ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 89 ಅವರು ಬಂದು ಸೀತೆಯ ಮುಂದೆ ನಿಂತುಕೊಂಡು ಹಿತವಚನಗಳನ್ನಾಡಿ ಪರಿಮಳ ತೈಲವನ್ನು ತಂದು ಹೊಳೆಯುತ್ತಿರುವ ಶುದ್ದ ವಸ್ತ್ರಗಳನ್ನು ನೆರಿಹಿಡಿದಿಟ್ಟು ಚಿನ್ನದ ಗುಡಾಣಗಳಲ್ಲಿ ಬಿಸಿನೀರನ್ನು ತಂದಿರಿಸಿ ದಿವ್ಯಸುಗಂಧದ್ರವ್ಯಗಳನ್ನರೆದಿಟ್ಟು ಸೀತೆಯನ್ನು ನೋಡಿ-ಎಲೈ ಸೀತೆಯೇ, ನೀನು ಮೂರು ಲೋಕಗಳಿಗೂ ಗಂಡನಾದ ರಾವಣನ ಮಾತುಗಳನ್ನು ಮಾರಬಹುದೇ ? ದೇವತಾಸ್ತ್ರೀಯರು ಶತಜನ್ಮಗಳಲ್ಲಿ ಸದ್ಯತಗಳನ್ನು ಮಾಡಿ ಈ ರಾವಣನನ್ನು ವರಿಸುತ್ತಿರುವರಲ್ಲಾ ! ಮೂರು ಲೋಕಗಳಲ್ಲಿಯ ಈ ರಾವಣನಿಗೆ ಸಮಾನರಾದ ಪುರುಷಶ್ರೇಷ್ಟರುಂಟೇ ? ಹದಿನಾಲ್ಕು ಲೋಕಗಳ ಒಡೆತ ನವು ಈತನ ವಶದಲ್ಲಿದೆ. ನೀನು ಇಂಥ ಮಹಾತ್ಯ ನಾದ ರಾವಣನನ್ನು ಅನುಭವಿಸದೆ ಇರಬಹುದೇ ? ದೆವಿಯೇ ಎಂದು ಮಾತನಾಡಿಸುತ್ತಿರುವ ರಾಕ್ಷಸಿಯರ ಮಾತಿಗೆ ಕಿವಿಗೊಡದೆ ಸೀತೆಯು ಒಬ್ಬರನ್ನೂ ಕಣ್ಣಿನಿಂದ ನೋಡದೆ ಹೃದಯದಲ್ಲಿ ರಾಮನನ್ನೇ ಧ್ಯಾನಿಸುತ್ತ ಸುಮ್ಮನಿರಲು ; ರಾವಣನು ತ್ರಿಜಟೆಯನ್ನು ಕರೆದು-ಎಲೈ ತ್ರಿಜಟೆಯೇ ಸೀತೆಯ ಮನಸ್ಸಿನ ನಿಶ್ಚಯವು ಹೇಗಿರುವುದು ? ನರರಾಜರನ್ನು ಮರೆತು ಬಿಟ್ಟಳೋ ಏನು ? ಎಂದು ಕೇಳಲು ; ಆಗ ತ್ರಿಜಟೆಯು ರಾವಣನ ಕಿವಿಯಲ್ಲಿಎಲೈ ರಾಜೇಂದ್ರನೇ, ಕೇಳು, ನಾನು ಜಾನಕಿಯ ಮನೋನಿಶ್ವಯವನ್ನು ಕುರಿತು ಏನೂ ಹೇಳಲಾರೆನು. ಈ ಸೀತೆಯು ಜಗತ್ತಿನಲ್ಲಿರುವ ಪತಿಭಕ್ಕೆ ಯರಿಗೆಲ್ಲಾ ತಾಯಿಯು. ಲೋಕದ ಪತಿವ್ರತಾ ಜನರಿಗೆಲ್ಲಾ ಗುರುಪ್ರಾಯಳು, ನಾನು ಲೋಕದಲ್ಲಿ ಬಹು ಜನ ರನ್ನು ನೋಡಿದ್ದೇನೆ. ಧ್ರುವ ವಶಿಷ್ಟ ಅತ್ರಿ ಗೌತಮ ಇವರು ಮೊದಲಾದ ಮುನೀಂದ್ರರ ಪತ್ನಿಯರು ಯಾವ ಭಾಗದಲ್ಲೂ ಈ ಸೀತೆಯನ್ನು ಹೋಲಲಾರರು. ಈಕೆಯು ನಿರಂತರದಲ್ಲೂ ರ್ಭಚಿಂತಾಪರಾಯಣಳಾಗಿರುವಳು, ನಾವು ನಮ್ಮ ಬುದ್ದಿಗೆ ತೋರಿದ ಹಾಗೆಲ್ಲಾ ಹೇಳಿ ನೋಡಿ ಸಾಕಾದೆವ, ಬಹು ಪ್ರಕಾರವಾಗಿ ಬೆದರಿಸಿದೆವು. ಯಾವುದಕ್ಕೂ ಸಾಧ್ಯಳಾಗಳು, ಇನ್ನೂ ಬೇಕಾದರೆ ನೀನೇ ಹೋಗಿ ಮಾತಾಡಿಸಿ ನೋಡು ಎಂದು ಹೇಳಲು ; ರಾವಣನು ಬಂದು--ಎಲೈ ಸೀತೆಯೇ, ಇನ್ನೆಷ್ಟು ದಿವಸಗಳ ವರೆಗೂ ಈ ವನದಲ್ಲಿರುತ್ತೀಯೆ ? ನಿನ್ನ ಮನಸ್ಸು ಇನ್ನಾರಲ್ಲಿ ಅನುರಾ ಗವನ್ನು ಸಂಪಾದಿಸುವುದು ? ಎಲೈ ಸೀತೆಯೇ, ನಿನಗೆ ಹುಚ್ಚು ಹಿಡಿದಿತು, ನಿನ್ನನ್ನು ಇಲ್ಲಿಂದ ಬಿಡಿಸಿಕೊಂಡು ಹೋಗಬೇಕಾದರೆ ಮುಕ್ಕಣ್ಣನಿಗಾದರೂ ಸಾಮರ್ಥ್ಯ ಸಾಲದು. ಹರಿ ಹರ ಬ್ರಹ್ಮಾದಿಗಳನ್ನು ಒಕ್ಕಲಿಕ್ಕುವ ಸಾಮರ್ಥ್ಯವು ನನ್ನಲ್ಲಿದೆಯೋ ಇಲ್ಲ ವೋ ಚೆನ್ನಾಗಿ ಯೋಚಿಸಿ ನೋಡು, ಈ ಹದಿನಾಲ್ಕು ಲಕ್ಷ ಜನ ಸ್ತ್ರೀಯರ ಸಂಪತ್ತಿಗೆ ನೀನೇ ನಾಯಕಿಯಾಗಿ ಪಟ್ಟದರಸಿಯಾಗಿರು, ಇನ್ನು ಮೇಲಾದರೂ ಹೆಡ್ಡತನವನ್ನು ಬಿಟ್ಟು ಮನೆಗೆ ಬಾ! ದೇವತೆಗಳೆಲ್ಲಾ ನಿನಗೆ ಸೇವಕರಾಗುವರು, ದೇವ ಮುನಿಗಳಾದ ತುಂಬುರ ನಾರದಾದಿಗಳು ನಿನ್ನ ಗಾಯಕರಾಗುವರು, ದೇವತಾ ಸ್ತ್ರೀಯರು ನಿನಗೆ ದಾಸಿಯರಾಗುವರು. ಎಲೈ ಸೀತೆಯೇ, ತ್ರಿಲೋಕದಲ್ಲಿ ಯಾರೂ ನನಗೆ ಸರಿಯಿಲ್ಲ, ನಾನು ಚತುರ್ದಶಭುವನಗಳ ಒಡೆಯನೆಂಬುದನ್ನು ನೀನರಿಯೆಯಾ? ಬ