ವಿಷಯಕ್ಕೆ ಹೋಗು

ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
xii


ಈ ಗ್ರಂಥವನ್ನು ಜಯಂತ್ಯುತ್ಸವದ ಮುಕ್ತಾಯ ಸಮಾರಂಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿ, ತ್ವರಿತವಾಗಿ ಮುದ್ರಣ ಕಾರ್ಯವನ್ನು ಕೈಗೊಳ್ಳಲಾಗಿದೆ, ಈ ಕಾರ್ಯದಲ್ಲಿ ನಮ್ಮೊಡನೆ ಸಹಕರಿಸಿದ ಸಂಪಾದಕ ಮಂಡಳಿಯವರಿಗೆ ಹಾಗೂ ಲೇಖಕರಿಗೆ ನನ್ನ ಕೃತಜ್ಞತೆಗಳು. ಅತ್ಯಂತ ಶೀಘ್ರವಾಗಿ ಹಾಗೂ ಅಚ್ಚುಕಟ್ಟಾಗಿ ಮುದ್ರಿಸಿ ಕೊಟ್ಟಿರುವ ಶ್ರೀ ಮೀರಾ ಪ್ರಿಂಟರ್‌ನ ಶ್ರೀ ಕೆ. ಪಿ. ಪುಟ್ಟಸ್ವಾಮಿ ಅವರಿಗೆ ನನ್ನ ಕೃತಜ್ಞತೆಗಳು.

ಸದ್ಯದಲ್ಲಿಯೇ ಕನಕದಾಸರ ಸಮಗ್ರ ಕೃತಿಗಳ ಸಂಕಲನವನ್ನು ಪ್ರಕಟಿಸಲು ಕ್ರಮಕೈಗೊಳ್ಳುತ್ತಿದೆ. ಈ ಗ್ರಂಥ ಕನಕದಾಸರ ಸಾಹಿತ್ಯ-ಜೀವನ ಸಂದೇಶವನ್ನು ಸಹೃದಯವಾಚಕರಿಗೆ ತಲುಪಿಸಿದರೆ ನಮ್ಮ ಶ್ರಮ ಸಾರ್ಥಕ.

೭.೩.೧೯೯೦
ಐ.ಎಂ. ವಿಠಲಮೂರ್ತಿ
ಬೆಂಗಳೂರು
ನಿರ್ದೆಶಕರು