಗೆ ಸರಿಯಾದ ಲಕ್ಷ ಣನ ಧನುಷ್ಟಾ೦ಕಾರಧ್ವನಿಯನ್ನು ಕೇಳಿ ಸುಗ್ರೀವನು ಗಡಗಡನೆ ನಡುಗಿ ಹನುಮ ನಳ ನೀಲ ಜಾಂಬವಂತ ಸುಷೇಣ ಇವರೇ ಮೊದಲಾದ ಮಂತ್ರಿಗಳೊಡನೆ ಕೂಡಿ ಬಂದು ಲಕ್ಷ್ಮಣನಿಗೆ ನಮಸ್ಕರಿಸಿ-ಎಲೈ ಲಕ್ಷ್ಮಣನೇ, ಶ್ರೀರಾಮಚಂದ್ರನು ನನಗೆ ಮಾಡಿದ ಉಪಕಾರವನ್ನು ಮರೆತು ಈ ವರೆಗೂ ಕೃತಘ್ನತೆಯಿಂದಿರಲಿಲ್ಲ. ಇದೋ, ಹಿಮಾಲಯ ನಿಷಧ ಗಂಧಮಾದನ ಮೇರು ವಿಂಧ್ಯಾದಿ ಪರ್ವತಗಳಲ್ಲೂ ಸಮುದ್ರಪ್ರಾಂತಗಳ ವನಸ್ಥಳಗಳಲ್ಲೂ ಇದ್ದ ಸರ್ವಕಪಿ ಸೇನಾಪತಿಗಳನ್ನೂ ರಾಮ ಕಾರ್ಯಾರ್ಥವಾಗಿ ಕರಿಸಿದ್ದೇನೆಂದು ಹೇಳಿ ಲಕ್ಷ್ಮಣನಿಗೆ ಸತ್ಕಾರವನ್ನು ಮಾಡಿ ಆತನೊಡನೆ ಕೂಡಿ ಹೊರಟು ರಾಮನ ಬಳಿಗೆ ಬಂದು ಆತನಿಗೆ ನಮಸ್ಕರಿಸಿದನು. ರಾಮನು ಸುಗ್ರೀವ ನನ್ನು ತೆಗೆದಪ್ಪಿ.- ಎಲೈ ಪ್ರಿಯಸಖನೇ, ಮುಂದೆ ಮಾಡಬೇಕಾದ ರಾಜಕಾರ್ಯ ವಿಷಯವಾಗಿ ಯಾವ ಯೋಚನೆಯನ್ನು ಮಾಡಿದ್ದೀಯೆ? ಎಂದು ಕೇಳಲು; ಸುಗ್ರೀವನು ಕೈಗಳನ್ನು ಮುಗಿದು ನಿಂತು ಕೊಂಡು-ಸ್ವಾಮಿಾ, ರಾಜೇಂದ್ರನೇ, ಸಕಲ ಕಪಿಸೇನಾ ನಾಯಕರೂ ತಮ್ಮ ತಮ್ಮ ಸೇನೆಗಳೊಡನೆ ಕೂಡಿ ಸನ್ನದ್ಧರಾಗಿ ಬಂದು ನಿನ್ನ ಅಪ್ಪ