ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ಕಥಾಸಂಗ್ರಹ-೪ ನೆಯ ಭಾಗ ಈ ನಮ್ಮ ಕಪಿಸೇನೆಯೊಳಗೆ ಯಾರಿದ್ದಾರೆ ? ಎಂದು ಕೇಳಲು ; ಆಗ ಯುವರಾ ಜನಾದ ಅಂಗದನೆಕ್ಕುಸ್ವಾಮಿ, ಶಿವನಂತಿರುವ ನಿಮ್ಮ ಅನುಗ್ರಹವೂ ನಮಗಿ ರುವಲ್ಲಿ ಈ ಸಮುದ್ರವನ್ನು ದಾಟುವುದು ಎಷ್ಟರ ಕೆಲಸ ? ನಮ್ಮ ಸೇನೆಯೊಳಗೆ ಈ ಸಮುದ್ರವನ್ನೆಲ್ಲಾ ಒಂದೇ ಸಾರಿ ಕುಡಿದು ಬಿಡುವಂಥ ಮಹಾ ಭಟರಿದ್ದಾರೆ ಎಂದು ಹೇಳಿ ಕಪಿಗಳ ಮುಖಗಳನ್ನು ನೋಡಲು; ಕೂಡಲೆ ಕಪಿಗಳೆಲ್ಲಾ ಎದ್ದು ಭುಜಗಳನ್ನು ಅಪ್ಪಳಿಸಿಕೊಂಡು ಹಲ್ಕಿರಿದು ಆರ್ಭಟಿಸಲು; ಚಾಂಬವಂತನು-ಹೋ ! ಹೋ ! ಸಹಿ ಸಿರಿ ! ಲೋಕತ್ರಯದಲ್ಲಿಯೂ ನಿಮ್ಮಂಥ ವೀರರಿಲ್ಲ ! ಆದರೆ ಸಮುದ್ರವನ್ನು ದಾಟಿ ಲಂಕೆಗೆ ಹೋಗಿ ಬರಬೇಕಾದರೆ ನಾನಾವಿಧೋಪಾಯಗಳನ್ನು ಮಾಡಬೇಕು. ಅಲ್ಲದೆ ಜಾನಕಿಯನ್ನು ಕಂಡು ಬರಬೇಕು, ನಿಮ್ಮಲ್ಲಿ ಇಷ್ಟು ಸಾಮರ್ಥ್ಯವು ಯಾರಿ ಗುಂಟು ? ಎ ದು ಕೇಳಲು ; ಆಗ ಕಪಿವೀರರೆಲ್ಲಾ ಒಟ್ಟಾಗಿ ಎದ್ದು ನಿಂತು--ತಮ್ಮ ತಮ್ಮ ಸಾಮರ್ಥ್ಯವನ್ನೆಲ್ಲಾ ಹೇಳಿಕೊಳ್ಳಲು ; ಜಾಂಬವಂತನು--ನಾನು ಯೌವನಸ್ಥ ನಾಗಿದ್ದ ಕಾಲದಲ್ಲಿ ನನಗೆ ಈ ಕಾರ್ಯವು ಲಕ್ಷ್ಮವಾಗಿರಲಿಲ್ಲ. ಈಗ ಸಂಪೂರ್ಣ ವೃದ್ಧನಾಗಿದ್ದೇನೆ. ಆದರೂ ಈಗ ಶತಯೋಜನದೂರವನ್ನು ಹಾರಬಲ್ಲೆನು ; ಪುನಃ ನೂರು ಯೋಜನವನ್ನು ಹಾರಿ ಬರುವುದಕ್ಕೆ ಶಕ್ತಿಯುಂಟಾಗುವುದೋ ಇಲ್ಲವೋ ಎಂದು ಸಂದೇಹವುಳ್ಳವನಾಗಿದ್ದೇನೆ ಎನ್ನಲು'; ಆಗ ಅಂಗದನು ನೀವೆಲ್ಲರೂ ನೋಡುತ್ತ ಇಲ್ಲಿದ್ದರೆ ನಾನು ಈ ನೂರು