ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾ ಪಟ್ಟಣವನ್ನು ಸುಟ್ಟು ದು 81 ಕ್ರೋಸ್ಕರ ಹಟವನ್ನು ಮಾಡಿಕೊಂಡು ನಾವಿಬ್ಬರೂ ಸೂರ್ಯಮಂಡಲದ ವರೆಗೂ ಹಾರಿಹೋಗಲು ; ಆಗ ನಾನು ಸೂರ್ಯಕಿರಣಗಳ ಉಷ್ಣಾತಿಶಯದಿಂದ ಸಂಕಟಪ ಡುತ್ತಿರುವ ನನ್ನ ತಮ್ಮನಿಗೆ ನನ್ನ ಗರಿಗಳನ್ನು ಮರೆಮಾಡಲು ; ಆತನು ಗರಿಗಳಿಂದ ಕಡಿ ಜನಸ್ಥಾನದಲ್ಲಿ ಬಿದ್ದು ಜೀವಿಸಿಕೊಂಡಿದ್ದನು. ನಾನು ಉದುಹೋದ ಗರಿಗಳು ಧೃವನಾಗಿ ಇಲ್ಲಿ ಬಿದ್ದೆನು, ನಿಶಾಕರನೆಂಬೊಬ್ಬ ಮಹಾಮುನಿಯು ನನ್ನನ್ನು ನೋಡಿ ದಯೆಯುಳ್ಳವನಾಗಿ--ಮುಂದೆ ಇಲ್ಲಿಗೆ ರಾಮನ ಕಾರ್ಯಾರ್ಥವಾಗಿ ಕಪಿಸೇನಾನಾ ಯಕರು ಬರುವರು ; ನೀನು ಅವರಿಗೆ ಸೀತಾರಾವಣರಿರುವ ಸ್ಥಳವನ್ನು ತಿಳಿಸಿ ಸಹಾಯ ಮಾಡಿದರೆ ನಿನ್ನ ಗರಿಗಳು ತಿರಿಗಿ ಹುಟ್ಟುವುವು ಎಂದು ವರವನ್ನು ಕೊಟ್ಟಿದ್ದನು. ಅದು ಕಾರಣ ಇದೋ ನೋಡಿ ! ಈ ದಕ್ಷಿಣ ಸಮುದ್ರದ ಆಚೆ ಶತಯೋಜನ ದೂರ ದಲ್ಲಿ ತ್ರಿಕೂಟವೆಂಬ ಪರ್ವತದ ಶಿಖರದ ಮೇಲೆ ಲಂಕೆಯೆಂಬುದೊಂದು ಪಟ್ಟಣವಿರುವು ದು, ಅದೇ ದುಷ್ಟನಾದ ರಾವಣನ ವಾಸಸ್ಥಾನವು, ಅವನ ಅಂತಃಪರೋದ್ಯಾನದಲ್ಲಿ ರಾಕ್ಷಸಿಯರ ಕಾವಲಿನಿಂದ ಸೀತೆ ಇರುವಳು. ನಮ್ಮದು ಪಕ್ಷಿ ಜಾತಿಯಾದುದರಿಂದ ನಮ್ಮ ದೃಷ್ಟಿ ಯು ಬಹುದೂರದ ವರೆಗೂ ಪ್ರಸರಿಸುವುದು, ಇದೋ, ಸೀತೆಯು ನನಗೆ ಕಾಣುತ್ತಾಳೆ ! ನೀವು ಸಮುದ್ರವನ್ನು ದಾಟಿ ಲಂಕೆಗೆ ಹೋದರೆ ಸೀತೆಯನ್ನೂ ರಾವಣನನ್ನೂ ಕಾಣುವಿರಿ. ಇದೋ ನನ್ನ ರಕ್ಷೆಗಳು ಹುಟ್ಟಿ ಬೆಳೆಯುತ್ತಿವೆ, ನೋಡಿರಿ ! ಎಂದು ತೋರಿಸಿದನು. ಕಪಿಸೇನಾವತಿಗಳು ಆ ಮಾತುಗಳನ್ನು ಕೇಳಿ ನಿಧಿಯನ್ನು ಕಂಡ ದರಿದ್ರರಂತೆ ಯ ಚಂದ್ರನನ್ನು ಕಂಡ ಚಕೋರಗಳಂತೆಯ ವರ್ಷತರ್ುವನ್ನು ಕಂಡ ನವಿಲುಗ ಳಂತೆಯ ಮುಂಗಾರು ಹನಿಗಳನ್ನು ಕಂಡ ಚಾತಕ ಪಕ್ಷಿ ಗಳಂತೆಯ ಸಂತೋಷ ಪಟ್ಟು ಎಲ್ಲರೂ ಬಂಡೆಯ ಮೇಲಣಿಂದೆದ್ದು ಹೊರಟು ಸಮುದ್ರತೀರಪ್ರದೇಶವನ್ನು ಸೇರಿದರು. 5. ANJANEYA DISCOVERS SITE AND BURNS THE CITY OE LANKA, ೫, ಆಂಜನೇಯನು ಸೀತೆಯನ್ನು ಕಂಡು ಲ೦ಕಾಪಟ್ಟಣವನ್ನು ಸುಟ್ಟುದು. ಅನಂತರದಲ್ಲಿ ಕಪಿಸೇನಾಪತಿಗಳಾದ ಜಾಂಬವದಂಗದಾಂಜನೇಯಾದಿಗಳು ಫೋರತರವಾದ ತೆರೆಗಳ ಆರ್ಭಟದಿಂದ ಕೂಡಿ ಒಪ್ಪುತ್ತಿರುವ ಮಹಾ ಸಾಗರವನ್ನು ನೋಡಿ ವ್ಯಾಕುಲಚಿತ್ತರಾಗಿ ಇದನ್ನು ದಾಟುವುದೂ ಲಂಕೆಯನ್ನು ಸೇರುವುದೂ ಸೀತಾರಾವಣರನ್ನು ಕಂಡು ಹಿಂದಿರುಗಿ ಬರುವುದೂ ಹೇಗೆ ? ಎಂದು ಕರತಲಗಳಲ್ಲಿ ಕೆನ್ನೆಗಳನ್ನಿಟ್ಟುಕೊಂಡು ಕಂಗೆಟ್ಟು ಮುಂಗಾಣದೆ ಕುಳಿತುಕೊಂಡಿರಲು ; ಆಗ. ಜಾಂಬವಂತನು ಸಮಸ್ತ ಕಪಿಗಳನ್ನೂ ನೋಡಿ-ಎಲೈ ಕಪಿವೀರರೇ, ದೇವತೆಗಳಿಂ ದಲೂ ದಾಟಲಶಕ್ಯವಾದ ಈ ಸಮುದ್ರವನ್ನು ದಾಟಿ ಹಿಂದಿರುಗಿ ಬರುವಂಥ ಶೂರರು