89 ಕಥಾಸಂಗ್ರಹ-೪ ನೆಯ ಭಾಗ ಕೊಳ್ಳಿರೆಂದು ಹೇಳಿದಳು, ಅವರೆಲ್ಲರೂ ಕೂಡಲೆ ಒಬ್ಬೊಬ್ಬರ ಕೈಗಳನ್ನು ಹಿಡಿದು ಕೊಂಡು ಕಣ್ಣುಗಳನ್ನು ಮುಚ್ಚಿಕೊಂಡರು. ಆ ಕ್ಷಣದಲ್ಲಿಯೇ ಅವರೆಲ್ಲರನ್ನೂ ಗುಹೆಯಿಂದ ಹೊರಗೆ ತಂದು ಬಿಟ್ಟು ಆಕೆಯು ಅವರನ್ನು ಕುರಿತು-ಇದೋ, ನೀವೆ ಲ್ಲರೂ ಹೊರಗೆ ಬಂದಿದ್ದೀರಿ ! ಇನ್ನು ಮೇಲೆ ನಿನ್ನೊಡೆಯನ ಅಪ್ಪಣೆಯನ್ನು ಅನುಸರಿಸಿ ನಡೆಯಬಹುದೆಂದು ಹೇಳಿ ಗುಹೆಯನ್ನು ಹೊಕ್ಕಳು. ಅನಂತರದಲ್ಲಿ ಅಂಗದನು ದಿಕ್ಕುಗಳನ್ನು ನೋಡಿ ಶರತ್ಕಾಲವು ಕಳೆದುಹೋಗಿ ಹೈ ಮಂತಕಾಲವು ಬಂದಿರುವುದನ್ನು ತಿಳಿದು ಮಹಾತಂಕಯುಕ್ತನಾಗಿ ಜಾಂಬ ವಂತನೇ ಮೊದಲಾದ ಕಪಿವೀರರನ್ನು ಕುರಿತು-ಇದೋ, ನೋಡಿರಿ, ಸುಗ್ರೀವನು ನೇಮಿಸಿದ ತಿಂಗಳ ಅವಧಿಯ ಮುಗಿದುಹೋಯಿತು. ಸೀತಾರಾವಣರನ್ನೂ ಕಾಣ ಲಿಲ್ಲ, ಈಗ ನಾವು ತಿರಿಗಿ ಕಿಕ್ಕಿಂಧೆಗೆ ಹೋದರೆ ಸುಗ್ರೀವನು ನಮ್ಮನ್ನು ಕಲ್ಲು ಗಾ ಣಗಳಿಗೆ ಹಾಕಿಸಿ ಅರೆಯಿ ಸಿಬಿಡುವನು. ತಿರಿಗಿ ಅವನ ಬಳಿಗೆ ಹೋಗಿ ಅವನಿಂದ ಕೊಲ್ಲಿ ಸಿಕೊಳ್ಳುವುದಕ್ಕಿಂತಲೂ ನಾವೇ ಈ ವಿಂಧ್ಯ ಪರ್ವತದಲ್ಲಿ ಅನ್ನೋದಕಗಳನ್ನು ತೊರೆದು ಪ್ರಾಣಗಳನ್ನು ಬಿಡುವುದೇ ಲೇಸು ಎಂದು ಹೇಳಲು; ಅದಕ್ಕೆ ಕೊಡುಗಳೆಲ್ಲಾ ಒಪ್ಪಿ ಕೂಡಿಬಂದು ಒಂದು ದೊಡ್ಡ ಬಂಡೆಯ ಮೇಲೆ ಕುಳಿತು ನಿರಶನವ್ರತವನ್ನು ಕೈಕೊಂಡುಮೊದಲು ಈ ಸೀತೆಯಿಂದ ವಿರಾಧನೆಂಬ ರಾಕ್ಷಸನೂ ಕಬಂಧನೆಂಬ ನಿಶಾಚರನೂ ಖರದೂಷಣರೇ ಮೊದಲಾದ ಹದಿನಾಲ್ಕು ಸಾವಿರ ಮಂದಿ ರಾತ್ರಿ೦ಚರರು ಜಟಾಯು ವೆಂಬ ಗೃಧ್ರರಾಜನೂ ಈ ಮೊದಲಾದವರೆಲ್ಲರೂ ಹಾಳಾದರು