ಯೋಜನ ದೂರವನ್ನೂ ದಾಟಿಹೋಗಿ ಸೀತಾರಾವಣರನ್ನು ಕಂಡು ತಿರುಗಿ ಬರುವೆನೆಂದು ಹೇಳಿ ದುದಕ್ಕೆ ಜಾಂಬವಂತನು--ನಾವೆಲ್ಲರೂ ಇದ್ದುಕೊಂಡು ದೊರೆಯ ಮಗನಾಗಿ ಯುವರಾಜನಾದ ನಿನ್ನೊಬ್ಬನನ್ನೇ ಹಗೆಯ ಪಟ್ಟಣಕ್ಕೆ ಕಳುಹಿಸುವುದು ಧರ್ಮವ ಇವು, ಮತ್ತು ರಾಮಚಂದ್ರನೂ ಸುಗ್ರೀವನೂ ಈ ಕಾರ್ಯವನ್ನು ಒಪ್ಪಲಾರರು ಎಂದು ಎಲ್ಲರನ್ನೂ ಸಮಾಧಾನಪಡಿಸಿ ಬುದ್ಧಿ ಶಕ್ತಿ ಪರಾಕ್ರಮಾದಿಗಳಲ್ಲಿ ಪ್ರಖ್ಯಾತ ನಾದ ಹನುಮಂತನನ್ನು ನೋಡಿ-ಎಲೈ ಮಹಾನುಭಾವನೇ, ಇಂಥ ವೇಳೆಯಲ್ಲಿ ನೀನು ಒಂದು ಮಾತನ್ನಾ ದರೂ ಆಡದೆ ಯಾಕೆ ಮೌನದಿಂದಿದ್ದೀಯ ? ಈ ಸಮಯ ದಲ್ಲಿ ಮಹಾವೀರನಾದ ನೀನು ಮನಸ್ಸು ಮಾಡಿದರೆ ಇದೆಷ್ಟರ ಕೆಲಸ ? ನಿನ್ನಿಂದ ನಾವೆಲ್ಲ ರೂ ತಿರಿಗಿ ಸುಗ್ರಿವರಾಮರ ಸನ್ನಿಧಿಗೆ ಹೋಗಿ ನಮ್ಮ ಹೆಂಡಿರು ಮಕ್ಕಳು ಗಳ ಮೋರೆಗಳನ್ನು ನೋಡುವೆವು, ಅಲ್ಲದೆ ನನ್ನೊಡೆಯನಾದ ಸುಗ್ರೀವನು ಕೃತಕ್ಕ ತ್ಯನಾಗುವನು. ರಾಮನು ದುರ್ಮಾರ್ಗಪ್ರವರ್ತಕನಾದ ರಾವಣನನ್ನು ಕೊಂದು ಸೀತೆಯನ್ನು ಹೊಂದಿ ಸಂತೋಷಿಸುವನು, ಈ ಭಾಗದಲ್ಲಿ ನೀನು ಉದಾಸೀನಮಾಡಿ ದರೆ ರಾಮಲಕ್ಷ್ಮಣರೂ ಸುಗ್ರೀವನೂ ನಾವೂ ಪ್ರಾಣಗಳನ್ನು ಬಿಡುವುದು ನಿಶ್ಚಯ. ಅದು ಕಾರಣ ನೀನು ಧೈರ್ಯದಿಂದ ಈ ಕೆಲಸವನ್ನು ನಿರ್ವಹಿಸಬೇಕೆಂದು ಬೇಡಿಕೆ ಳ್ಳಲು ; ಆಗ ಹನುಮಂತನು ಉತ್ಸಾಹಸಂಪನ್ನನಾಗಿ ಆ೦ಗದ ಜಾಂಬವಂತ ಇವರೇ ಮೊದಲಾದವರೆಲ್ಲರನ್ನೂ ಸಮಾಧಾನಪಡಿಸಿ ಕಪಿಸೇನೆಗಳೊಡನೆ ಕೂಡಿ ಸಮುದ್ರದ ದಡದಲ್ಲಿರುವ ಮಹೇಂದ್ರಪರ್ವತದ ಮೇಲಕ್ಕೆ ಹತ್ತಿ ಅಲ್ಲಿಂದ ಆಕಾಶಮಾರ್ಗಕ್ಕೆ