ಈಗ ನಾವೂ ಅವ ರಂತೆ ಈ ಸೀತೆಗಾಗಿ ಪ್ರಾಣಗಳನ್ನು ತೊರೆಯಬೇಕಾಗಿ ಬಂದಿತು ಎಂದು ಮಾತನಾಡಿ ಕೊಳ್ಳುತ್ತಿರಲು; ಅವರ ಸಮೀಪದಲ್ಲಿ ಗರಿಗಳೆಲ್ಲಾ ಸೀಯು ಹೋಗಿ ಬಿದ್ದಿದ್ದ ಸಂಪಾ ತಿಯೆಂಬ ಗೃಧ್ರರಾಜನು ಈ ಕಪಿವೀರರನ್ನು ಕುರಿತು-ನೀವ್ರ ಯಾರಪ್ಪಾ ? ನನ್ನ ತಮ್ಮನಾದ ಜಟಾಯುವು ಸತ್ತನೆಂದು ಹೇಳಿ ನನ್ನ ಮನಸ್ಸಿಗೆ ಬಹಳ ದುಃಖವನ್ನುಂಟು ಮಾಡಿದಿರಿ, ಆತನನ್ನು ಯಾರು ಕೊಂದರಪ್ಪಾ ? ಅದಕ್ಕೆ ನಿಮಿತ್ಯವೇನು ? ಆ ವರ್ತಮಾನವನ್ನೆಲ್ಲಾ ನನಗೆ ವಿವರವಾಗಿ ತಿಳಿಸಿರಿ ಎನ್ನಲು ; ಅಂಗದನು ಆತನನ್ನು ಕುರಿತು ಅಯೋಧ್ಯಾಧಿಪತಿಯಾದ ದಶರಥರಾಜನಿಗೆ ಪುತ್ರನಾದ ರಾಮನು ತಂದೆಯ ಆಜ್ಞಾನುಸಾರವಾಗಿ ದಂಡಕವನದಲ್ಲಿರುತ್ತಿರಲು ; ರಾವಣನೆಂಬವನು ಹಗೆತನದಿಂದ ಆತನ ಪತ್ನಿ ಯಾದ ಸೀತೆಯನ್ನು ಆತನಿಲ್ಲದ ವೇಳೆಯಲ್ಲಿ ಕಳ್ಳತನದಿಂದ ಎತ್ತಿಕೊಂಡು ಹೋಗುತ್ತಿರುವಲ್ಲಿ ನಿನ್ನ ತಮ್ಮನಾದ ಜಟಾಯುವು ಸೀತೆಯನ್ನು ಬಿಡಿಸುವುದಕ್ಕೋಸ್ಕರ ರಾವಣನೊಡನೆ ಜಗಳಕ್ಕೆ ನಿಲ್ಲಲು ; ಅವನು ನಿನ್ನ ತಮ್ಮನನ್ನು ಕೊಂದು ಸೀತೆಯನ್ನು ಎತ್ತಿಕೊಂಡು ಹೋದನೆಂದು ತಿಳಿಸಿ ತಾವು ಆ ಸೀತಾರಾವಣರನ್ನು ಹುಡುಕುವುದಕ್ಕೆ ಬಂದ ಸುದ್ದಿಯನ್ನು ಆಮೂಲಾಗ್ರವಾಗಿ ತಿಳಿಸಿದರು. ಆಗ ಸಂಪಾತಿಯು-ಎಲೈ ಕಪಿನಾಯಕರೇ, ಆ ರಾಮನು ನನ್ನ ಮಿತ್ರನ ಮಗನು. ಅದು ಕಾರಣ ನಾನು ನಿಮಗೆ ಸಹಾಯಮಾಡುವೆನು, ಪೂರ್ವದಲ್ಲಿ ನಾನೂ ನನ್ನ ತಮ್ಮನಾದ ಜಟಾಯುವೂ ನಮ್ಮ ನಮ್ಮ ಶಕ್ತಿಗಳನ್ನು ಪರೀಕ್ಷಿಸಿಕೊಳ್ಳುವುದ
ಪುಟ:ಕಥಾ ಸಂಗ್ರಹ - ಭಾಗ ೨.djvu/೯೦
ಗೋಚರ